- Home
- News
- State
- Karnataka News Live: ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು
Karnataka News Live: ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು

ಹುಬ್ಬಳ್ಳಿ : ಕಳೆದ ವಾರವಷ್ಟೇ ಮೂರು ಗಂಟೆಗೂ ಅಧಿಕ ಕಾಲ ಆಗಸದಲ್ಲಿ ಸುತ್ತಾಡಿ ಆತಂಕ ಸೃಷ್ಟಿಸಿದ್ದ ಫ್ಲೈ-91 ವಿಮಾನ ಹುಬ್ಬಳ್ಳಿಯಲ್ಲಿ ಶನಿವಾರ ಮತ್ತೆ ಲ್ಯಾಂಡಿಂಗ್ ಸಮಸ್ಯೆ ಕಂಡುಬಂತು. 35 ನಿಮಿಷಕ್ಕೂ ಹೆಚ್ಚು ಅವಧಿ ಆಕಾಶದಲ್ಲೇ ಸುತ್ತಿ ಬಳಿಕ ಸುರಕ್ಷಿತವಾಗಿ ಕೆಳಕ್ಕಿಳಿಯಿತು.
10 ದಿನದಲ್ಲಿ ಇದು ಮೂರನೇಯ ಬಾರಿ ಈ ರೀತಿ ಆಗುತ್ತಿರುವುದು. ಫ್ಲೈ-91 ವಿಮಾನ ಸೇವೆ ಹಾಗೂ ಸೌಲಭ್ಯ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಈ ರೀತಿಯ ಘಟನೆಗಳು ಸಂಶಯವನ್ನು ಹುಟ್ಟು ಹಾಕುತ್ತಿವೆ.
ಐಸಿ 3401 ಫ್ಲೈಟ್ ಶನಿವಾರ ಮಧ್ಯಾಹ್ನ 3.13ಕ್ಕೆ ಹೈದರಾಬಾದ್ನಿಂದ ಹೊರಟಿತ್ತು. ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಉಂಟಾಗಿ ಬೆಳಗಾವಿ ಸೇರಿದಂತೆ ವಿವಿಧೆಡೆ ಆಗಸದಲ್ಲೇ ಸುತ್ತಾಡಿ, ಬಳಿಕ 5.09ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯಿತು.
ಈ ಬಗ್ಗೆ ಕೇಳಿದಾಗ ಫ್ಲೈ-91 ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಪಲೇಶ ಅವರು, ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ 35 ನಿಮಿಷ ತಡವಾಯಿತು ಎಂದು ಹೇಳಿದರು. ಪದೇ ಪದೇ ಫ್ಲೈ-91ಗೆ ಲ್ಯಾಂಡಿಂಗ್ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಕೆಲ ಪ್ರಯಾಣಿಕರು ವಿಮಾನದ ಸುರಕ್ಷತೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
Karnataka News Live 27 April 2026ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು
Karnataka News Live 27 April 2026ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸಾಲದಲ್ಲಿ ಮುಳುಗಿದೆ - ಸಚಿವ ಸಂತೋಷ್ ಲಾಡ್
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
Karnataka News Live 27 April 2026ಅಂಬಾನಿ ಮನೇಲಿ ಮಂಗಳಾರತಿ ಎತ್ತಿದ ಬ್ಯಾಡ್‌ಗರ್ಲ್; ಗೋವಿಗೆ ಆಹಾರ ಕೊಟ್ಟ Singer Rihanna
Rihanna: ಪಾಪ್ ತಾರೆ ರಿಹಾನಾ ಮುಂಬೈನಲ್ಲಿರುವ ಅಂಬಾನಿ ನಿವಾಸಕ್ಕೆ ಭೇಟಿ ನೀಡಿ, ವಿಶೇಷ ಔತಣದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ, ರಿಲಯನ್ಸ್ ರೀಟೇಲ್‌ನ 'ಟೈರಾ' ಪ್ಲಾಟ್‌ಫಾರ್ಮ್ ಮತ್ತು ಸೆಫೊರಾ ಮೂಲಕ ಭಾರತದಲ್ಲಿ ತಮ್ಮ 'ಫೆಂಟಿ ಬ್ಯೂಟಿ' ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ.
Karnataka News Live 27 April 2026ಮಹಿಳಾ ಜನಾಕ್ರೋಶ ಸಭೆಗೆ ಕರೆ - ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ
ನಾರಿಶಕ್ತಿ ವಂದನೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಮೇ 1ರಂದು ಮಹಿಳಾ ಜನಾಕ್ರೋಶ ಸಭೆ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್ ನೀತಿಯನ್ನು ಬಯಲು ಮಾಡುವ ಕಾರ್ಯಕ್ರಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
Karnataka News Live 27 April 2026'ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ' ಕೋಡಿ ಶ್ರೀಗಳ ಎಚ್ಚರಿಕೆ - ದೇಶಕ್ಕೆ ಕಾದಿದೆಯೇ ಮಹಾ ಸಂಕಷ್ಟ?
Karnataka News Live 27 April 2026ಕೆಲಸ ಇದೆ ಎಂದು ಬೀಗಬೇಡ! ಬೃಹತ್ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!
ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್‌ನಂತಹ ಟೆಕ್ ಕಂಪೆನಿಗಳು ಲೇಆಫ್ ಮಾಡುತ್ತಿವೆ. ಈಗ ಅಕ್ಸಿಸ್ ಬ್ಯಾಂಕ್ ಕೂಡ ಲೇಆಫ್ ಮಾಡಿದೆ.
Karnataka News Live 27 April 2026ಒಂದು ದಿನವೂ ರಜೆ ತೆಗೆದುಕೊಳ್ಳದೇ ಸದಾ ಕೆಲಸ ಮಾಡುತ್ತಿದ್ದ ಶ್ವೇತಾ - ಟೆಕ್ಕಿ ಸಾವಿನ ಬಗ್ಗೆ ಸಹೋದ್ಯೋಗಿ ಹೇಳಿದ್ದೇನು?
ಹಾಸನದ 25 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ವಿಚಾರ ಅನೇಕರನ್ನು ದಂಗಾಗುವಂತೆ ಮಾಡಿದೆ. ಕೆಲಸವನ್ನು ನಿರಂತರವಾಗಿ ಪ್ರೀತಿಸುತ್ತಿದ್ದ, ಶ್ವೇತಾ ತಲೆನೋವನ್ನು ನಿರ್ಲಕ್ಷಿಸಿದ್ದಳು ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ.
Karnataka News Live 27 April 2026Amazon Now - ಮಂಗಳೂರು, ಮೈಸೂರಿಗೆ ಕಾಲಿಟ್ಟ ದೈತ್ಯ ಗಾತ್ರದ ಅಮೆಜಾನ್ ಕಂಪೆನಿ; 2800 ಕೋಟಿ ರೂ ಹೂಡಿಕೆ
Amazon Now 2800 Crore Rupees Investment: ಅಮೆಜಾನ್ ಕಂಪೆನಿಯು ಮಂಗಳೂರು, ಮೈಸೂರಿನತ್ತ ಕಾಲಿಟ್ಟಿದೆ. ಹೌದು, ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ರೆಡಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 27 April 2026ಹಾಸನ - ಕುಸಿದು ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ 25 ವರ್ಷದ ಶ್ವೇತಾ ಹಠಾತ್ ಸಾವು - ಆಘಾತದಲ್ಲಿ ಪೋಷಕರು
Karnataka News Live 27 April 2026Mamata Banerjee - ಮೋದಿ ಚುರುಮುರಿ, ದೀದಿ ತರಕಾರಿ; ದುಡ್ಡು ಕೊಡಿ ಅಕ್ಕೋ ಎಂದ ವ್ಯಾಪಾರಿ! Video Viral
Mamata Banerjee Vegetable Shopping Video: ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರು ತರಕಾರಿ ತಗೊಂಡು ದುಡ್ಡು ಕೊಡದೆ ಬಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.
Karnataka News Live 27 April 2026ಆನೇಕಲ್ - ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗು ನಿಗೂಢ ಸಾವು
Karnataka News Live 27 April 2026ರಾಜ್ಯದಲ್ಲಿ ಕನ್ನಡ ಬಿಟ್ರೆ ಹೆಚ್ಚು ಮಾತನಾಡೋ ಭಾಷೆ ಯಾವುದು ಗೊತ್ತಾ? ಕುತೂಹಲದ ಅಂಕಿ ಅಂಶ ಬಯಲು
ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳವಿದ್ದರೂ, ಕರ್ನಾಟಕದ 65% ಕ್ಕಿಂತ ಹೆಚ್ಚು ಜನರಿಗೆ ಕನ್ನಡವೇ ಪ್ರಾಥಮಿಕ ಭಾಷೆಯಾಗಿದೆ. ಈ ಲೇಖನವು ರಾಜ್ಯದಲ್ಲಿ ಅತಿ ಹೆಚ್ಚು ಮಾತನಾಡುವ ಕನ್ನಡದ ನಂತರ ಯಾವ್ಯಾವ ಭಾಷೆ ಇವೆ ಎನ್ನುವುದು ಕುತೂಹಲವನ್ನು ತಿಳಿಸುತ್ತದೆ.
Karnataka News Live 27 April 2026ಪಿಯುಸಿಯಲ್ಲೂ ಪ್ರಾಚಿ ಟಾಪರ್ - ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಮಾಡಿದವರಿಗೆ ಅಂಕಗಳ ಉತ್ತರ
10ನೇ ತರಗತಿಯಲ್ಲಿ ಟಾಪರ್ ಆಗಿದ್ದಕ್ಕೆ ತನ್ನ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಆಗಿದ್ದ ಪ್ರಾಚಿ ನಿಗಮ್, ಇದೀಗ ಪಿಯುಸಿಯಲ್ಲೂ 91.2% ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಟ್ರೋಲ್‌ಗಳನ್ನು ಕಡೆಗಣಿಸಿ, ಅಧ್ಯಯನದತ್ತ ಗಮನಹರಿಸಿದ ಅವರ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.
Karnataka News Live 27 April 2026ಕೇವಲ 1.59 ತಾಸಲ್ಲಿ 42.195 ಕಿಲೋ ಮೀಟರ್ ಮ್ಯಾರಥಾನ್ ಓಡಿದ ಸಾವೆ! ಹೊಸ ವಿಶ್ವದಾಖಲೆ
Karnataka News Live 27 April 2026Bengaluru Employee Termination - ಆಫೀಸ್ ನನ್ನ ಲೈಫ್ ಅನ್ಕೊಂಡೆ; ಕೆಲಸದಿಂದಲೇ ತೆಗೆದ್ರು; ಬೆಂಗಳೂರು ಹುಡುಗಿ
Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್ ಅಥವಾ ಟರ್ಮಿನೇಟ್ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್ ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.
Karnataka News Live 27 April 2026ಕನ್ನಡ ನಾಡಿನ ಮಕ್ಕಳು ಕನ್ನಡ ಪರೀಕ್ಷೇಲೇ ಫೇಲ್ ಕಳವಳಕಾರಿ
ಈ ಬಾರಿಯ SSLC ಪರೀಕ್ಷೆಯಲ್ಲಿ ಐತಿಹಾಸಿಕ ಫಲಿತಾಂಶ ಬಂದಿದ್ದರೂ, ಪ್ರಥಮ ಭಾಷೆ ಕನ್ನಡದಲ್ಲೇ ಸುಮಾರು 19 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಬೋಧನಾ ಕ್ರಮ, ಭಾಷೆಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತಕ್ಷಣದ ಪರಾಮರ್ಶೆಯ ಅಗತ್ಯವನ್ನು ಒತ್ತಿಹೇಳುತ್ತದೆ.
Karnataka News Live 27 April 2026'ಮದುವೆ ಬೇಡ, ಮಗು ಬೇಕು ಅಂದ್ರೇನು ತಪ್ಪು?'.. ಕನ್ನಡತಿ ನಿತ್ಯಾ ಮೆನನ್ ಬೋಲ್ಡ್ ಮಾತಿಗೆ ಸಿಕ್ಕಾಪಟ್ಟೆ ಸಂಚಲನ!
ಸಿನಿಮಾದಲ್ಲಿ ಅಷ್ಟೇ ಅಲ್ಲದೆ ನಿಜ ಜೀವನದಲ್ಲೂ ನಿತ್ಯಾ ಮೆನನ್ ಒಬ್ಬ 'ಬೋಲ್ಡ್ ಅಂಡ್ ಬ್ಯೂಟಿಫುಲ್' ಲೇಡಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬದುಕು ನಿಮ್ಮದು, ನಿರ್ಧಾರವೂ ನಿಮ್ಮದೇ ಎನ್ನುವ ನಿತ್ಯಾ ಮೆನನ್ ಅವರ ಈ ವೈಚಾರಿಕತೆಗೆ ನಿಮ್ಮ ಅಭಿಪ್ರಾಯವೇನು? ಭಿನ್ನ ಅಭಿಪ್ರಾಯಕ್ಕೂ ಬೆಲೆ ಇದೆ, ತಿಳಿಸಿ..
Karnataka News Live 27 April 2026ನಾಲ್ವರು ಸಾಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ - ಇಬ್ಬರ ದಾರುಣ ಸಾವು, ಯುವತಿ ಕಾಲು ಕಟ್ - ಅಪಘಾತದ ರಭಸಕ್ಕೆ ಛಿದ್ರವಾದ ದೇಹಗಳು
ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ನಾಲ್ವರು ಸಂಚರಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.