ಬೆಂಗಳೂರಿನಲ್ಲಿ ಕ್ಯಾಬ್ ಡಿಕ್ಕಿ ಹೊಡೆದಿದ್ದಕ್ಕೆ ಸಿಟ್ಟಿಗೆದ್ದ ಕಾರು ಚಾಲಕ, ಕ್ಯಾಬ್ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ತಡೆಯಲು ಬಂದ ತನ್ನ ತಾಯಿಯನ್ನೇ ದೂರ ತಳ್ಳಿ ಹಲ್ಲೆ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಟ್ಟಿನ ಭರದಲ್ಲಿ ತಾಯಿಯನ್ನೇ ದೂರ ತಳ್ಳಿದ ಮಗ

ಬೆಂಗಳೂರು: ಸಿಟ್ಟಿನ ಬರದಲ್ಲಿ ಕೆಲವೊಮ್ಮೆ ಜನರು ತಮ್ಮ ಮುಂದಿರೋದು ಯಾರು ಎಂಬುದನ್ನೇ ಮರೆತು ಬಿಡುತ್ತರೆ. ಅದೇ ರೀತಿ ಇಲ್ಲೊಬ್ಬ ಯುವಕ ಕ್ಯಾಬ್ ಚಾಲಕನಿಗೆ ಹೊಡೆಯುವುದಕ್ಕೆ ಹೋಗಿ ತನ್ನ ತಾಯಿಯನ್ನೇ ದೂರ ತಳ್ಳಿದ್ದಾನೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಗುಟ್ಟಹಳ್ಳಿ ಬಸ್ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರು ಎಂದರೆ ಮೊದಲಿಗೆ ನೆನಪಿಗೆ ಬರೋದೆ ಟ್ರಾಫಿಕ್, ಟ್ರಾಫಿಕ್ ಮಧ್ಯೆ ವಾಹನ ಚಲಾಯಿಸಿಕೊಂಡು ಗುರಿ ತಲುಪುವುದೇ ಒಂದು ದೊಡ್ಡ ಸಾಹಸ ಹೀಗಿರುವಾ ಕ್ಯಾಬೊಂದು ಮುಂದಿದ್ದ ವ್ಯಕ್ತಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಸಿಟ್ಟಿಗೆದ್ದ ಕಾರಿನ ಮಾಲೀಕ ಕಾರಿನಿಂದ ಇಳಿದು ಬಂದು ಹಿಂದಿದ್ದ ಕ್ಯಾಬ್ ಚಾಲಕನಿಗೆ ಥಳಿಸುವುದಕ್ಕೆ ಹೋಗಿದ್ದಾನೆ. ಈ ವೇಳೆ ಆ ಕಾರು ಮಾಲೀಕನ ತಾಯಿ ಆತನಿಗೆ ಸಂಯಮದಿಂದ ವರ್ತಿಸಲು ಹೇಳಿದ್ದಾರೆ. ಅಲ್ಲದೇ ಕ್ಯಾಬ್ ಚಾಲಕನಿಗೆ ಥಳಿಸುವುದ್ದಕ್ಕೆ ಹೋದಾಗ ಎದುರು ನಿಂತು ತಡೆದಿದ್ದಾರೆ. ಆದರೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ ಆ ಯುವಕ ಎದುರಿರುವುದು ತನ್ನ ತಾಯಿ ಎಂಬುದನ್ನು ಕೂಡ ಲೆಕ್ಕಿಸದೇ ಅವರನ್ನು ದೂರ ತಳ್ಳಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ.

Add Asianetnews Kannada as a Preferred SourcegooglePreferred

ಕೋಪದ ಕೈಗೆ ಬುದ್ಧಿ ಕೊಟ್ಟ ಯುವಕ

ಇದರಿಂದ ಸಣ್ಣದಾಗಿ ಮಾತುಕತೆಯ ಮೂಲಕ ಬಗೆಹರಿಸಬಹುದಾಗಿದ್ದ ಈ ಗಲಾಟೆ ದೊಡ್ಡದಾಗಿದೆ. ತಾಯಿ ಸಂಯಮದಿಂದ ಇರುವಂತೆ ಹೇಳಿದರು ಕೇಳದ ಆತ ಕಾರಿನಿಂದ ಇಳಿದು ಹೋಗಿದ್ದಾನೆ. ಈ ವೇಳೆ ತಾಯಿಯೂ ಕೂಡ ಜೊತೆಗೆ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಕ್ಯಾಬ್ ಚಾಲಕನಿಗೆ ಹೊಡೆಯುವುದನ್ನು ತಡೆಯುವುದಕ್ಕೆ ಅವರು ಮುಂದಾದಾಗ ಆತ ತಾಯಿಯನ್ನೇ ದೂರ ತಳ್ಳಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಈಗ ವೈರಲ್ ಆಗಿರುವ ವೀಡಿಯೋದಲ್ಲಿ, ವೃದ್ಧ ತಾಯಿ ತನ್ನ ಮಗ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸುವುದನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಆತ ತನ್ನ ಆಕ್ರಮಣ ಮುಂದುವರೆಸಿದ್ದು, ತಾಯಿಯನ್ನು ನೆಲಕ್ಕೆ ತಳ್ಳಿ ಕ್ಯಾಬ್ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಒಬ್ಬರು ವೀಡಿಯೋ ಹಂಚಿಕೊಂಡಿದ್ದು,ಗುಟ್ಟಹಳ್ಳಿ ಬಸ್ ನಿಲ್ದಾಣದಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಲು ಈ ವ್ಯಕ್ತಿ (KA09MB3973) ತನ್ನ ಸ್ವಂತ ತಾಯಿಯನ್ನು ಹೇಗೆ ನೆಲಕ್ಕೆ ತಳ್ಳಿದನೆಂದು ನೋಡಿ. ತಪ್ಪೋ ಅಲ್ಲವೋ, ನಾವು ಹೀಗೆಯೇ ವರ್ತಿಸುತ್ತೇವೆಯೇ? ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಮೀನಿಗೆ ಜಿರಳೆ ಔಷಧಿ ಹಿಟ್ ಸ್ಪ್ರೇ ಮಾಡಿದ ಯುವಕ

ಆ ಕಾರು ಚಾಲಕ ಕಾರನ್ನು ಸಡನ್ ಆಗಿ ನಿಲ್ಲಿಸಿದ ನಂತರ ಕ್ಯಾಬ್ ಆತನ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಅವನು ಚಾಲಕನಿಗೂ ಬಲವಾಗಿ ಕಪಾಳಮೋಕ್ಷ ಮಾಡಿದನು. ಪೊಲೀಸರು ಬಂದರು ಆದರೆ ಸ್ಥಳದಲ್ಲೇ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹ ಗೂಂಡಾಗಿರಿಯನ್ನು ಏಕೆ ಸಹಿಸಿಕೊಳ್ಳಲಾಗುತ್ತದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ಅನೇಕರು ಈ ವೀಡಿಯೋವನ್ನು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ನಮ್ಮ ಪೊಲೀಸರು ಇಂತಹ 'ರೋಡ್ ಕಿಂಗ್‌'ಗಳಿಂದ ನಮ್ಮನ್ನು ಸುರಕ್ಷಿತವಾಗಿಡಲು ಏನು ಮಾಡುತ್ತಿದ್ದಾರೆ? ಹಗಲು ಹೊತ್ತಿನಲ್ಲಿ ವಯಸ್ಸಾದ ಮಹಿಳೆಗೆ ಕಪಾಳಮೋಕ್ಷ ಮಾಡಿ ತಳ್ಳುತ್ತಿದ್ದಾರೆ ಎಂದು ಒಬ್ಬರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ

Scroll to load tweet…