- Home
- Entertainment
- TV Talk
- BBK: ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್ ಆಗಿದ್ದು ಹಾರ್ಟು! ಲವ್ ಫೇಲ್ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!
BBK: ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್ ಆಗಿದ್ದು ಹಾರ್ಟು! ಲವ್ ಫೇಲ್ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!
ಬಿಗ್ ಬಾಸ್ ಫೈನಲಿಸ್ಟ್ ರಕ್ಷಿತಾ ಶೆಟ್ಟಿ ಅವರು ತಮ್ಮ ಪ್ರೀತಿ ಹಾಗೂ ಲವ್ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಹುಡುಗನನ್ನು ನೋಡಿ ಪ್ರೀತಿಯಾಗಿ, ಮನಸ್ಸಿಗೆ ಖುಷಿಯಾಗಿ, ನಂತರ ಬ್ರೇಕಪ್ ಆದಾಗ ಹೃದಯ ಒಡೆಯುತ್ತದೆ. ಅಂತಿಮವಾಗಿ, ನೋಡಿದ ಕಣ್ಣುಗಳೇ ಅಳುವ ಮೂಲಕ ಶಿಕ್ಷೆ ಅನುಭವಿಸುತ್ತವೆ ಎಂದಿದ್ದಾರೆ.

ರಕ್ಷಿತಾ ಹವಾ
ಬಿಗ್ಬಾಸ್ (Bigg Boss Kannada) ಸದ್ಯ ರಕ್ಷಿತಾ ಶೆಟ್ಟಿ ಹವಾ ಜೋರಾಗಿಯೇ ನಡೆಯುತ್ತಿದೆ. ರಕ್ಷಿತಾ ಫೈನಲಿಸ್ಟ್ ಎಂದು ಇದಾಗಲೇ ವೀಕ್ಷಕರು ಕೂಡ ಫಿಕ್ಸ್ ಮಾಡಿಯಾಗಿದೆ.
ಲವ್ ಮಾಡೋ ಹುಡುಗನ ಬಗ್ಗೆ
ಹಿಂದೊಮ್ಮೆ ರಕ್ಷಿತಾ ಶೆಟ್ಟಿ (Bigg Boss Rakshita Shetty) ತಾವು ಮದುವೆಯಾಗುವ ಹುಡುಗ ಹೇಗೆ ಇರಬೇಕು ಎನ್ನುವ ಬಗ್ಗೆ ಮಾತನಾಡಿದ್ದರು. ಆದರೆ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಲವ್ ಮಾಡಿದ ಹುಡುಗ ಹಾಗೂ ಲವ್ ಬ್ರೇಕಪ್ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಪ್ರೀತಿಯ ಬಗ್ಗೆ
ಅಷ್ಟಕ್ಕೂ ರಕ್ಷಿತಾ ಹೇಳಿದ್ದು ರಿಯಲ್ ಸ್ಟೋರಿ ಏನಲ್ಲ. ಬದಲಿಗೆ ಪ್ರೀತಿಯ ಬಗ್ಗೆ ಅವರು ಮಾತನಾಡಿದ್ದಾರೆ. ಅದೇನೆಂದರೆ, ನಾನು ಒಂದು ಹುಡುಗನಿಗೆ ನೋಡ್ತೀನಿ. ಹುಡುಗನ ಮೇಲೆ ನನಗೆ ಪ್ರೀತಿ ಆಗುತ್ತದೆ. ಆ ನಂತರ ನನ್ನ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಎನ್ನುತ್ತಲೇ ವೈಚಾರಿಕವಾಗಿ ಮಾತನ್ನು ಮುಂದುವರೆಸಿದ್ದಾರೆ.
ಎಷ್ಟು ವಿಚಿತ್ರ!
ನೋಡಿ ಆ ಹುಡುಗನ್ನು ನೋಡಿದ್ದು ನನ್ನ ಕಣ್ಣು, ಖುಷಿಯಾಗಿದ್ದು ನನ್ನ ಮನಸ್ಸಿಗೆ. ಆ ಹುಡುಗ ನನ್ನ ಬಿಟ್ಟು ಹೋಗ್ತಾನೆ. ಆಗ ನನ್ನ ಹೃದಯ ತುಂಡಾಗತ್ತೆ. ಕಣ್ಣು ನೋಡಿದ್ದು, ಮನಸ್ಸಿಗೆ ಖುಷಿಯಾಗಿದ್ದು, ಹೃದಯ ಒಡೆದುಹೋಗೋದು ಎಷ್ಟು ವಿಚಿತ್ರ ಅಲ್ವಾ ಎಂದಿದ್ದಾರೆ.
ಕಣ್ಣಿಗೆ ಪನಿಷ್ಮೆಂಟ್
ಅಷ್ಟಕ್ಕೇ ಮುಗಿಸದ ರಕ್ಷಿತಾ, ಕೊನೆಗೆ ಪನಿಷ್ಮೆಂಟ್ ಸಿಗುವುದು ಕೂಡ ಆತನನ್ನು ನೋಡಿದ ನನ್ನ ಕಣ್ಣಿಗೇನೇ. ಏಕೆಂದರೆ ಲವ್ ಬ್ರೇಕಪ್ ಆದಾಗ ಅಳುವುದು ಕಣ್ಣುತಾನೇ ಎಂದಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

