- Home
- Entertainment
- Sandalwood
- Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda
Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಏಳು ವರ್ಷಗಳ ಸ್ನೇಹ, ಪ್ರೀತಿ ಈಗ ದಾಂಪತ್ಯ ಜೀವನದ ತಿರುವು ಪಡೆದಿದೆ. ಇವರಿಬ್ಬರು ಫೆಬ್ರವರಿ 27ರಂದು ಮದುವೆ ಆಗಿದ್ದಾರೆ. ರಶ್ಮಿಕಾ ಮಂದಣ್ಣರನ್ನು ಯಾಕೆ ಮದುವೆ ಆದೆ ಎಂದು ವಿಜಯ್ ದೇವರಕೊಂಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಾಕೆ ಮದುವೆ ಆದೆ?
ಅಂದಹಾಗೆ ವಿಜಯ್ ದೇವರಕೊಂಡ ಅವರು ಯಾಕೆ ರಶ್ಮಿಕಾ ಮಂದಣ್ಣರನ್ನು ಪ್ರೀತಿ ಮಾಡಿದೆ? ಮದುವೆ ಆದೆ ಎಂಬ ಬಗ್ಗೆ ಕೂಡ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ರಶ್ಮಿಕಾ ತುಂಬ ನೆನಪಾದಳು
ಒಂದು ದಿನ, ನನಗೆ ರಶ್ಮಿಕಾ ಮಂದಣ್ಣ ನೆನಪು ವಿಪರೀತವಾಗಿ ಕಾಡಿತು. ಅವಳು ನನ್ನ ಜೊತೆಯಲ್ಲೇ ಇದ್ದಿದ್ದರೆ ಈ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನ್ನುವಷ್ಟು ಅವಳ ನೆನಪಾಯಿತು.
ರಶ್ಮಿಕಾ ನನ್ನ ಜೊತೆಗಿದ್ದರೆ ಮಾತ್ರ...
ರಶ್ಮಿಕಾ ಮಂದಣ್ಣ ಎದುರು ಕುಳಿತಿದ್ದರೆ, ನಾನು ಊಟ ಮಾಡುವ ಊಟ ಇನ್ನಷ್ಟು ತೃಪ್ತಿ ನೀಡುತ್ತಿತ್ತು ಅನ್ನಿಸಿತು. ಅವಳು ನನ್ನ ಜೊತೆಗಿದ್ದರೆ, ಜಿಮ್‌ನಲ್ಲಿ ಕಸರತ್ತು ಮಾಡುವುದು ಶಿಕ್ಷೆಯಂತೆ ಅನ್ನಿಸದೆ ಇನ್ನೂ ಮಜವಾಗಿರುತ್ತಿತ್ತು ಎನಿಸಿತು.
ರಶ್ಮಿಕಾ ನನ್ನ ಮನೆ
ನಾನು ಎಲ್ಲೇ ಇರಲಿ, ನನ್ನಲ್ಲಿ ಒಂದು ಶಾಂತಿ ಮತ್ತು "ಮನೆ"ಯ ಭಾವನೆ ಮೂಡಲು ಅವಳು ಬೇಕೇ ಬೇಕು ಎಂದು ನನಗೆ ಅನ್ನಿಸಿತು. ಅದಕ್ಕಾಗಿಯೇ, ನನ್ನ ಅತ್ಯಂತ ಪ್ರಿಯ ಗೆಳತಿಯನ್ನೇ... ನನ್ನ ಹೆಂಡತಿಯನ್ನಾಗಿಸಿಕೊಂಡೆ.
ರಾಜ ರಾಣಿ ಸ್ಟೈಲ್
ರಾಜ ಹಾಗೂ ರಾಣಿ ಕಾಸ್ಟ್ಯೂಮ್‌ನಲ್ಲಿ ಮದುವೆ ಆಗಿದ್ದಾರೆ. ಆರಂಭದಲ್ಲಿ ತೆಲುಗು ಸಂಪ್ರದಾಯದಂತೆ ಮದುವೆ ಆಗಿದೆ.
ಲವ್ ಮ್ಯಾರೇಜ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಪ್ರೀತಿಸಿ ಮದುವೆ ಆಗಿದ್ದಾರೆ.
ಏಳು ವರ್ಷಗಳ ಸ್ನೇಹ
ಗೀತ ಗೋವಿಂದಂ ಸಿನಿಮಾ ಮೂಲಕ ಇವರಿಬ್ಬರು ಪರಿಚಯ ಆದರು. ಅಲ್ಲಿಂದ ಸ್ನೇಹ, ಪ್ರೀತಿ ಶುರುವಾಯ್ತು
ಉದಯಪುರದಲ್ಲಿ ಮದುವೆ
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಉದಯಪುರದಲ್ಲಿ ಮದುವೆ ಆಗಿದ್ದಾರೆ.
ಕುಟುಂಬಸ್ಥರು ಭಾಗಿ
ಬಹಳ ಪ್ರೈವೇಟ್ ಆಗಿ ಈ ಮದುವೆ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ಮದುವೆಯಲ್ಲಿ ಭಾಗಿ ಆಗಿದ್ದರು.
ಹೈದರಾಬಾದ್‌ನಲ್ಲಿ ಆರತಕ್ಷತೆ
ಮಾರ್ಚ್ 3 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

