ಬಡವರ, ಹಸಿದವರ ಹೊಟ್ಟೆ ತುಂಬಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ‘ಶ್ರೀರಾಮಚಂದ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಡಿಹೊಗಳಿದ್ದಾರೆ.
State News Live: ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ - ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರು (ಜ.28): ಗಾಂಧೀಜಿ ಹೆಸರಿನ 'ಮನರೇಗಾ' ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ 'ಜಿ ರಾಮ್ ಜಿ' ಕಾಯ್ದೆ ವಿರುದ್ದ ಬೃಹತ್ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. 'ಮನರೇಗಾ' ಮರು ಜಾರಿಯಾಗುವವರೆಗೆ ಹಂತ ಹಂತವಾಗಿ ಹೋರಾಟ ತೀವ್ರ ಗೊಳಿಸಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆದ ರೈತ ಚಳವಳಿ ಮಾದರಿಗೆ ಈ ಹೋರಾಟ ಕೊಂಡೊಯ್ಯುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 28th January:ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ - ಶಾಸಕ ಪ್ರದೀಪ್ ಈಶ್ವರ್
Karnataka News Live 28th January:150 ದೇಶಗಳಿಗೆ ಭಾರತದ ಇಂಧನ - ಮೋದಿ
ಇಂಧನ ಭದ್ರತೆಯಿಂದ ಭಾರತ ಈಗ ಇಂಧನ ಸ್ವಾತಂತ್ರ್ಯದತ್ತ ದಾಪುಗಾಲು ಹಾಕುತ್ತಿದೆ. ಭಾರತದಲ್ಲಿರುವ ಬೃಹತ್ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಆರ್ಥಿಕ ಪ್ರಗತಿಯಿಂದಾಗಿ ಪೆಟ್ರೋ ಕೆಮಿಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ.
Karnataka News Live 28th January:Shivamogga - ಹೊಸನಗರ-ಬೆಂಗಳೂರು ಸ್ಲೀಪರ್ ಬಸ್‌ಗೆ ಭೀಕರ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ಪಾರಾದ 40 ಪ್ರಯಾಣಿಕರು!
ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ಸನ್ನು ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದರಿಂದ ಸುಮಾರು 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Karnataka News Live 28th January:ರಾಮನಗರದ ಬಿಸಿ ಕಲ್ಲಿನ ಮೇಲೆ ಬರಿಗಾಲಲ್ಲಿ ‘ಶೋಲೆ’ ಡ್ಯಾನ್ಸ್‌ಗೆ ಅಮ್ಮ ಆಕ್ಷೇಪ - ಹೇಮಾಮಾಲಿನಿ
‘ಮೇ ತಿಂಗಳ ಉರಿಬಿಸಿಲಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಬಿಸಿಲಿನ ಕಾವಿಗೆ ಸುಡುತ್ತಿದ್ದ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನೃತ್ಯ ಮಾಡದಂತೆ ನನ್ನ ಅಮ್ಮ ಎಚ್ಚರಿಸಿದ್ದರು’ ಎಂದು ನೆನಪುಗಳನ್ನು ಹೇಮಾಮಾಲಿನಿ ಮೆಲುಕು ಹಾಕಿದ್ದಾರೆ.
Karnataka News Live 28th January:ಎಲ್ಲ ಗ್ರಾಪಂಗಳಿಗೆ ಗಾಂಧಿ ಹೆಸರು - ಸಿಎಂ, ಡಿಸಿಎಂ
ರಾಜ್ಯದ ಎಲ್ಲಾ 6000 ಗ್ರಾಪಂಗಳಿಗೂ ಮಹಾತ್ಮ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
Karnataka News Live 28th January:ಜಿ ರಾಮ್ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಗಾಂಧೀಜಿ ಹೆಸರಿನ ‘ಮನರೇಗಾ’ ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ‘ಜಿ ರಾಮ್ ಜಿ’ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ.
Karnataka News Live 28th January:ಬೆಂಗ್ಳೂರಲ್ಲಿ ಪಂದ್ಯ ಆಡಲು ಆರ್‌ಸಿಬಿ ಬಹುತೇಕ ಒಪ್ಪಿಗೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಫ್ರಾಂಚೈಸಿಯು ಈ ಬಾರಿ ಐಪಿಎಲ್‌ನಲ್ಲಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.