Karnataka news Live: ಬಿಜೆಪಿ 18 ಶಾಸಕರ ಅಮಾನತು ರದ್ದು; ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಆದೇಶ!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ದರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿ ಆದಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 38 ಮಂದಿಗೆ ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲೇ 32 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಹಾಗೆಯೇ ಮಹಾರಾಷ್ಟ್ರದ ಥಾಣೆಯಲ್ಲಿ ಷುಗರ್ನಿಂದಲೂ ಬಳಲುತ್ತಿದ್ದ 21 ವರ್ಷದ ಯುವಕ ಬಲಿಯಾಗಿದ್ದಾನೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಸ ಕೊರೋನಾಗೆ ಮಹಾರಾಷ್ಟ್ರದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.
Karnataka news Liveಬಿಜೆಪಿ 18 ಶಾಸಕರ ಅಮಾನತು ರದ್ದು; ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಆದೇಶ!
Karnataka news Liveಕರ್ನಾಟಕದಲ್ಲಿ ಇಂದು 9 ಹೊಸ ಕೋವಿಡ್-19 ಪ್ರಕರಣಗಳು, ಸಕ್ರಿಯ ಕೇಸ್‌ಗಳ ಸಂಖ್ಯೆ 47ಕ್ಕೆ ಏರಿಕೆ!
Karnataka news Liveಶಾರುಖ್ ಸೇರಿ ಸ್ಟಾರ್‌ಗಳ ಜತೆ ನಟಿಸಲು ಐಶ್ವರ್ಯಾ ರೈ ತಿರಸ್ಕರಿಸಿದ 8 ಸಿನಿಮಾಗಳು ಸೂಪರ್ ಹಿಟ್!
ಐಶ್ವರ್ಯಾ ರೈ ಇತ್ತೀಚೆಗೆ 78 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಐಶ್ವರ್ಯಾ ಬಾಲಿವುಡ್‌ನ ಸುಂದರ ನಟಿ ಮತ್ತು ಹಲವು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಐಶ್ವರ್ಯಾ ಹಲವು ಸೂಪರ್‌ಹಿಟ್ ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಅಂತಹ 8 ಚಿತ್ರಗಳನ್ನು ನೋಡೋಣ...
Karnataka news Liveಐಫೋನ್ ಉತ್ಪಾದನೆ; ಭಾರತದಲ್ಲಿ ಚೀಪ್ ರೇಟ್, ಅಮೇರಿಕಾದಲ್ಲಿ ಭಾರೀ ದುಬಾರಿ!
ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ (iPhone) ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ತಯಾರಿಸುವ ವೆಚ್ಚ ತುಂಬಾ ಕಡಿಮೆ. ಜಿಟಿಆಆರ್‌ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಆದರೆ ಅಮೆರಿಕದಲ್ಲಿ $390 ವೆಚ್ಚವಾಗುತ್ತದೆ.
Karnataka news Liveಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ; ಪತಿರಾಯನ ತಪ್ಪಿಗೆ ಪತ್ನಿಗೆ ಕಾಂಗ್ರೆಸ್ ನಿಂದ ಶಿಕ್ಷೆ!
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕಾಂಗ್ರೆಸ್ ನಾಯಕಿ ಮಂಜುಳಾ ಗೂಳಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
Karnataka news Liveಕೊಡಗಿನಲ್ಲಿ ಮಳೆಯ ಅಬ್ಬರ - ರಸ್ತೆ ಬಂದ್, ವಿದ್ಯುತ್ ಕಡಿತ, ಭೂಕುಸಿತ ಭೀತಿಯಿಂದ ಜನಜೀವನ ಅಸ್ತವ್ಯಸ್ತ
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತ್ರಿವೇಣಿ ಸಂಗಮ ಸ್ನಾನಘಟ್ಟ, ಪಕ್ಕದ ಉದ್ಯಾನ ಮುಳುಗಿದೆ.
Karnataka news Liveಆಸ್ಪತ್ರೆಯಲ್ಲಿ ಗ್ರಾಜುವೇಶನ್ ಫೋಟೋ ತೆಗೆದುಕೊಂಡ ಗೆಳೆಯರು, ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿ ಸಾವು!
ಪ್ರೀತಿಯ ಗೆಳೆಯನ ಜೊತೆ ಫೋಟೋ ತೆಗೆದುಕೊಂಡು ಸಂತೋಷದಿಂದ ವಿದಾಯ ಹೇಳಿದರು. ಆದರೆ ಅದು ಶಾಶ್ವತ ವಿದಾಯ ಎಂದು ಯಾರೂ ಊಹಿಸಿರಲಿಲ್ಲ.
Karnataka news Liveರಾಯರ ಮಠದ ಒಳಗೆ ಚಪ್ಪಲಿ ಎಸೆದ ಮಹಿಳೆ!
Karnataka news Liveರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ; ಪ್ರತಿನಿತ್ಯ 200 ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಆದೇಶ
ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಕೋವಿಡ್ ಸಾವು ದಾಖಲಾಗಿದೆ. 85 ವರ್ಷದ ವೃದ್ಧರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 38 ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ತೆಗೆದುಕೊಂಡಿದೆ.
Karnataka news Liveಈ ರೈಲಿನಲ್ಲಿ ಕೇವಲ 25 ರೂ.ನಲ್ಲಿ ಭಾರತದಾದ್ಯಂತ ಪ್ರಯಾಣಿಸಿ; ಯಾವಾಗ, ಎಲ್ಲಿಂದ ಹೊರಡುತ್ತದೆ?
ನೀವು ಪ್ರಯಾಣವನ್ನು ಇಷ್ಟಪಡುವವರಾಗಿದ್ದರೆ ಪ್ರಯಾಣ ಮಾಡುವಾಗ ನೀವು ಅನೇಕ ವಿಷಯಗಳನ್ನು ಕಲಿಯಬಹುದಾದ ರೈಲಿನ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ರೈಲು ವರ್ಷಕ್ಕೊಮ್ಮೆ 500 ಜನರಿಗೆ ಕೇವಲ ₹25 ರಲ್ಲಿ 8000 ಕಿ.ಮೀ. ಭಾರತದಾದ್ಯಂತ ಪ್ರಯಾಣಿಸುವ ಅವಕಾಶ ನೀಡುತ್ತದೆ.
Karnataka news Liveಶ್ರೀಷ್ಠಿ 2025 - ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಉತ್ಸವ ಭವ್ಯ ಉದ್ಘಾಟನೆ
Karnataka news Liveಅಯೋಧ್ಯೆಯಲ್ಲಿ ಹನುಮಾನ್ ದರ್ಶನ ಪಡೆದ ವಿರುಷ್ಕಾ ಜೋಡಿ!
Karnataka news Liveಬಿಜೆಪಿ 18 ಶಾಸಕರ ಅಮಾನತು ಹಿಂಪಡೆಯಲು ಮಹತ್ವದ ಸಭೆ ಕರೆದ ಸ್ಪೀಕರ್ ಯು.ಟಿ. ಖಾದರ್!
Karnataka news Liveರೊನಾಲ್ಡೋ ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡ್ತಾರಾ? ಫಿಫಾ ಅಧ್ಯಕ್ಷರಿಂದ ಗುಡ್ ನ್ಯೂಸ್?
ಫಿಫಾ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೋ, ರೊನಾಲ್ಡೋ ಅವರು ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಅಲ್ ನಸರ್ ತಂಡ ಟೂರ್ನಿಗೆ ಅರ್ಹತೆ ಪಡೆಯದಿದ್ದರೂ, ರೊನಾಲ್ಡೋ ಬೇರೆ ತಂಡದಿಂದ ಆಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
Karnataka news Liveಏಷ್ಯಾನೆಟ್ ಸುವರ್ಣ ಶಿಕ್ಷಣ ಮೇಳ - ವಿದ್ಯಾರ್ಥಿಗಳಿಗೆ ದಾರಿದೀಪ
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವಿದ್ಯಾರ್ಥಿಗಳಿಗಾಗಿ 'ಸುವರ್ಣ ಶಿಕ್ಷಣ ಮೇಳ'ವನ್ನು ಆಯೋಜಿಸಿದೆ. ಈ ಮೇಳದಲ್ಲಿ 50 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗೆ ಕೋರ್ಸ್ ಮತ್ತು ಕಾಲೇಜು ಆಯ್ಕೆ, ಅಡ್ಮಿಷನ್ ಪ್ರಕ್ರಿಯೆ ಮಾಹಿತಿ ನೀಡಲಾಗುವುದು.
Karnataka news LiveIPL 2025 - ಟಾಪ್-2 ಅಲ್ಲ, ಟಾಪ್-4ಗೆ ಕುಸಿಯುವ ಭೀತಿಗೆ ಸಿಲುಕಿದ ಗುಜರಾತ್ ಟೈಟಾನ್ಸ್! ಬದಲಾಯ್ತು ಲೆಕ್ಕಾಚಾರ
Karnataka news Liveಒಳ ಮೀಸಲಾತಿ - ಜೂನ್‌ನಲ್ಲಿ ಘೋಷಣೆ?
Karnataka news Live5 ನಿಮಿಷದಲ್ಲಿ ₹51 ಕೋಟಿ ಚಿನ್ನದ ಟಾಯ್ಲೆಟ್ ಕಳ್ಳತನ! 5 ವರ್ಷದ ಬಳಿಕ ನಾಲ್ವರ ಬಂಧನ
ಯುಕೆ ಬ್ಲೆನ್‌ಹೈಮ್ ಅರಮನೆಯಲ್ಲಿ 51 ಕೋಟಿ ರೂ. ಮೌಲ್ಯದ ಚಿನ್ನದ ಟಾಯ್ಲೆಟ್ ಕಳ್ಳತನವಾಗಿದೆ. ಮೂವರು ಕಳ್ಳರು ಕೇವಲ 5 ನಿಮಿಷಗಳಲ್ಲಿ ಈ ಕೃತ್ಯ ಎಸಗಿದ್ದಾರೆ
Karnataka news Liveರೈತರಿಗೆ ಬಂಪರ್ - ಭತ್ತದ ಡಿಎನ್ಎ ಬದಲಿಸಿ ವಿಜ್ಞಾನಿಗಳಿಂದಲೇ ಹೊಸ ತಳಿ ರೆಡಿ! ವಿಶ್ವದಲ್ಲೇ ಮೊದಲು...
ಭಾರತದ ವಿಜ್ಞಾನಿಗಳು ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ತಳಿಗಳು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುತ್ತವೆ ಮತ್ತು ನೀರು ಸಂರಕ್ಷಣೆಗೆ ನೆರವಾಗುತ್ತವೆ.
Karnataka news Liveರೆಸಾರ್ಟ್‌ಗೆ ಪ್ರವಾಸ ಹೋದ ಪ್ರಿಯತಮೆ ಸಾವು, ಪ್ಲಾನ್ ಮಾಡಿ ಕೊಂದೇ ಬಿಟ್ನಾ ಪ್ರಿಯಕರ?
ಪಾಲ್ಘರ್ ಜಿಲ್ಲೆಯ ರೆಸಾರ್ಟ್‌ನಲ್ಲಿ ಯುವತಿಯೊಬ್ಬಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾಳೆ. ಪ್ರಿಯಾಂಕಾ ಪವಾರ್ ತನ್ನ ಪ್ರಿಯಕರನ ಜೊತೆ ರಿಸಾರ್ಟ್‌ನಲ್ಲಿದ್ದಾಗ, ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿ ಮೃತಪಟ್ಟಳು. ಕುಟುಂಬಸ್ಥರು ಹತ್ಯೆಯ ಶಂಕೆ ವ್ಯಕ್ತಪಡಿಸಿದ್ದಾರೆ.