- Home
- Entertainment
- Sandalwood
- ನಾನ್ ಇದೇ ಕಾರಣಕ್ಕೆ ವಿಜಯ್ ದೇವರಕೊಂಡ ಮದುವೆಯಾದೆ, ಏನ್ರೀ ಈಗ?: Rashmika Mandanna ರಾಣಿ ವಧು ಲುಕ್
ನಾನ್ ಇದೇ ಕಾರಣಕ್ಕೆ ವಿಜಯ್ ದೇವರಕೊಂಡ ಮದುವೆಯಾದೆ, ಏನ್ರೀ ಈಗ?: Rashmika Mandanna ರಾಣಿ ವಧು ಲುಕ್
Rashmika Mandanna Marriage: ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಮದುವೆ ಆಗಿದ್ದಾರೆ. ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉದಯಪುರದಲ್ಲಿ ಈ ಜೋಡಿ ಮದುವೆ ಆಗಿದೆ. ಫೆಬ್ರವರಿ 26ರಂದು ಬೆಳಗ್ಗೆಯ ಮುಹೂರ್ತದಲ್ಲಿ ಮದುವೆ ನಡೆದಿದೆ.

ರಾಜ ರಾಣಿ ಸ್ಟೈಲ್‌ನಲ್ಲಿ ಮದುವೆ
ಈ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುಂದರವಾದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ರಾಜ ರಾಣಿ ಸ್ಟೈಲ್‌ನಲ್ಲಿ ಈ ಜೋಡಿ ಮದುವೆ ಆಗಿರೋದು ವಿಶೇಷ.
ನನ್ನ ಪ್ರಕಾರ ವಿಜಯ್ ಹೇಗೆ?
ನನ್ನ ವಿಜಯ್ ನಿಜವಾದ ಪ್ರೀತಿ ಎಂದರೆ ಏನು ಎಂದು ನನಗೆ ಕಲಿಸಿದರು, ನೆಮ್ಮದಿಯಿಂದ ಬದುಕುವುದು ಹೇಗಿರುತ್ತದೆ ಎಂದು ತೋರಿಸಿಕೊಟ್ಟರು! ದೊಡ್ಡ ಕನಸುಗಳನ್ನು ಕಾಣುವುದು ತಪ್ಪಲ್ಲ ಎಂದು ಪ್ರತಿದಿನ ಹೇಳಿದರು, ನನ್ನ ಕಲ್ಪನೆಗೂ, ಊಹೆಗೂ ಮೀರಿದ ಸಾಧನೆ ಮಾಡುವ ಶಕ್ತಿ ನನಗಿದೆ ಎಂದು ಸದಾ ಪ್ರೋತ್ಸಾಹ ಕೊಟ್ಟವರು ಇವರು
ಟ್ರಿಪ್ ಮಾಡೋದು ಬೆಸ್ಟ್
ಯಾರನ್ನೂ ಲೆಕ್ಕಿಸಲಿಲ್ಲ, ನಾನು ಮನಸಾರೆ ಕುಣಿಯಲು ನನಗೆ ಯಾವತ್ತೂ ಅಡ್ಡಿ ಮಾಡಲಿಲ್ಲ. ಸ್ನೇಹಿತರ ಜೊತೆ ಪ್ರಯಾಣ ಮಾಡುವುದು ಜೀವನದ ಉತ್ತಮ ಅನುಭವ ಎಂದು ತೋರಿಸಿಕೊಟ್ಟರು.
ಪುಸ್ತಕವನ್ನು ಬರಿತೀನಿ
ನಾನು ವಿಜಯ್ ದೇವರಕೊಂಡ ಬಗ್ಗೆ ನಾನು ಪುಸ್ತಕವನ್ನೇ ಬರೆಯಬಲ್ಲೆ. ಇಂದು ನಾನು ಯಾವ ರೀತಿಯ ಮಹಿಳೆ ಆಗಬೇಕೆಂದು ಕನಸು ಕಂಡಿದ್ದೆನೋ, ಹಾಗೆಯೇ ಆಗಿದ್ದೇನೆ. ಅದಕ್ಕೆ ವಿಜಯ್ ದೇವರಕೊಂಡ ಕಾರಣ. ವಿಜಯ್ ನನ್ನನ್ನು ಈ ರೀತಿ ರೂಪಿಸಿದ್ದಾರೆ, ನಾನು ನಿಜವಾಗಿಯೂ ಧನ್ಯಳು.
ನಿನ್ನ ಬಗ್ಗೆ ಹೇಳೋಕೆ ಪದಗಳು ಸಾಕಾಗಲ್ಲ
ವಿಜ್ಜು, ನಿನ್ನ ಮೇಲೆ ನನಗೆ ಇರುವ ಭಾವನೆಗಳನ್ನು ವಿವರಿಸಲು ಪದಗಳೇ ಸಾಲುವುದಿಲ್ಲ. ಅದನ್ನು ನಾನು ನಿನಗೆ ಯಾವಾಗಲೂ ಹೇಳುತ್ತಿರುತ್ತನೆ! ಆದರೆ ಈಗ ಇದ್ದಕ್ಕಿದ್ದಂತೆ ನನ್ನೆಲ್ಲ ಸಾಧನೆ, ಹೋರಾಟ, ಸುಖ-ದುಃಖ, ನನ್ನ ಜೀವನ - ಎಲ್ಲದಕ್ಕೂ ಒಂದು ಅರ್ಥ ಸಿಕ್ಕಂತಾಗಿದೆ. ಈಗ ಇದೆಲ್ಲವನ್ನೂ ನೋಡಲು, ನನ್ನ ಜೀವನದ ದೊಡ್ಡ ಭಾಗವಾಗಲು ನೀನು ನನ್ನ ಜೊತೆಗಿದ್ದೀಯ!
ನಿನ್ನ ಹೆಂಡ್ತಿ ಎನ್ನೋದು ಹೆಮ್ಮೆ
ನಿನ್ನ ಹೆಂಡತಿಯಾಗಿ ಜೀವನ ಮಾಡಲು ನಾನು ತುಂಬ ಅಂದ್ರೆ ತುಂಬ ಕಾತುರಳಾಗಿದ್ದೇನೆ. ನಿನ್ನ ಹೆಂಡತಿ ಎನಿಸಿಕೊಳ್ಳುವುದು ನನಗೆ ಹೆಮ್ಮೆಯ ವಿಷಯವಾಗಿದೆ.
ಪಾರ್ಟಿ ಮಾಡೋಣ
ಇನ್ನು ಪಾರ್ಟಿ ಶುರು. ಬಾ, ಇಬ್ಬರೂ ಸೇರಿ ನಮ್ಮ ಜೀವನವನ್ನು ಅತ್ಯಂತ ಸುಂದರವಾಗಿ ಕಳೆಯೋಣ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

