Mamata Banerjee Vegetable Shopping Video: ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರು ತರಕಾರಿ ತಗೊಂಡು ದುಡ್ಡು ಕೊಡದೆ ಬಂದಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗ್ತಿದೆ. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ( Mamata Banerjee ) ತಮ್ಮ ಸ್ವಕ್ಷೇತ್ರವಾದ ಭಬಾನಿಪುರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಎಂದೂ ತರಕಾರಿ ಖರೀದಿ ಮಾಡದ ಅವರು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ್ದಾರೆ. ಅವರ ಅನುಯಾಯಿಗಳು ಕೈಚೀಲ ತಂದು ತರಕಾರಿ ತುಂಬಿಕೊಂಡಿದ್ದಾರೆ. ಅತ್ತ ನರೇಂದ್ರ ಮೋದಿ ಅವರು 'ಬೇಲ್‌ ಪುರಿ' ಸವಿಯುವ ಮೂಲಕ ಸುದ್ದಿಯಾಗಿದ್ದರು. ಈಗ ಮಮತಾ ಬ್ಯಾನರ್ಜಿ ತರಕಾರಿ ಖರೀದಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಳಿ ಸೀರೆ ಉಟ್ಟು ಮಾರುಕಟ್ಟೆಗೆ ಬಂದ 71 ವರ್ಷದ ಮಮತಾ ಬ್ಯಾನರ್ಜಿ, ತರಕಾರಿ ಮಾರಾಟಗಾರರ ಜೊತೆ ಮಾತನಾಡಿದ್ದಾರೆ. ಬೆಲೆ ಏರಿಕೆ, ತರಕಾರಿ ಪೂರೈಕೆಯ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಹೂಗ್ಲಿ, ಉತ್ತರ 24 ಪರಗಣಗಳಲ್ಲಿ ಬೃಹತ್ ರೋಡ್ ಶೋ ಮಾಡುತ್ತಿದ್ದ ದಿನವೇ ಮಮತಾ ಅವರು ಭಬಾನಿಪುರದ ಗಲ್ಲಿಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಏನಂದ್ರು?

ಆ ವೇಳೆ ಮಾತನಾಡಿದ ಅವರು, "ನಾವು ಎಲ್ಲರೂ ಒಂದಾಗಿ ಬಾಳಬೇಕು. ನಮ್ಮವರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಈಗಾಗಲೇ ನಾವು ಅನೇಕ ದೇವಾಲಯ, ಜೈನ ಮಂದಿರ, ಇಸ್ಕಾನ್ ದೇವಾಲಯ, ಜಗನ್ನಾಥ ಧಾಮವನ್ನು ನಿರ್ಮಿಸಿದ್ದೇವೆ. ಶಿಕ್ಷಣ ಸಂಸ್ಥೆಗಳಿಗೆ ಭೂಮಿ ಕೊಟ್ಟಿದ್ದೇವೆ" ಎಂದು ಹೇಳಿದ್ದಾರೆ.

ಈ ಬಾರಿ ಮಮತಾ ಗೆಲ್ತಾರಾ?

2026ರ ವಿಧಾನಸಭಾ ಚುನಾವಣೆಯಲ್ಲಿ ಭಬಾನಿಪುರ ಕ್ಷೇತ್ರವು ಪ್ರಮುಖ ರಣರಂಗವಾಗಲಿದೆ. ಇಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರನ್ನು ಕಣಕ್ಕಿಳಿಸಲಿದ್ದಾರಂತಡ. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾರನ್ನು ಸುವೇಂದು ಸೋಲಿಸಿದ್ದರು.