ಬೆಂಗಳೂರು ಸಾಮಾನ್ಯವಾಗಿ ಚಳಿಗಾಲದಲ್ಲೂ ಬೆಚ್ಚಗಿರುತ್ತದೆ. ಆದರೆ ಈ ಬಾರಿ ಚಳಿ ಹೆಚ್ಚಾಗಿದೆ. ಭಾನುವಾರ, ನವೆಂಬರ್ 30 ರಂದು, ಇಲ್ಲಿ ಅತಿ ಹೆಚ್ಚು ಚಳಿಯ ದಿನ ದಾಖಲಾಗಿದೆ. ಈ ನಡುವೆ, ಬಳಕೆದಾರರು 'ಫ್ರಿಡ್ಜ್‌ನೊಳಗಿನ ಬೆಂಗಳೂರು' ಎಂದು ಕರೆದಿದ್ದಾರೆ. ಲಂಡನ್‌ನ ವಾತಾವರಣಕ್ಕೆ ಹೋಲಿಸಿದ್ದಾರೆ.
Karnataka News Live: ಇದು ಬೆಂಗಳೂರಾ ಅಥವಾ 'ಲಂಡನ್ನಾ'? ವಿಡಿಯೋದಲ್ಲಿ ಈ ದೃಶ್ಯ ನೋಡಿ ದಂಗಾದ ಜನ!

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಚರ್ಚೆಯ ವೇಳೆ ರಾಹುಲ್ ಗಾಂಧಿ ಅವರು, ರಾಜ್ಯದ ವಿದ್ಯಮಾನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ. ಸೋನಿಯಾ ಗಾಂಧಿ ಅವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡೋಣ ಎಂದು ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೇವಲ ಸಿಎಂ- ಡಿಸಿಎಂ ಬದಲಾವಣೆ ಮಾತ್ರ ಅಲ್ಲ, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಿ ಬಳಿಕ ಸಿಎಂ- ಡಿಸಿಎಂ ಅವರಿಗೆ ಮಾಹಿತಿ ನೀಡಿ ಒಂದೆರಡು ದಿನದಲ್ಲೇ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಐಸಿಸಿ ಉನ್ನತ ಮೂಲಗಳು ಮಾಹಿತಿ ನೀಡಿವೆ.
Karnataka News Live 30 November 2025ಇದು ಬೆಂಗಳೂರಾ ಅಥವಾ 'ಲಂಡನ್ನಾ'? ವಿಡಿಯೋದಲ್ಲಿ ಈ ದೃಶ್ಯ ನೋಡಿ ದಂಗಾದ ಜನ!
Karnataka News Live 30 November 2025ಕೊಡಗು - ಕರ್ತವ್ಯದ ಒತ್ತಡ ಬಿಟ್ಟು ಕ್ರೀಡೆಯಲ್ಲಿ ಮಿಂದೆದ್ದ ಪೊಲೀಸರು!
Karnataka News Live 30 November 2025ಮೆದುಳಿನ ಆರೋಗ್ಯಕ್ಕೆ ನೀವು ತಿನ್ನಬೇಕಾದ 6 ಸೂಪರ್ ಫುಡ್ಸ್ ಇಲ್ಲಿವೆ ನೋಡಿ!
ನೆನಪಿನ ಶಕ್ತಿ ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್‌ಗಳು, ಖನಿಜಗಳು, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಒಮೆಗಾ 3 ಫ್ಯಾಟಿ ಆಸಿಡ್ ಇರುವ ಆಹಾರಗಳನ್ನು ತಿನ್ನಬೇಕು.
Karnataka News Live 30 November 2025ಕಾಯುವಿಕೆ ಮುಗಿತ್ತು - ಡೆವಿಲ್ ಸಿನಿಮಾ ಬಗ್ಗೆ ಜೈಲಿನಿಂದಲೇ ಟ್ವಿಟ್ ಮಾಡಿದ್ರಾ ದರ್ಶನ್?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಎಕ್ಸ್ ಖಾತೆಯಿಂದ 'ದಿ ಡೆವಿಲ್' ಚಿತ್ರದ ಟ್ರೈಲರ್ ಘೋಷಣೆ ಪೋಸ್ಟ್ ವೈರಲ್ ಆಗಿದೆ. ದರ್ಶನ್ ಜೈಲಿನಿಂದಲೇ ಪೋಸ್ಟ್ ಮಾಡಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟುಹಾಕಿದೆ.
Karnataka News Live 30 November 2025'ಪ್ರಲ್ಹಾದ್ ಜೋಶಿ ಅವರು ಏನು ನಮ್ಮ ಪಕ್ಷದವರಾ?' ಅವರಿಗೆ ಯಾಕೆ ಉತ್ತರ ಕೊಡಬೇಕು? ಗೃಹ ಸಚಿವ
G Parameshwara on cabinet reshuffle: ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಪುಟ ಪುನಾರಚನೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
Karnataka News Live 30 November 2025ರಾಂಚಿಯಲ್ಲಿ ವಿರಾಟ್ ಕೊಹ್ಲಿ ದರ್ಬಾರ್ - ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ರೋಚಕ ಜಯ
ವಿರಾಟ್ ಕೊಹ್ಲಿಯವರ ಭರ್ಜರಿ ಶತಕ (135) ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 350 ರನ್‌ಗಳ ಗುರಿ ಬೆನ್ನತ್ತಿದ ಹರಿಣಗಳ ಪಡೆ 332 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
Karnataka News Live 30 November 2025ಚಾಮರಾಜನಗ - ತಂದೆಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಮಲಗಿದ್ದ ಮಗನೂ ಸಾವು!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಣಗಳ್ಳಿದೊಡ್ಡಿ ಗ್ರಾಮದಲ್ಲಿ, ತಂದೆಯ ಅಂತ್ಯಕ್ರಿಯೆ ಮುಗಿಸಿದ ಮರುದಿನವೇ ಶಿಕ್ಷಕ ಮಗ ಸಾವನ್ನಪ್ಪಿದ್ದಾರೆ. ತಂದೆ ದೊಡ್ಡಲಿಂಗಯ್ಯ ಅವರ ನಿಧನದ ದುಃಖದಲ್ಲಿದ್ದ ಮಗ ಮಲ್ಲಣ್ಣ ಅವರೂ ಸಾವನ್ನಪ್ಪಿದ್ದು, ಈ ಹೃದಯವಿದ್ರಾವಕ ಘಟನೆಯಿಂದ ಇಡೀ ಗ್ರಾಮ ಮರುಗಿದೆ.
Karnataka News Live 30 November 2025ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ಲಾಸಿಕ್ ಲೆಜೆಂಡ್ಸ್‌ಗೆ ಜಯ! 'Yezdi' ಟ್ರೇಡ್‌ಮಾರ್ಕ್ ಹಕ್ಕು ಬೊಮನ್ ಇರಾನಿ ಪರ ತೀರ್ಪು
'ಯೆಜ್ಡಿ' ಟ್ರೇಡ್‌ಮಾರ್ಕ್ ಹಕ್ಕು ವಿವಾದದಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಕ್ಲಾಸಿಕ್ ಲೆಜೆಂಡ್ಸ್ ಕಂಪನಿಗೆ 'ಯೆಜ್ಡಿ' ಬ್ರಾಂಡ್ ಬಳಸಲು ಅನುಮತಿ ನೀಡಿದೆ. ಈ ಮೂಲಕ, ಏ ಸಹ-ಸಂಸ್ಥಾಪಕ ಬೊಮನ್ ಇರಾನಿ ಅವರ ಪರಂಪರೆಯ ಹಕ್ಕನ್ನು ನ್ಯಾಯಾಲಯ ಎತ್ತಿಹಿಡಿದಿದೆ.
Karnataka News Live 30 November 2025ದೆಹಲಿ ದೇವಾಲಯ ಕೆಡವಿದರೆ, RSSಗೆ ₹300 ಕೋಟಿ ಎಲ್ಲಿಂದ ಬಂತೆಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ!
ದೆಹಲಿಯ ಜಂಡೇವಾಲನ್‌ನಲ್ಲಿರುವ 1500 ವರ್ಷಗಳಷ್ಟು ಹಳೆಯ ಗೋರಖನಾಥ್ ದೇವಾಲಯವನ್ನು ಸರ್ಕಾರಿ ಅಧಿಕಾರಿಗಳ ಪಾರ್ಕಿಂಗ್‌ಗಾಗಿ ನೆಲಸಮಗೊಳಿಸಲಾಗುತ್ತಿದೆ ಎಂಬ ಆರೋಪ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ₹300 ಕೋಟಿ ಮೌಲ್ಯದ RSS ಕಚೇರಿ ಹಣಕಾಸಿನ ಮೂಲ ಪ್ರಶ್ನಿಸಿದ್ದಾರೆ.
Karnataka News Live 30 November 2025ಉಡುಪಿ ಸಮೀಪ ಭೀಕರ ಅಪಘಾತ - ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಪಲ್ಟಿ, ಮೃತರ ಸಂಖ್ಯೆ 5ಕ್ಕೆ ಏರಿಕೆ
Karnataka News Live 30 November 2025Bigg Boss ಮನೆಗೆ ಐಶ್ವರ್ಯ ಸಿಂಧೋಗಿ ವೈಲ್ಡ್ ಕಾರ್ಡ್ ಎಂಟ್ರಿ? ನಟಿ ಕೊಟ್ಟ ಹಿಂಟ್ ಏನು ಕೇಳಿ!
Karnataka News Live 30 November 2025ತಾಳಿ ಕಟ್ಟುವ ಶುಭ ವೇಳೆ ಹಾರ್ಟ್ ಅಟ್ಯಾಕ್; ಅಪ್ಪನ ಸಾವಿನಿಂದ ಸೂತಕದ ಮನೆಯಾದ ಮದುವೆ ಮಂಟಪ!
Karnataka News Live 30 November 2025ರಾಜ್ಯ ಸರ್ಕಾರದ ಪರಿಸ್ಥಿತಿ ಬಹಳ ಚೆನ್ನಾಗಿದೆ - ದಿನೇಶ್ ಗುಂಡೂರಾವ್,! ಕೇಂದ್ದ! ವಿರುದ್ಧ ವಾಗ್ದಾಳಿ
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಮೆಕ್ಕೆಜೋಳ ನೀತಿಯನ್ನು ಟೀಕಿಸಿದ ಅವರು, ಮಂಗನ ಕಾಯಿಲೆಗೆ ಲಸಿಕೆ ಅಭಿವೃದ್ಧಿ, ಬಾಣಂತಿ ಸಾವು ಪ್ರಕರಣ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Karnataka News Live 30 November 2025ಸಂಬಳ ಕೊಡದ ಮಾಲೀಕನಿಗೆ ಬುದ್ಧಿ ಕಲಿಸಲು, ಅನ್ನ ಹಾಕಿದ ಲಾರಿಗೆ ಬೆಂಕಿ ಇಟ್ಟ ಚಾಲಕ!
ಕಳೆದ ಎರಡು-ಮೂರು ತಿಂಗಳುಗಳಿಂದ ಸಂಬಳ ನೀಡದ ಕಾರಣಕ್ಕೆ ಕುಪಿತಗೊಂಡ ಲಾರಿ ಚಾಲಕನೊಬ್ಬ, ಬೆಂಗಳೂರಿನ ಸೋಮನಹಳ್ಳಿ ಟೋಲ್ ಬಳಿ ತನ್ನ ಮಾಲೀಕನ ಲಾರಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Karnataka News Live 30 November 2025ಶೇಷಾದ್ರಿಪುರಂ ಕೊಲೆ ಪ್ರಕರಣ - ತಂಗಿಗಾಗಿ ಅಕ್ಕನ ಹತ್ಯೆಗೈದ ಆರೋಪಿ ಬಂಧನ
ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದ ಶರಣಮ್ಮ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದುವೆ ಪ್ರಸ್ತಾಪಕ್ಕೆ ಸಂಬಂಧಿಸಿದ ಆಘಾತಕಾರಿ ಕಾರಣವನ್ನು ಪತ್ತೆಹಚ್ಚಿದ್ದಾರೆ. ಮೃತಳ ತಂಗಿಯನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆಯ ವಿಳಾಸ ನೀಡದಿದ್ದಕ್ಕೆ ಅಕ್ಕ ಶರಣಮ್ಮಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
Karnataka News Live 30 November 2025Bigg Bossನಲ್ಲಿ ರಕ್ಷಿತಾ ಶೆಟ್ಟಿಗೆ ಕನ್ನಡ ಪರೀಕ್ಷೆ - ಸಿಂಹದ ಬಗ್ಗೆ ಮಾತನಾಡಿ ಸುದೀಪ್ರನ್ನೂ ಸುಸ್ತು ಮಾಡಿದ ಪುಟ್ಟಿ!
ಬಿಗ್ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಕನ್ನಡ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ, ಮನೆಯಲ್ಲಿ ಅವರಿಗೆ ಸಿಂಹದ ಬಗ್ಗೆ ಓದುವ ಟಾಸ್ಕ್ ನೀಡಲಾಯಿತು, ಅವರ ಓದುವ ಶೈಲಿ ಮತ್ತು ತಡಬಡಾಯಿಸುವಿಕೆ ಎಲ್ಲರಿಗೂ, ವಿಶೇಷವಾಗಿ ಸುದೀಪ್ ಅವರಿಗೂ ನಗುವಿನ ಹೊನಲು ಹರಿಸಿತು.
Karnataka News Live 30 November 2025ಸಿಎಂ-ಡಿಸಿಎಂ 'ಬ್ರೇಕ್ ಫಾಸ್ಟ್' ಮಾಡಿ, ಎಲ್ಲ ಬ್ರೇಕ್ ಮಾಡಿದ್ದಾರೆ! ಅಭಿವೃದ್ಧಿ ಕಡೆ ಗಮನ ಕೊಡಿ - ವಚನಾನಂದ ಶ್ರೀ ಚಾಟಿ ಏಟು
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರಿಗೆ ಆಂತರಿಕ ಸಂಘರ್ಷ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಗಮನ ನೀಡುವಂತೆ ಸಲಹೆ ನೀಡಿದ್ದಾರೆ. ಜೊತೆಗೆ, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿದರು..
Karnataka News Live 30 November 2025ಸಿಂಧನೂರು ಬಳಿ ಭೀಕರ ಅಪಘಾತ - ಹುಲ್ಲು ತುಂಬಿದ ಟ್ರಾಕ್ಟರ್‌ಗೆ ಕಾರು ಡಿಕ್ಕಿ, ಉಪನ್ಯಾಸಕಿ ಸಾವು!
ರಾಯಚೂರು ಜಿಲ್ಲೆಯ ಸಿಂಧನೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪನ್ಯಾಸಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದುವೆ ಮುಗಿಸಿ ವಾಪಸಾಗುತ್ತಿದ್ದಾಗ ಹುಲ್ಲು ತುಂಬಿದ ಟ್ರ್ಯಾಕ್ಟರ್‌ಗೆ ಅವರ ಕಾರು ಡಿಕ್ಕಿ ಹೊಡೆದಿದ್ದು, ಪತಿ ಮತ್ತು ಮಕ್ಕಳು ಗಾಯಗೊಂಡಿದ್ದಾರೆ.
Karnataka News Live 30 November 2025Amruthadhaare - ಮನೆಬಿಟ್ಟು ಬಂದ ಭಾಗ್ಯಮ್ಮ ಮೊಮ್ಮಕ್ಕಳ ಕಣ್ಣಿಗೆ ಬೀಳ್ತಾಳಾ? ಗೌತಮ್-ಭೂಮಿಕಾ ಒಂದಾಗಲು ಕೈಜೋಡಿಸ್ತಾಳಾ?
ಗೌತಮ್ ಮತ್ತು ಭೂಮಿಕಾಳ ರಹಸ್ಯವನ್ನು ಆನಂದ್ ದಂಪತಿ ಮಾತನಾಡುತ್ತಿರುವುದನ್ನು ಭಾಗ್ಯಮ್ಮ ಕೇಳಿಸಿಕೊಂಡು ಮನೆ ಬಿಟ್ಟಿದ್ದಾಳೆ. ಇತ್ತ ಮಿಂಚು ಮತ್ತು ಆಕಾಶ್ ಅಪ್ಪ-ಅಮ್ಮನನ್ನು ಹೇಗೆ ಒಂದು ಮಾಡುವುದು ಎಂದು ನೋಡುತ್ತಿದ್ದಾರೆ. ಭಾಗ್ಯಮ್ಮ ಮಕ್ಕಳ ಕಣ್ಣಿಗೆ ಬೀಳ್ತಾಳಾ?
Karnataka News Live 30 November 2025Bigg Boss - ಹೀಗೆಲ್ಲಾ ಮಾಡಲು ಇಷ್ಟವಿಲ್ಲ, ನಾನೇ ಬಿಗ್ಬಾಸ್ ಮನೆಯಿಂದ ಹೊರ ಹೋಗ್ತೇನೆ - ಸ್ಪರ್ಧಿಯ ಶಾಕಿಂಗ್ ಹೇಳಿಕೆ
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ, ಸ್ಪರ್ಧಿ ಒಬ್ಬರು ಅವರು ನಿಂದನೀಯ ಪದ ಬಳಕೆಯ ಆರೋಪ ಮತ್ತು ಇತರ ಸ್ಪರ್ಧಿಗಳೊಂದಿಗೆ ತೀವ್ರ ಜಗಳದ ನಂತರ ತಾವೇ ಶೋ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಅವರ ಈ ವರ್ತನೆಯು ಮನೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಯಾರವರು?