- Home
- News
- State
- Karnataka News Live: BBK 12 - ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ - ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!
Karnataka News Live: BBK 12 - ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ - ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ಹಿನ್ನೆಲೆಯಲ್ಲಿ ನಡೆದ ಗುಂಪು ಘರ್ಷಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವಿಗೆ ಸಂಬಂಧಿಸಿದಂತೆ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.ಪ್ರತ್ಯೇಕ ದೂರು ಆಧರಿಸಿ ಮೂರು (01/2026, 02/2026, 03/2026) ಎಫ್ಐಆರ್ ಮತ್ತು ಬಳ್ಳಾರಿ ನಗರ ಡಿವೈಎಸ್ಪಿ ಚಂದ್ರಕಾಂತ ನಂದಾ ರೆಡ್ಡಿ ಅವರ ದೂರಿನ ಆಧಾರದಲ್ಲಿ ಒಂದು ಸ್ವಯಂ ಪ್ರೇರಿತ ಪ್ರಕರಣ (04/2026)ವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರನ ಕೊಲೆ, ಜಾತಿ ನಿಂದನೆ, ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನೀಡಲಾದ ದೂರು ಆಧರಿಸಿ ಪ್ರಕರಣ ಎಫ್ಐಆರ್ ದಾಖಲು ಮಾಡಲಾಗಿದೆ.
ಎಲ್ಲ ಪ್ರಕರಣಗಳಲ್ಲಿಯೂ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಕ್ರಮವಾಗಿ ಎ1, ಎ2, ಎ3 ಆರೋಪಿಗಳನ್ನಾಗಿ ಮಾಡಲಾಗಿದೆ. ಪೊಲೀಸರು ದಾಖಲು ಮಾಡಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಹಚರರ ಜೊತೆಗೆ, ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದ
Karnataka News Live 3 January 2026BBK 12 - ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ - ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!
Karnataka News Live 3 January 2026ಗಾಂಧಿ ಕುಟುಂಬದಲ್ಲಿ ರಾಹುಲ್ - ಪ್ರಿಯಾಂಕಾ ಬೇರೆ ಬೇರೆ ಬಣವೇಕೆ ?
ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಇಬ್ಬರಿಗೂ ಅಹ್ಮದ್ ಪಟೇಲರಿಗೆ ಸಹಾಯ ಮಾಡಲು ಹೋಗಿ ಜೈಲು ಸೇರಿದ್ದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪವಿದೆ. ರಾಹುಲ್ ಗಾಂಧಿ ಅವರಿಗೂ ಡಿ.ಕೆ. ಬಗ್ಗೆ ಅನುಕಂಪವೇನೋ ಇದೆ. ಆದರೆ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಟ್ಟರೆ ರಾಜ್ಯವೇ ಕೈತಪ್ಪಿ ಹೋದೀತು ಎಂಬ ಆತಂಕವೂ ಇದೆ.
Karnataka News Live 3 January 2026ಈ ವಾರ Kiccha Sudeep ಈ ವಿಷಯದ ಬಗ್ಗೆ ಮಾತಾಡ್ಬೇಕು; Bigg Boss ಉತ್ತರ ಕೊಡಬೇಕು - ವೀಕ್ಷಕರ ಆಗ್ರಹ
ಬಿಗ್ ಬಾಸ್ ಕನ್ನಡ ಸೀಸನ್ 12 ವೀಕ್ಷಕರು ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಬಂದು ಮಾತನಾಡಲಿ ಎಂದು ಕಾಯುತ್ತಿರುತ್ತಾರೆ. ಕಳೆದ ವಾರ ಮಿಸ್ ಆಗಿತ್ತು, ಈ ವಾರ ಸುದೀಪ್ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. ಹಾಗಾದರೆ ಏನದು?
Karnataka News Live 3 January 2026Ballari - ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ - ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯು ತಾರಕಕ್ಕೇರಿದೆ. ಈ ಘಟನೆಯಿಂದಾಗಿ ಶಾಸಕ ಭರತ್ ರೆಡ್ಡಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಲಾಗಿದೆ.
Karnataka News Live 3 January 2026ಫಿನಾಲೆಗೆ ಎರಡು ವಾರ ಇದ್ದಾಗಲೇ, BBK 12 ಮನೆಯಿಂದ ಈ ವಾರ ಹೊರ ಹೋಗೋರು ಯಾರು?
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ವಿಭಿನ್ನವಾಗಿ ನಾಮಿನೇಶನ್ ಮಾಡಲಾಗಿದೆ. ಕಳೆದ ಐದಾರು ವಾರಗಳಿಂದಲೂ ಸ್ಪಂದನಾ ಅವರು ಹೊರಗಡೆ ಹೋಗ್ತಾರೆ ಎಂದು ವೀಕ್ಷಕರು ಬಯಸಿದ್ದರು. ಆದರೆ ಆ ರೀತಿ ಆಗಿರಲಿಲ್ಲ.
Karnataka News Live 3 January 2026ಸ್ಫೋಟ, ಸಾವು, ಅಗ್ನಿ - ರಾಜ್ಯದಲ್ಲಿ ನಡೆದ ಮೂರು ಕಹಿ ಘಟನೆಗಳು
Karnataka News Live 3 January 2026ಇಂದೋರ್ ಕಲುಷಿತ ನೀರು - 10 ವರ್ಷದ ಹರಕೆಗೆ ಜನಿಸಿದ 6 ತಿಂಗಳ ಕೂಸು ಸೇರಿ 10ಕ್ಕೆ ಸಾವು
ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟವರ ಸಂಖ್ಯೆಯು10ಕ್ಕೆ ಏರಿಕೆಯಾಗಿದೆ. ಅಸ್ವಸ್ಥರ ಸಂಖ್ಯೆಯೂ 1400ಕ್ಕೆ ಏರಿಕೆಯಾಗಿದೆ. ಇದರ ನಡುವೆ, ಇಂದೋರ್ ಮಹಾನಗರ ಪಾಲಿಕೆಯ ಹಲವು ಅಧಿಕಾರಿಗಳನ್ನು ಮುಖ್ಯಮಂತ್ರಿ ಮೋಹನ ಯಾದವ್ ಅವರು ಶುಕ್ರವಾರ ಅಮಾನತು ಮಾಡಿದ್ದಾರೆ.
Karnataka News Live 3 January 2026ಉಮರ್ ಪರ ಅಮೆರಿಕ ಸಂಸದೆ ಜತೆ ರಾಹುಲ್ - ಬಿಜೆಪಿ ಕಿಡಿ
ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Karnataka News Live 3 January 2026ಆರ್‌ಸಿಬಿ ಅಂಗಳದಲ್ಲಿ ಕರುನಾಡಿನ ನಂದಿನಿ ಎಂಟ್ರಿ? ಕೆಎಂಎಫ್‌ನ ಹೊಸ ಲೆಕ್ಕಾಚಾರ ಏನು?
Karnataka News Live 3 January 2026ನಮ್ಮ ಬೆಂಬಲಕ್ಕೆ ಬನ್ನಿ - ಜೈಶಂಕರ್‌ಗೆ ಬಲೂಚ್ ನಾಯಕ ಪತ್ರ
ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೆ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ತಮ್ಮ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಭಾರತದ ಸಹಕಾರ ಕೋರಿದ್ದಾರೆ. ಈ ಸಂಬಂಧ ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂತ ಪತ್ರ ಬರೆದಿದ್ದಾನೆ.
Karnataka News Live 3 January 2026ಭಾರತದಲ್ಲೂ ದಂಗೆ ಆಗಲಿ - ಅಭಯ್ ಚೌಟಾಲ ವಿವಾದ
‘ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ದಂಗೆಯಾಗಿ ಸರ್ಕಾರವನ್ನು ಕಿತ್ತೊಗೆದಂತೆ, ಭಾರತದಲ್ಲಿಯೂ ಯುವಕರು ದಂಗೆ ಎಬ್ಬಿಸಿ, ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಐಎನ್‌ಎಲ್‌ಡಿ ಪಕ್ಷದ ನಾಯಕ ಅಭಯ್ ಚೌಟಾಲಾ ಹೇಳಿಕೆ ನೀಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
Karnataka News Live 3 January 2026ತಿರುಪತಿ - 2025ರಲ್ಲಿ 13.52 ಕೋಟಿ ಲಡ್ಡು ಸೇಲ್
ಈ ಹಿಂದೆ ಕಲಬೆರಕೆ ತುಪ್ಪದಲ್ಲಿ ಲಡ್ಡು ತಯಾರಿಸಲಾಗಿತ್ತು ಎಂಬ ವಿವಾದದ ನಡುವೆಯೂ ಇಲ್ಲಿನ ವೆಂಕಟೇಶ್ವರ ದೇಗುಲದ ಪವಿತ್ರ ಲಡ್ಡು ಪ್ರಸಾದವು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. 2025ರಲ್ಲಿ 13.52 ಕೋಟಿ ಲಡ್ಡು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಶೇ.10ರಷ್ಟು ಅಧಿಕವಾಗಿದೆ.
Karnataka News Live 3 January 2026ಗಿಗ್ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ
ಯಾವುದೇ ಒಂದು ನಿರ್ದಿಷ್ಟ ಆನ್‌ಲೈನ್ ಅಗ್ರಿಗೇಟರ್ ಜತೆಗೆ ಕನಿಷ್ಠ 90 ದಿನ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ (ಡೆಲಿವರಿ ಬಾಯ್‌ಗಳು) ಆರೋಗ್ಯ ಸೇವೆಯಂಥ ಸೌಲಭ್ಯ ಕಲ್ಪಿಸುವ ಸಾಮಾಜಿಕ ಭದ್ರತೆ(ಕೇಂದ್ರ) ನಿಯಮಗಳ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.