ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಪುಟ್ಟ ಬಾಲಕನ ಕನ್ನಡ-ಇಂಗ್ಲೀಷ್ ಕಮೆಂಟರಿ ವಿಡಿಯೋ ಜನ ಪಿಧಾ, ಈ ಬಾಲಕನಿಗೆ ರವಿ ಶಾಸ್ತ್ರಿ ಹಾಗೂ ಹರ್ಷಾ ಬೋಗ್ಲೆ ಕೋಚಿಂಗ್ ನೀಡಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಕ್ರಿಕೆಟ್ ಟೂರ್ನಿಯಲ್ಲಿ ವೀಕ್ಷಕ ವಿವರಣೆ ಪಂದ್ಯದ ರೋಚಕತೆ ಹೆಚ್ಚಿಸಲಿದೆ. ಐಪಿಎಲ್ ಟೂರ್ನಿ ರಾಜ್ಯಗಳು ಮಾತ್ರವಲ್ಲ, ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಲೀಗ್ ಟೂರ್ನಿಗಳು ನಡೆಯುತ್ತಿದೆ. ಐಪಿಎಲ್ ರೀತಿಯಲ್ಲೇ ಹರಾಜುಗಳು ನಡೆಯುತ್ತದೆ.ಈ ಪೈಕಿ ಸ್ಥಳೀಯ ಮಟ್ಟದಲ್ಲಿ ನಡೆಯುವ ಲೋಕಲ್ ಕ್ರಿಕೆಟ್ ಟೂರ್ನಿ ಯಾವ ಅಂತಾರಾಷ್ಟ್ರೀಯ ಪಂದ್ಯಕ್ಕೂ ಕಡಿಮೆ ಇರಲ್ಲ. ಈ ಟೂರ್ನಿಗಳಲ್ಲಿ ಹಲವು ಪ್ರತಿಭೆಗಳು ವಿಡಿಯೋ ಮೂಲಕ ಜನಪ್ರಿಯರಾಗುತ್ತಾರೆ. ಹೀಗೆ ಸ್ಥಳೀಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡಿದ ಪುಟ್ಟ ಬಾಲಕ ಇದೀಗ ಭಾರಿ ವೈರಲ್ ಆಗಿದ್ದಾನೆ. ಈತನ ಕನ್ನಡ ಹಾಗೂ ಇಂಗ್ಲೀಷ್ ಕಾಮೆಂಟ್ರಿಗೆ ಜನರು ಪಿಧಾ ಆಗಿದ್ದಾರೆ.
ಜಸ್ವಿತ್ ಕಾನಡ್ಕ ಕಾಮೆಂಟರಿ ವಿಡಿಯೋ
ರವಿ ಶಾಸ್ತ್ರಿ, ಹರ್ಷಾ ಬೋಗ್ಲೆ ರೀತಿಯ ಕಾಮೆಂಟ್ರಿಯಲ್ಲಿ ಅಬ್ಬರಿಸುತ್ತಿರುವ ಈ ಪಟ್ಟ ಬಾಲಕನ ಹೆಸರು ಜಸ್ವಿತ್ ಕಾನಡ್ಕ, ಖ್ಯಾತ ಆರ್‌ಜೆ ತ್ರಿಶೂಲ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಟೆನ್ನಿಲ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಈ ವೀಕ್ಷಕ ವಿವರಣೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಮುಖವಾಗಿ ಈ ಬಾಲಕ ಎರಡೂ ಭಾಷೆಯಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕ್ರಿಕೆಟ್ ರೋಚಕತೆಯನ್ನು ಹೆಚ್ಚಿಸಿದ್ದಾನೆ.
ಬಾಲಕ ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯಕ್ಕೆ ನಿರ್ಗಳವಾಗಿ ಕಾಮೆಂಟ್ರಿ ನೀಡುತ್ತಿದ್ದಾನೆ. ಪದಗಳಿಗಾಗಿ ತಡಕಾಡುತ್ತಿಲ್ಲ, ವರ್ಣಿಸಲು ತಡವಾಗುತ್ತಿಲ್ಲ. ರವಿ ಶಾಸ್ತ್ರಿಯ ಟ್ರೇಸರ್ ಬುಲೆಟ್ ರೀತಿಯಲ್ಲಿ ಜಸ್ವಿತ್ ಕಾನಡ್ಕ ಕಮೆಂಟ್ರಿ ಮಾಡಿದ್ದಾನೆ. ಬಹುತೇಕ ಸಂದರ್ಭಗಳಲ್ಲಿ ಪದಗಳ ಮರುಬಳಕೆ, ಕಿರುಚಾಗಳಿಂದ ಕಾಮೆಂಟ್ರಿಯ ಸೌಂದರ್ಯ ನಶಿಸಿಹೋಗುತ್ತದೆ. ಆದರೆ ಇಲ್ಲಿ ಬಾಲಕ ಉತ್ತಮವಾಗಿ ನಿರ್ವಹಣೆ ಮಾಡಿದ್ದಾನೆ. ಇದರೊಂದಿಗೆ ಬಾಲಕ ಪ್ರತಿಭೆಗೆ ಭಾರಿ ಮನ್ನಣೆ ಸಿಕ್ಕಿದೆ.
ಲೋಕಲ್ ರವಿ ಶಾಸ್ತ್ರಿ ಎಂದ ಜನ
ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಈತ ಲೋಕಲ್ ರವಿ ಶಾಸ್ತ್ರಿ ಎಂದಿದ್ದಾರೆ. ಈ ಬಾಲಕನಿಗೆ ಹರ್ಷಾ ಬೋಗ್ಲೆ ಹಾಗೂ ರವಿ ಶಾಸ್ತ್ರಿ ಕೋಚಿಂಗ್ ನೀಡಿದ್ದಾರೆ. ಪುಟ್ಟ ಬಾಲಕನ ಭವಿಷ್ಯ ಉಜ್ವಲವಾಗಿದೆ. ಉತ್ತಮ ವೀಕ್ಷಕ ವಿವರಣೆ ನೀಡಿದ್ದಾನೆ. ಕಿರುಚಾಡುವ ವೀಕ್ಷಕ ವಿವರಣೆಗಿಂತ ಈ ಬಾಲಕನ ಕಾಮೆಂಟ್ರಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.


