- Home
- Jobs
- Private Jobs
- ಕೆಲಸ ಇದೆ ಎಂದು ಬೀಗಬೇಡ! ಬೃಹತ್ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!
ಕೆಲಸ ಇದೆ ಎಂದು ಬೀಗಬೇಡ! ಬೃಹತ್ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!
ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್‌ನಂತಹ ಟೆಕ್ ಕಂಪೆನಿಗಳು ಲೇಆಫ್ ಮಾಡುತ್ತಿವೆ. ಈಗ ಅಕ್ಸಿಸ್ ಬ್ಯಾಂಕ್ ಕೂಡ ಲೇಆಫ್ ಮಾಡಿದೆ.
14

Image Credit : Getty
ಒರಾಕಲ್‌ನಿಂದ ಉದ್ಯೋಗಿಗಳ ವಜಾ
ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್‌ಎಮ್‌ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : X
ಹಿರಿಯ ಉದ್ಯೋಗಿ ವಜಾ
ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್‌ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
34
Image Credit : Getty
ಸಿಬ್ಬಂದಿಯಲ್ಲಿ ಇಳಿಕೆ
ಭಾರತದಲ್ಲಿ ಆಕ್ಸಿಸ್ ಬ್ಯಾಂಕ್ ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.
44
Image Credit : Getty
ಬೃಹತ್ ಲಾಭ
ಈಗ ಬ್ಯಾಂಕ್‌ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ
Latest Videos

