ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲು ನಿರ್ಧರಿಸಿದೆ. ಮೀಸಲಾತಿ ಗೊಂದಲವನ್ನು ತಪ್ಪಿಸಲು ಸದ್ಯಕ್ಕೆ 50% ಮೀಸಲಾತಿ ಮಿತಿಯಲ್ಲೇ ನೇಮಕಾತಿ ನಡೆಸಲು ಸಂಪುಟ ತೀರ್ಮಾನಿಸಿದ್ದು, ಇದು ಎಸ್‌ಸಿ ಒಳ ಮೀಸಲಾತಿ ಹಂಚಿಕೆ ಕುರಿತು ಸಚಿವರಲ್ಲೇ ಚರ್ಚೆಗೆ ಕಾರಣವಾಗಿದೆ.
- Home
- News
- State
- Karnataka News Live: ಧಾರವಾಡ ಹೋರಾಟ ಬೆನ್ನಲ್ಲೇ 56,432 ಹುದ್ದೆ ನೇಮಕಾರಿಗೆ ಸರ್ಕಾರ ಗ್ರೀನ್ ಸಿಗ್ನಲ್; ಆದ್ರೆ ಎಸ್ಸಿ ಒಳಮೀಸಲಾತಿ ಗೋವಿಂದ!
Karnataka News Live: ಧಾರವಾಡ ಹೋರಾಟ ಬೆನ್ನಲ್ಲೇ 56,432 ಹುದ್ದೆ ನೇಮಕಾರಿಗೆ ಸರ್ಕಾರ ಗ್ರೀನ್ ಸಿಗ್ನಲ್; ಆದ್ರೆ ಎಸ್ಸಿ ಒಳಮೀಸಲಾತಿ ಗೋವಿಂದ!

ಬೆಂಗಳೂರು: ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್ಎ) ಜಾರಿ ನಿರ್ದೇಶನಾಲಯ(ಇ.ಡಿ.)ವು ತನಿಖೆ ನಡೆಸಿ ಪ್ರಮುಖ ಆರೋಪಿ, ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಹಾಗೂ ಸಹ ಆರೋಪಿಗಳಾದ ತರುಣ್ ಕೊಂಡೂರು ಮತ್ತು ಸಾಹಿಲ್ ಸಕಾರಿಯಾ ಜೈನ್ ವಿರುದ್ಧ ನಗರದ ಪಿಎಂಎಲ್ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.
Karnataka News Live:ಧಾರವಾಡ ಹೋರಾಟ ಬೆನ್ನಲ್ಲೇ 56,432 ಹುದ್ದೆ ನೇಮಕಾರಿಗೆ ಸರ್ಕಾರ ಗ್ರೀನ್ ಸಿಗ್ನಲ್; ಆದ್ರೆ ಎಸ್ಸಿ ಒಳಮೀಸಲಾತಿ ಗೋವಿಂದ!
Karnataka News Live:ಚಿಕ್ಕಮಗಳೂರು - ಬಿಸಿಯೂಟದ ಕೋಣೆಯಲ್ಲಿ ಬೆಂಕಿ, ಮಕ್ಕಳ ಪ್ರಾಣ ಉಳಿಸಲು ಹೋಗಿ ಅಸ್ವಸ್ಥನಾದ ತೋಟದ ಕಾರ್ಮಿಕ!
Karnataka News Live:ಪುತ್ತೂರು - ಕಾಮಗಾರಿ ದೂಳಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಕ್ಕೆ ಪ್ರಾಂಶುಪಾಲೆಗೆ ಸಸ್ಪೆಂಡ್ ಶಿಕ್ಷೆ!
ಪುತ್ತೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿಯ ದೂಳಿನ ವಿರುದ್ಧ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಾಸಕ ಅಶೋಕ್ ರೈ ಮತ್ತು ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ನಡುವೆ ವಾಗ್ವಾದ ಬೆನ್ನಲ್ಲೇ ಮೇಲೆ ಪ್ರಾಂಶುಪಾಲೆಯನ್ನ ಸರ್ಕಾರ ಅಮಾನತು ಮಾಡಿದೆ.
Karnataka News Live:BGS ಕಾಲೇಜು ವಿದ್ಯಾರ್ಥಿಯ ಅದ್ಭುತ ಸಂಶೋಧನೆ - 'HybridEcoISA' ತಂತ್ರಜ್ಞಾನಕ್ಕೆ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿ!
IoT in hybrid vehicles ಬೆಂಗಳೂರಿನ BGS ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್ ಗೌಡ ಎಸ್ ಮತ್ತು ಅವರ ತಂಡವು, ಐಓಟಿ ತಂತ್ರಜ್ಞಾನ ಆಧಾರಿತ ಸಂಶೋಧನೆಗಾಗಿ ಕಿರಿಯ ವಿಜ್ಞಾನಿಗಳ ಸಾಧನೆಗೆ ನೀಡುವ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
Karnataka News Live:ಪತಿ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಒಂದೇ ಪೋಸ್ಟ್‌ನಲ್ಲಿ ಮದ್ವೆ ಸಂಭ್ರಮ ಜೊತೆ ಟೀಕೆಗೂ ಉತ್ರರಿಸಿದ್ರಾ?
ಪತಿ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಒಂದೇ ಪೋಸ್ಟ್‌ನಲ್ಲಿ ಮದ್ವೆ ಸಂಭ್ರಮ ಜೊತೆ ಟೀಕೆಗೂ ಉತ್ರರಿಸಿದ್ರಾ? ವಿಜಯ್ ದೇವರಕೊಂಡ ಪತ್ನಿಯಾಗಿರುವ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ರಶ್ಮಿಕಾ ಬರಹ ಹಲವು ಪ್ರಶ್ನೆಗಳಿಗೂ ಉತ್ತರಿಸಿದಂತಿದೆ.
Karnataka News Live:Photos - ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಏಳು ವರ್ಷಗಳ ಸ್ನೇಹ, ಪ್ರೀತಿ ಈಗ ದಾಂಪತ್ಯ ಜೀವನದ ತಿರುವು ಪಡೆದಿದೆ. ಇವರಿಬ್ಬರು ಫೆಬ್ರವರಿ 27ರಂದು ಮದುವೆ ಆಗಿದ್ದಾರೆ. ರಶ್ಮಿಕಾ ಮಂದಣ್ಣರನ್ನು ಯಾಕೆ ಮದುವೆ ಆದೆ ಎಂದು ವಿಜಯ್ ದೇವರಕೊಂಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
Karnataka News Live:ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ಕೋರ್ಟ್; ರೈತನಿಗೆ ಅನ್ಯಾಯವಾಗುವುದನ್ನ ಸಹಿಸದ ನ್ಯಾಯಾಲಯ!
ಕಲಬುರಗಿಯಲ್ಲಿ ಭೂಸ್ವಾಧೀನ ಪರಿಹಾರ ವಿಳಂಬವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಸರ್ಕಾರಿ ಕಾರನ್ನು ಜಪ್ತಿ ಮಾಡಲು ಆದೇಶಿಸಿದೆ. 19 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದ ನಂದಿಕೂರ ಗ್ರಾಮದ ರೈತರಿಗೆ ನ್ಯಾಯ ಒದಗಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
Karnataka News Live:ರಾಜ ರಾಣಿ ಸ್ಟೈಲ್‌ನಲ್ಲಿ ಮದುವೆಯಾದ Rashmika Mandanna - ಫಸ್ಟ್ ರಿಯಾಕ್ಷನ್ ಕೊಟ್ಟ ವಿಜಯ್ ದೇವರಕೊಂಡ ಪತ್ನಿ
ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಮದುವೆ ಆಗಿದ್ದಾರೆ. ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉದಯಪುರದಲ್ಲಿ ಈ ಜೋಡಿ ಮದುವೆ ಆಗಿದೆ. ಫೆಬ್ರವರಿ 26ರಂದು ಬೆಳಗ್ಗೆಯ ಮುಹೂರ್ತದಲ್ಲಿ ಮದುವೆ ನಡೆದಿದೆ.
Karnataka News Live:ಉದ್ಯಾನ ನಗರಿ ಬೆಂಗಳೂರಿನ ಹಸಿರು ಕ್ರಾಂತಿ, ಪಿಂಕ್ ಹೂವುಗಳ ಆಕರ್ಷಣೆಗೆ ಕಾರಣ ಧಾರವಾಢದ ಈ ಮೇರು ವ್ಯಕ್ತಿ!
ಫೋಟೋ ಕ್ರೆಡಿಟ್: ವೀರಮಣಿ ಕನ್ನಡ ಪ್ರಭ
ಬೆಂಗಳೂರನ್ನು "ಉದ್ಯಾನ ನಗರಿ"ಯಾಗಿ ರೂಪಿಸಿದ ಪ್ರಮುಖ ರೂವಾರಿ ಧಾರವಾಡದ ಈ ವ್ಯಕ್ತಿ. 1980ರ ದಶಕದಲ್ಲಿ, ಅವರು ಕಡಿಮೆ ವೆಚ್ಚದ ತಂತ್ರಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದ ಮೂಲಕ 15 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಟ್ಟು, ನಗರಕ್ಕೆ ಹಸಿರು ಹೊದಿಕೆ ನೀಡಿದರು.
Karnataka News Live:ಮಗಳ ಮದುವೆ, ಬೋರ್‌ವೆಲ್‌ಗಾಗಿ ಮಾಡಿದ ಸಾಲ, 120 ಅಡಿ ಟವರ್ ಏರಿ ಸಾಯಲು ಯತ್ನಿಸಿದ ರೈತನ ರಕ್ಷಣೆ
ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸಾಲಬಾಧೆಯಿಂದ ನೊಂದ ರೈತನೊಬ್ಬ 120 ಅಡಿ ಎತ್ತರದ ಹೈಟೆನ್ಶನ್ ಟವರ್ ಏರಿ ಆತ್ಮ೧ಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರೈತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
Karnataka News Live:ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ
Karnataka News Live:Internal Reservation Row - ಸಿಎಂ ನೇತೃತ್ವದಲ್ಲಿ ದಲಿತ ಸಚಿವರ ಮಹತ್ವದ ಸಭೆ, ಮೂರು ಮಹತ್ವದ ನಿರ್ಧಾರ, ರಾಜಭವನಕ್ಕೆ ಸಚಿವರ ನಿಯೋಗ ದೌಡು!
Karnataka Internal Reservation Row ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ತಡೆ! ಸಿಎಂ ಸಿದ್ದರಾಮಯ್ಯ ನೇತೃತ್ವದ ದಲಿತ ಸಚಿವರ ಸಭೆಯ 3 ಪ್ರಮುಖ ತೀರ್ಮಾನಗಳೇನು? ನೇಮಕಾತಿ ಪ್ರಕ್ರಿಯೆ ಯಾವಾಗ ಶುರು? ತಿಳಿಯಲು ಓದಿ.
Karnataka News Live:ಬೆಂಗಳೂರು - ಡ್ರಿಪ್ಸ್ ತೆಗೆಯುವಾಗ ದಾದಿಯಿಂದ 6 ತಿಂಗಳ ಮಗುವಿನ ಬೆರಳು ಕಟ್! ಆಸ್ಪತ್ರೆಯಲ್ಲಿ ಕಂದನ ಚೀತ್ಕಾರ!
Karnataka News Live:ತುಮಕೂರು - ಪಾವಗಡದಲ್ಲಿ ಮಟ್ಕಾ ಕಿಂಗ್‌ಪಿನ್ ಬಂಧಿಸಿ, ಬೀದಿಗಳಲ್ಲಿ ಮೆರವಣಿಗೆ ಮಾಡಿದ ಪೊಲೀಸರು!
ಪಾವಗಡ ಪಟ್ಟಣದ ಮಟ್ಕಾ ಕಿಂಗ್‌ಪಿನ್ ಅಶ್ವಥ್ ಮನೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಆತನಿಗೆ ಸಾಥ್ ನೀಡುತ್ತಿದ್ದ ಸೊಸೆ ಶಿಲ್ಪಾಳನ್ನ ಸಹ ಬಂಧಿಸಿದ್ದಾರೆ,
Karnataka News Live:ಮಲ್ಲಿಕಾರ್ಜುನ ಮುತ್ಯಾ ಕೇಸ್‌ಗೆ ಬಿಗ್ ಟ್ವಿಸ್ಟ್ - 'ಅಪ್ಪಾಜಿ ನಮಗೆ ದೇವರು' ಎಂದು ಕಣ್ಣೀರಿಟ್ಟ ಬಾಲಕಿ ಪೋಷಕರು!
ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಂತ್ರಸ್ತ ಬಾಲಕಿಯ ಪೋಷಕರೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮುತ್ಯಾ ಅವರು ತಮ್ಮ ಮಗಳಿಗೆ ಆಶೀರ್ವಾದ ಮಾಡುತ್ತಿದ್ದ ವಿಡಿಯೋವನ್ನು ಕಿಡಿಗೇಡಿಗಳು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
Karnataka News Live:ರಾಮನಗರದಲ್ಲಿ 1.55 ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ವಶ, 235 ಮಂದಿ ಬಂಧನ!
ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಕಳೆದ 3 ವರ್ಷಗಳಲ್ಲಿ 1.55 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 235 ಮಂದಿಯನ್ನು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ದಂಧೆಯ ಹಿಂದೆ ಅಂತರರಾಷ್ಟ್ರೀಯ ಜಾಲದ ಶಂಕೆ ವ್ಯಕ್ತವಾದೆ.
Karnataka News Live:ರಾಜ್ಯ ಬಜೆಟ್ ಬಳಿಕ ಆಟೋಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ - ಸಚಿವ ರಾಮಲಿಂಗಾರೆಡ್ಡಿ
ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಮಹಿಳೆಯರು ಮತ್ತು ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಉಚಿತ ಆಟೋ ಚಾಲನಾ ತರಬೇತಿ ನೀಡಲಾಗುತ್ತಿದೆ. ಸಚಿವ ರಾಮಲಿಂಗಾರೆಡ್ಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈಗಾಗಲೇ 500ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ.
Karnataka News Live:ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು!
ಪೋಕ್ಸೋ ಪ್ರಕರಣದಡಿ ತಲೆಮರೆಸಿಕೊಂಡಿರುವ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾನ ಹಳೆಯ ಆಡಿಯೋವೊಂದು ವೈರಲ್ ಆಗಿದೆ. 2023ರ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್‌ಗೆ ಗೆಲುವಿನ ಭರವಸೆ ನೀಡಿ ವಿಫಲವಾಗಿದ್ದ ಈ ಆಡಿಯೋ, ಮುತ್ಯಾನ ದೈವಶಕ್ತಿಯ ಡೋಂಗಿತನವನ್ನು ಬಯಲು ಮಾಡಿದೆ.
Karnataka News Live:ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ಪ್ರತ್ಯಕ್ಷ - 'ನಾನು ಓಡಿ ಹೋಗಿಲ್ಲ, ಪೊಲೀಸರು ಕರೆದಾಗ ಬರ್ತೀನಿ'
ಯಾದಗಿರಿಯ ಪೋಕ್ಸೋ ಪ್ರಕರಣದ ಆರೋಪಿ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ, ತಲೆಮರೆಸಿಕೊಂಡ ನಂತರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಾನು ಎಲ್ಲೂ ಹೋಗಿಲ್ಲ, ಮಠದ ಸಾಮೂಹಿಕ ವಿವಾಹದ ಲಗ್ನ ಪತ್ರಿಕೆ ಹಂಚಲು ಹೊರಗೆ ಬಂದಿದ್ದೇನೆ. ಪೊಲೀಸರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ.
Karnataka News Live:ಕನ್ನಡದ ನಿರ್ದೇಶಕನ ಕಿಡ್ನಾಪ್, ದುನಿಯಾ ವಿಜಯ್ ಸಿನೆಮಾದ ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್!
ನಿರ್ದೇಶಕ ಅನೀಶ್ ಅವರನ್ನು ಕಾರು ಖರೀದಿಸುವ ನೆಪದಲ್ಲಿ ಮುಂಬೈನಿಂದ ಕರೆಸಿ ಅಪಹರಿಸಲಾಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ನಟಿಯೊಬ್ಬಳ ಸಹಾಯದಿಂದ ಈ ಕೃತ್ಯ ಎಸಗಲಾಗಿದ್ದು, ನಿರ್ದೇಶಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಈ ಸಂಬಂಧ ನಟಿ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.