Caste survey crime: ಶಿವಮೊಗ್ಗದ ಆಜಾದ್ ನಗರದಲ್ಲಿ, ಜಾತಿ ಸಮೀಕ್ಷೆಯ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ಬಂದ ದಂಪತಿಗಳು ದರೋಡೆಗೆ ಯತ್ನಿಸಿದ್ದಾರೆ. ಸ್ಥಳೀಯರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲ್ಪಟ್ಟ ಆರೋಪಿಗಳು, ಸಂತ್ರಸ್ತೆಯ ಸಂಬಂಧಿಕರೇ ಆಗಿದ್ದು, ಅವರ ಬ್ಯಾಗ್‌ನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಶಿವಮೊಗ್ಗ (ಅ.3): ಜಾತಿ ಸಮೀಕ್ಷೆ ಹೆಸರಲ್ಲಿ ದಂಪತಿಗಳಿಬ್ಬರು ಒಂಟಿ ಮಹಿಳೆಯ ಮನೆಗೆ ಬಂದು ದರೋಡೆಗೆ ಯತ್ನಿಸಿದ ಘಟನೆ ಶಿವಮೊಗ್ಗದ ಆಜಾದ್ ನಗರದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯ ಆಜಾದ್ ನಗರ ನಿವಾಸಿ ಮಹಿಳೆ ದಿಲ್ ಶಾದ್, ಹಲ್ಲೆಗೊಳಗಾದ ಮಹಿಳೆ. ತಸ್ಲಿಮಾ ಹಾಗೂ ಅಸ್ಲಾಂ ಇಬ್ಬರು ಮಹಿಳೆಯ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ದಂಪತಿಗಳು. ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸೀರೋಡಾ ಸಮುದ್ರದಲ್ಲಿ ಘನಘೋರ ದುರಂತ: ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿ, ನಾಲ್ವರು ಕಣ್ಮರೆ!
ತಸ್ಲಿಮಾ ಬ್ಯಾಗ್‌ನಲ್ಲಿ ಚಾಕು ಡ್ರಿಲ್ಲಿಂಗ್ ಮಶಿನ್ ಪತ್ತೆ!
ಜಾತಿ ಗಣತಿ ನಡೆಸಲು ತಸ್ಲಿಮಾ ಶಿಕ್ಷಕಿ ಅಲ್ಲವೆಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಖಚಿತಗೊಂಡಿದೆ. ಜಾತಿ ಗಣತಿ ಮಾಡುವುದಾಗಿ ಮಹಿಳೆಯ ಮನೆಗೆ ನುಗ್ಗಿದ್ದ ತಸ್ಲಿಮಾ. ಜೊತೆಗೆ ತಂದಿದ್ದ ಬ್ಯಾಗ್‌ನಲ್ಲಿ ಚಾಕು, ಡ್ರಿಲ್ಲಿಂಗ್ ಮಿಷನ್ ಮೊದಲಾದ ಮಾರಕಾಸ್ತ್ರಗಳು ಪತ್ತೆಯಾಗಿವೆ. ದರೋಡೆಗೆ ಮೊದಲೇ ಸ್ಕೆಚ್ ಹಾಕಿ ಬಂದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ತಸ್ಲೀಮಾ ಮತ್ತು ದಿಲ್ ಶಾದ್ ಕುಟುಂಬಸ್ಥರು ಪರಿಚಯಸ್ಥರೇ ಆಗಿದ್ದು ದೂರದ ಸಂಬಂಧಿಕರು ಆಗಿದ್ದಾರೆ ಎಂದು ಹೇಳಲಾಗಿದೆ. ಆದರೆ ತಸ್ಲಿಮಾ ತಾನು ಯಾವುದೇ ಜಾತಿ ಜನಗಣತಿ ಸಮೀಕ್ಷೆಗೆ ಹೋಗಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ದಿಲ್ ಶಾದ್ ಮಾತ್ರ 'ಆಕೆ ಮೂರು ಬಾರಿ ಜಾತಿ ಜನಗಣತಿ ಸಮೀಕ್ಷೆ ಗಾಗಿ ಬಂದಿದ್ದು ಇದೀಗ ನಾನೊಬ್ಬಳೇ ಇರುವುದನ್ನು ನೋಡಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಳು ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ: Hiriyur road accident: ಚಿತ್ರದುರ್ಗ ಬಳಿ ಕಾರು ಪಲ್ಟಿ, ಯಾದಗಿರಿ ಮೂಲದ ಮಗು ಸೇರಿ ಮೂವರು ದಾರುಣ ಸಾವು!
ಸದ್ಯ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ದೂರು ದಾಖಲಿಸಿ ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ಜಾತಿ ಜನಗಣತಿಯ ಸಮೀಕ್ಷೆ ಬಂದಿದ್ಯಾಕೆ ಎಂದು ಪೊಲೀಸರ ತನಿಖೆಯಿಂದ ಬಯಲಾಗ ಬೇಕಿದೆ.
