IoT in hybrid vehicles ಬೆಂಗಳೂರಿನ BGS ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್ ಗೌಡ ಎಸ್ ಮತ್ತು ಅವರ ತಂಡವು, ಐಓಟಿ ತಂತ್ರಜ್ಞಾನ ಆಧಾರಿತ ಸಂಶೋಧನೆಗಾಗಿ ಕಿರಿಯ ವಿಜ್ಞಾನಿಗಳ ಸಾಧನೆಗೆ ನೀಡುವ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬೆಂಗಳೂರು ನಗರದ ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ, BGS College of Engineering and Technology, ಮಹಾಲಕ್ಷ್ಮಿಪುರಂನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಅಭಿಷೇಕ್ ಗೌಡ ಎಸ್ ಹಾಗೂ ಅವರ ತಂಡ ಐಓಟಿ ತಂತ್ರಜ್ಞಾನದ ಆಧಾರಿತ ಸಂಶೋಧನಾ ಕಾರ್ಯಕ್ಕಾಗಿ ಕಿರಿಯ ವಿಜ್ಞಾನಿಗಳ ಸಾಧನೆಗೆ ನೀಡುವ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿಯನ್ನು ಪಡೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸತೀಶ ಜಿ ಮಾರ್ಗದರ್ಶನದಲ್ಲಿ HybridEcoISA ಶೀರ್ಷಿಕೆಯ ಈ ಯೋಜನೆ ಪ್ಲಗ್-ಇನ್ ಹೈಬ್ರಿಡ್ ವಾಹನಗಳಿಗಾಗಿ ಸ್ವಯಂಚಾಲಿತ ವೇಗ ಮಿತಿ ಏಕೀಕರಣ ವ್ಯವಸ್ಥೆಯನ್ನು ಒಳಗೊಂಡ ನವೀನ ಸಂಶೋಧನೆಯನ್ನು ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಸಚಿವರುಗಳಾದ ಡಾ. ಕೆ. ಸುಧಾಕರ್, ಬೋಸರಾಜು, ಮಧು ಬಂಗಾರಪ್ಪ, ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್, ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ರಾಜಾಸಾಬ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು, ಸರ್ಕಾರದ ಕಾರ್ಯದರ್ಶಿ ಡಾ ಎನ್ ಮಂಜುಳಾ ಈ ಸಂದರ್ಭದಲ್ಲಿ ಹಾಜರಿದ್ದರು.

YouTube video player