ವಂದೇ ಭಾರತ್ ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿ ವೈರಲ್ ಆಗಿದ್ದ ಜೋಡಿಯ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಎರಡೂ ಕುಟುಂಬದವರು ಸೇರಿ ಈ ಜೋಡಿಗೆ ಮದುವೆ ಮಾಡಲು ಮುಂದಾಗಿದ್ದಾರೆ.

ವಂದೇ ಭಾರತ್ ರೈಲಿನಲ್ಲಿ ಅಸಭ್ಯವಾಗಿ ರೋಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ವೀಡಿಯೋ ವೈರಲ್ ಆದ ನಂತರ ಎರಡು ಮನೆಯವರು ಈ ಜೋಡಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಗಾಜಿಯಾಬಾದ್‌ ಮೀರತ್ ವಂದೇ ಭಾರತ್ ರೈಲಿನಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅನೇಕರು ಈ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ವಿಡಿಯೋ ವೈರಲ್ ಆದ ನಂತರ ಪೊಲೀಸರು ನ್ಯಾಷನಲ್ ಕ್ಯಾಪಿಟಲ್ ರಿಜನ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್ ಜೊತೆ ಸಮನ್ವಯದೊಂದಿಗೆ ತನಿಖೆಯನ್ನು ಆರಂಭಿಸಿದ್ದರು. ಅದುವೇ ಈ ಒಂದೇ ಭಾರತ್ ರೈಲ್ವೆ ಸೇವೆಯನ್ನು ನಡೆಸುತ್ತಿತ್ತು. ಆದರೆ ಹೀಗೆ ಬೇಡದ ಕಾರಣಕ್ಕೆ ಪ್ರಸಿದ್ಧಿಗೆ ಬಂದ ಈ ಜೋಡಿಗೆ ಈಗ ಮನೆಯವರೇ ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಮಕ್ಕಳ ಕೃತ್ಯದಿಂದ ಕುಟುಂಬದವರು ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದು, ವರದಿಯ ಪ್ರಕಾರ, ಇಬ್ಬರ ಮದುವೆಗೆ ಕುಟುಂಬದವರು ದಿನಾಂಕ ನಿಗದಿ ಮಾಡಿದ್ದಾರೆ. ಇವರಿಬ್ಬರು ವಂದೇ ಸಮುದಾಯಕ್ಕೆ ಸೇರಿದ್ದು, ವಯಸ್ಕರಾಗಿದ್ದಾರೆ. ಇಬ್ಬರು ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದಾರೆ. ಹುಡುಗಿ ಬಿಸಿಎ ಮಾಡುತ್ತಿದ್ದರೆ ಹುಡುಗ ಮತ್ತೊಂದು ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದ.

ಅಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ, ಇವರ ಕುಟುಂಬಕ್ಕೆ ಹತ್ತಿರದವರೊಬ್ಬರು ಹೇಳಿದಂತೆ ಈ ವೀಡಿಯೋದಿಂದಾಗಿ ಎರಡು ಕುಟುಂಬದವರಿಗೆ ತೀವ್ರ ಅಮಾನವಾಗಿತ್ತು. ಮಕ್ಕಳ ಕೃತ್ಯದಿಂದ ತಲೆ ಎತ್ತಲಾಗದಂತಾಗಿತ್ತು. ಹಾಗೆಯೇ ವಿಡಿಯೋ ವೈರಲ್ ಆದ ಬಳಿ ವಿದ್ಯಾರ್ಥಿನಿ ಖಿನ್ನತೆಗೆ ಜಾರಿದ್ದಳು. ತನಗೆ ತಾನು ಹಾನಿ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಳು. ಹೀಗಾಗಿ ಯುವತಿಯ ಮನೆಯವರು ಮುಂದೆ ಹೋಗಿ ಆಕೆಗೆ ಸಮಾಧಾನ ಮಾಡಿದ ನಂತರ ತಮ್ಮ ಸಮುದಾಯದ ಹಿರಿಯ ಜೊತೆ ಮಾತನಾಡಿ ಈ ಘಟನೆ ಇನ್ನಷ್ಟು ರಾಡಿಯಾಗದಂತೆ ಮುಂದುವರೆಯದಿರಲು ನಿರ್ಧಾರ ಮಾಡಿದ್ದರು. ಹಾಗೂ ಇಬ್ಬರು ವಿದ್ಯಾರ್ಥಿನಿಯರು ಮತ್ತಷ್ಟು ತೊಂದರೆಗೆ ಒಳಗಾಗದಂತೆ ಕಾಪಾಡಲು ಇಬ್ಬರಿಗೂ ಮದುವೆ ಮಾಡಿಸಿ ಒಟ್ಟಿಗೆ ಜೀವನ ಮಾಡುವುದಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರ‍್ಯಾಗಿಂಗ್‌ಗೆ ವಿದ್ಯಾರ್ಥಿನಿ ಬಲಿ: ಮೂವರು ವಿದ್ಯಾರ್ಥಿನಿಯರು ಪ್ರೊಫೆಸರ್ ವಿರುದ್ಧ ಕೇಸ್

ಈ ವಿದ್ಯಾರ್ಥಿಗಳ ವೀಡಿಯೋ ಮೊದಲಿಗೆ ವೈರಲ್ ಆದಾಗ ಪೊಲೀಸರು ಹಲವು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದರು. ಇದರಲ್ಲಿ ಸೆಕ್ಷನ್ 296 ಅಶ್ಲೀಲ ವರ್ತನೆಯೂ ಸೇರಿತ್ತು. ಡಿಬಿ ಆರ್‌ಆರ್‌ಟಿಎಸ್‌ನ ಭದ್ರತಾ ಮುಖ್ಯಸ್ಥ ದುಶ್ಯಂತ್ ಕುಮಾರ್ ಅವರು ಪ್ರಕರಣ ದಾಖಲಿಸಿದ್ದರು. ಎಫ್‌ಐಆರ್‌ನಲ್ಲಿ ದಾಖಲಾಗಿರುವಂತೆ ನವಂಬರ್ 24ರಂದು ಸಂಜೆ 4ಗಂಟೆಗೆ ದುಹೈನಿಂದ ಮುರದ್‌ನಗರ್‌ಗೆ ಪಯಣಿಸುತ್ತಿದ್ದ ನಮೋ ಭಾರತ್ ರೈಲಿನಲ್ಲಿಈ ಘಟನೆ ನಡೆದಿತ್ತು. ಟ್ರೈನ್ ಆಪರೇಟರ್ ಒಬ್ಬರು ತಮ್ಮ ಮೊಬೈಲ್ ಫೋನ್ ಬಳಸಿ ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ವೀಡಿಯೋದಲ್ಲಿ ರೈಲು ಚಲಿಸುವ ಸಮಯವೂ ಕೂಡ ರೆಕಾರ್ಡ್ ಆಗಿತ್ತು. ಘಟನೆಯ ಬಳಿಕ ಸಂಸ್ಥೆಯೂ ಈ ವೀಡಿಯೋ ರೆಕಾರ್ಡ್ ಮಾಡಿದ ಆಪರೇಟರ್‌ನ್ನು ಡಿಸೆಂಬರ್ 3 ರಂದು ಸೇವೆಯಿಂದ ವಜಾ ಮಾಡಿತ್ತು.

ಇದನ್ನೂ ಓದಿ: ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ: ದೇಗುಲದ ಗೋಪುರ ಏರಿ ಕುಡುಕನ ಹೈಡ್ರಾಮಾ: ಕಳಸಕ್ಕೆ ಹಾನಿ ಮಾಡಲು ಯತ್ನ