ಐಫೋನ್ ಉತ್ಪಾದನೆ ವೆಚ್ಚ; ಭಾರತದಲ್ಲಿ ಚೀಪ್ ರೇಟ್, ಅಮೇರಿಕಾದಲ್ಲಿ ಭಾರೀ ದುಬಾರಿ!
ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ (iPhone) ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ತಯಾರಿಸುವ ವೆಚ್ಚ ತುಂಬಾ ಕಡಿಮೆ. ಜಿಟಿಆಆರ್‌ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಆದರೆ ಅಮೆರಿಕದಲ್ಲಿ $390 ವೆಚ್ಚವಾಗುತ್ತದೆ.

ಭಾರತದಲ್ಲಿ ಸ್ಥಾಪಿಸಲು ಇದೇ ಮುಖ್ಯ ಉದ್ದೇಶ
ಭಾರತದಂತಹ ದೇಶಗಳಲ್ಲಿ ಐಫೋನ್‌ಗಳನ್ನು ತಯಾರಿಸುವುದರಿಂದ ಆ್ಯಪಲ್‌ಗೆ ದೊಡ್ಡ ಮೊತ್ತದ ವೆಚ್ಚ ಉಳಿತಾಯವಾಗುತ್ತದೆ. ಇದೇ ಕಾರಣಕ್ಕಾಗಿ ಆ್ಯಪಲ್ ಭಾರತದಲ್ಲಿ ತನ್ನ ಜೋಡಣೆ ಘಟಕಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಜಿಟಿಆರ್ಐ ವರದಿಯ ಪ್ರಕಾರ ಭಾರತದಲ್ಲಿ ತಯಾರಿಕಾ ವೆಚ್ಚ ಅಮೆರಿಕಕ್ಕಿಂತ ತುಂಬಾ ಕಡಿಮೆ.
ಜೋಡಣೆ ವೆಚ್ಚದಲ್ಲಿ ದೊಡ್ಡ ವ್ಯತ್ಯಾಸ:
ಜಿಟಿಆರ್‌ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಅದೇ ಐಫೋನ್ ಅನ್ನು ಅಮೆರಿಕದಲ್ಲಿ ಜೋಡಿಸಲು $390 ವೆಚ್ಚವಾಗುತ್ತದೆ. ಅಂದರೆ ಸುಮಾರು 13 ಪಟ್ಟು ಹೆಚ್ಚು. ಇದಕ್ಕೆ ಮುಖ್ಯ ಕಾರಣ ಕಾರ್ಮಿಕ ವೆಚ್ಚ.
ಕಾರ್ಮಿಕ ವೇತನದಲ್ಲಿ ವ್ಯತ್ಯಾಸ
ಪಿಎಲ್‌ಐ ಯೋಜನೆಯಿಂದ ಆ್ಯಪಲ್‌ಗೆ ಲಾಭ
ಟ್ರಂಪ್‌ರ ಪ್ರಮುಖ ಹೇಳಿಕೆಗಳು
ಈ ಹಿನ್ನೆಲೆಯಲ್ಲಿ ಟ್ರಂಪ್ ಆ್ಯಪಲ್ ಕಂಪನಿಯ ಬಗ್ಗೆ ಪ್ರಮುಖ ಹೇಳಿಕೆ ನೀಡಿದ್ದಾರೆ. ‘ಭಾರತದಲ್ಲಿ ಘಟಕಗಳನ್ನು ಸ್ಥಾಪಿಸಬಹುದು. ಆದರೆ ಅಮೆರಿಕದಲ್ಲಿ ಸುಂಕವಿಲ್ಲದೆ ಐಫೋನ್‌ಗಳನ್ನು ಮಾರಾಟ ಮಾಡಬೇಕೆಂದರೆ, ಅಮೆರಿಕದಲ್ಲೇ ತಯಾರಿಕೆ ನಡೆಯಬೇಕು’ ಎಂದು ಹೇಳಿದ್ದಾರೆ. ಆ್ಯಪಲ್ ತನ್ನ ಉತ್ಪನ್ನವನ್ನು ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಂಡರೆ ಶೇ.25ರಷ್ಟು ಆಮದು ಸುಂಕ ಪಾವತಿಸಬೇಕಾಗುತ್ತದೆ.