Darshan The Devil movie update: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಎಕ್ಸ್ ಖಾತೆಯಿಂದ 'ದಿ ಡೆವಿಲ್' ಚಿತ್ರದ ಟ್ರೈಲರ್ ಘೋಷಣೆ ಪೋಸ್ಟ್ ವೈರಲ್ ಆಗಿದೆ. ದರ್ಶನ್ ಜೈಲಿನಿಂದಲೇ ಪೋಸ್ಟ್ ಮಾಡಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟುಹಾಕಿದೆ. 

ಡೇವಿಲ್ ಸಿನಿಮಾ ಬಗ್ಗೆ ನಟ ದರ್ಶನ್ ಬಿಗ್ ಅಪ್‌ಡೇಟ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ ದಿ ಡೆವಿಲ್ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, ದಿನೇ ದಿನೇ ಈ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗ್ತಿದೆ. ಹೀಗಿರುವಾಗ ದರ್ಶನ್ ಅವರ ಸೋಶಿಯಲ್ ಮೀಡಿಯಾದಿಂದ ಕುತೂಹಲ ಕೆರಳಿಸುವ ಪೋಸ್ಟ್‌ ಒಂದು ವೈರಲ್ ಆಗಿದೆ. ಪ್ರಸ್ತುತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರ ಎಕ್ಸ್ ಖಾತೆಯಿಂದ ಕಾಯುವಿಕೆ ಬಹುತೇಕ ಅಂತ್ಯವಾಗಿದೆ. ನಾಳೆ ಬೆಳಗ್ಗೆ 10:05ಕ್ಕೆ ಟ್ರೈಲರ್ ಅನೌನ್ಸ್‌ಮೆಂಟ್ ಎಂಬ ಪೋಸ್ಟೊಂದು ವೈರಲ್ ಆಗಿದೆ. ಒಂದು ಗಂಟೆ ಹಿಂದಷ್ಟೇ ಮಾಡಿದ ಈ ಪೋಸ್ಟ್‌ನ್ನು ಈಗಾಗಲೇ 78 ಸಾವಿರ ಜನ ವೀಕ್ಷಿಸಿದ್ದಾರೆ.

ಆದರೆ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವುದರಿಂದ ಅವರ ಖಾತೆಯಿಂದ ಆಗಿರುವ ಪೋಸ್ಟ್ ಬಗ್ಗೆ ಈಗ ಭಾರಿ ಕುತೂಹಲ ಮೂಡಿದೆ. ಅನೇಕರು ದರ್ಶನ್ ಜೈಲಿನಿಂದ ಟ್ವಿಟ್ ಮಾಡಿದ್ರಾ ಅಂತ ಕಾಮೆಂಟ್ ಹಾಕ್ತಿದ್ದಾರೆ. ಇನ್ನೂ ಕೆಲವರು ಟ್ರೈಲರ್ ಲಾಂಚ್ ಎಲ್ಲಿಂದ ಜೈಲಿನಿಂದ ನಾ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ದಿ ಡೇವಿಲ್:

ದರ್ಶನ್ ತಮ್ಮ ಸೂಪರ್​ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ. ಹೀಗಿರುವಾಗ ದರ್ಶನ್‌ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ದಿತ್ವಾ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ 3 ಸಾವು: 149 ಪ್ರಾಣಿಗಳು ಬಲಿ, 234 ಮಣ್ಣಿನ ಮನೆಗಳು ನಾಶ, 57,000 ಹೆಕ್ಟೇರ್ ಕೃಷಿಭೂಮಿ ಜಲಾವೃತ

ಟೀಸರ್​ನಲ್ಲಿ ನೆಗೆಟಿವ್ ಶೇಡ್​​​ನಲ್ಲಿ ಕಾಣಿಸಿಕೊಂಡಿರುವ ದರ್ಶನ್, ಬಹಳ ವರ್ಷಗಳ ನಂತರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ಪ್ರಕಾಶ್ ವೀರ್ ಆಪ್ತರೊಬ್ಬರು ಈ ಹಿಂದೆ ಹೇಳಿದ್ದರು. ಪ್ರಕಾಶ್ ವೀರ್ ನಿರ್ದೇಶನದ ಜೊತೆಗೆ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಗಿಲ್ಲಿ ನಟ, ಮಹೇಶ್ ಮಂಜ್ರೇಕರ್, ಶೋಭಾರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಡಿಸೆಂಬರ್ 12ರಂದು ಬಿಡುಗಡೆ ಆಗಬೇಕಿದ್ದ ಡೆವಿಲ್ ಸಿನಿಮಾ ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡಾ ಗಂಡನ ಪರವಾಗಿ ಡೆವಿಲ್ ಸಿನಿಮಾದ ಪ್ರಚಾರಕ್ಕೆ ಕೈಜೋಡಿಸಿದ್ದು, ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಕಾರೈಕುಡಿ ಬಳಿ 2 ಬಸ್‌ಗಳ ಮಧ್ಯೆ ಭೀಕರ ಅಪಘಾತ: 12 ಮಂದಿ ಸಾವು

Scroll to load tweet…