Tumakuru INOX technical glitch: ತುಮಕೂರಿನ ಎಸ್ ಮಾಲ್ ಐನಾಕ್ಸ್‌ನಲ್ಲಿ 'ಕಾಂತಾರ' ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರದರ್ಶನ ರದ್ದುಗೊಳಿಸಲು ಮುಂದಾದಾಗ ಪ್ರೇಕ್ಷಕರು ರೊಚ್ಚಿಗೆದ್ದರು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಸಿಬ್ಬಂದಿ, ಒಂದೂವರೆ ಗಂಟೆ ಬಳಿಕ ಸಿನಿಮಾ ಪ್ರದರ್ಶಿಸಿದರು.
ತುಮಕೂರು (ಅ.3): ಕಾಂತಾರ ಸಿನಿಮಾ ವೀಕ್ಷಣೆ ವೇಳೆ ತಾಂತ್ರಿಕದೋಷದಿಂದ ಸಿನಿಮಾ ಪ್ರದರ್ಶನ ರದ್ದುಗೊಂಡ ಹಿನ್ನೆಲೆ ಪ್ರೇಕ್ಷಕರು ರೊಚ್ಚಿಗೆದ್ದ ಘಟನೆ ತುಮಕೂರಿನ ಎಸ್ ಮಾಲ್ ಐನಾಕ್ಸ್‌ನಲ್ಲಿ ನಡೆಯಿತು.
ಐನಾಕ್ಸ್‌ನ ಸ್ಕ್ರೀನ್ 1 ರಲ್ಲಿ ಕಂಡುಬಂದ ತಾಂತ್ರಿಕ ತೊಂದರೆಯಿಂದ ಸಿನಿಮಾ ಪ್ರದರ್ಶನ ಸ್ಥಗಿತಗೊಂಡಿತು.
ಹೀಗಾಗಿ ಐನಾಕ್ಸ್ ಸಿಬ್ಬಂದಿ ಶೋ ಕ್ಯಾನ್ಸಲ್ ಮಾಡಲು ಮುಂದಾದರು. ಅಲ್ಲದೇ ಪ್ರೇಕ್ಷಕರಿಗೆ ಹಣ ವಾಪಸ್ ಮಾಡುವುದಾಗಿ ಘೋಷಿಸಿತು. ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಸಿನಿಮಾ ಪ್ರದರ್ಶನ ಮಾಡುವಂತೆ ಪಟ್ಟು ಹಿಡಿದರು. ಸಿನಿಮಾ ವೀಕ್ಷಣೆಗೆಂದು ಮುಂಗಡ ಬುಕ್ ಮಾಡಿ ಕೆಲಸ ಕಾರ್ಯ ಬಿಟ್ಟು ಬಂದಿದ್ದೇವೆ. ಹಣ ವಾಪಸ್ ವಾಪಸ್ ಕೊಟ್ಟರೆ ಹೇಗೆ ಸಿನಿಮಾ ನೋಡಲೇಬೇಕು, ಪ್ರದರ್ಶಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪ್ರೇಕ್ಷಕರ ಒತ್ತಾಯಕ್ಕೆ ಪ್ರದರ್ಶನ ನೀಡಲು ಒಪ್ಪಿಕೊಂಡ ಸಿಬ್ಬಂದಿ. ತಾಂತ್ರಿಕದೋಷ ನಿವಾರಣೆಗೆ ಸಿಬ್ಬಂದಿ ಸಮಯ ತೆಗೆದುಕೊಂಡರು.
ತಾಂತ್ರಿಕದೋಷದ ಹಿನ್ನೆಲೆ 9 ಗಂಟೆಗೆ ಶುರುವಾಗಬೇಕಿದ್ದ ಷೋ, 10.30ಕ್ಕೆ ಶುರುವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ತಡವಾಗಿ ಕಾಂತಾರ ಸಿನಿಮಾ ಶುರುವಾಗಿದ್ದರಿಂದ ಪ್ರೇಕ್ಷಕರು ತಣ್ಣಗಾದರೂ. ಘಟನೆ ಹಿನ್ನೆಲೆ ಮುಂಜಾಗ್ರತವಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ಘಟನೆಯಿಂದ ಪ್ರೇಕ್ಷಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
