ಜಾತಿ ಗಣತಿ ಮೇ ಅಂತ್ಯಕ್ಕೆ ಮುಗಿಯುವ ನಿರೀಕ್ಷೆಯಿದ್ದು, ಜೂನ್‌ನಲ್ಲಿ ಒಳಮೀಸಲಾತಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಬಳ್ಳಾರಿ : ಒಳ ಮೀಸಲಾತಿ ಘೋಷಣೆ ಮಾಡುವ ಹಿನ್ನೆಲೆ ರಾಜ್ಯಾದ್ಯಂತ ಜಾತಿ ಗಣತಿ ನಡೆದಿದೆ. ಮೇ ಅಂತ್ಯಕ್ಕೆ ಜಾತಿ ಗಣತಿ ಮುಗಿಯುವ ವಿಶ್ವಾಸವಿದೆ. ಜೂನ್ ತಿಂಗಳಲ್ಲಿ ಒಳಮೀಸಲಾತಿ ಘೋಷಣೆಯಾಗುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಒಳ ಮೀಸಲಾತಿ ಹೋರಾಟಗಾರ ಹೆಚ್. ಆಂಜನೇಯ ಹೇಳಿದ್ದಾರೆ. ಬಳ್ಳಾರಿಯಲ್ಲಿಂದು ಮಾತನಾಡಿದ ಅವರು ಕೆಲವರು ಬೇಡ ಜಂಗಮರು ಜಾತಿ ಗಣತಿ ಲಾಭ ಪಡೆಯಲು ಯತ್ನ ಮಾಡ್ತಿದ್ದಾರೆ. ನಕಲಿ ಸರ್ಟಿಫಿಕೇಟ್ ತೆಗೆದು ಕೊಂಡ್ರೆ ಕೊಟ್ಟವನು ಮತ್ತು ತೆಗೆದುಕೊಂಡವರು ಇಬ್ಬರನ್ನೂ ಜೈಲಿಗೆ ಕಳುಹಿಸುತ್ತೇವೆ. ಮಾದಿಗರ ಹಕ್ಕು ಕಸಿದುಕೊಳ್ಳಲು ಯತ್ನಿಸಿದರೇ ಸುಮ್ಮನೆ ಇರಲು ಸಾದ್ಯವಿಲ್ಲ ಈ ಬಗ್ಗೆ ಈಗಾಗಲೇ ಆಯೋಗ ಮದ ಗಮನಕ್ಕೆ ತರಲಾಗಿದೆ ಎಂದರು.
ಕಳೆದ ಮೂವತ್ತೈದು ವರ್ಷದಲ್ಲಿ ಮೀಸಲಾತಿ ಪಡೆಯುವುದಕ್ಕಾಗಿ ಹೋರಾಟ ನಡೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿಲ್ಲ. ಇದೀಗ ಜಾತಿ ಗಣತಿ ನಡೆದಿದ್ದ, ಒಳ ಮೀಸಲಾತಿಗೆ ಎಲ್ಲಾ ಸರ್ಕಾರ ಸಪೋರ್ಟ್ ಮಾಡಿದೆ ಎಂದರು. ಮೀಸಲಾತಿ ಕ್ಷೇತ್ರದಲ್ಲಿ ಕೆಲವರು ಸ್ಪರ್ಧೆ ಮಾಡ್ತಾರೆ. ಆದ್ರೆ ಇದರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು. ಕೆಲವರು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಸುಳ್ಳು ಹೇಳ್ತಾರೆ ಬೇಡ ಜಂಗಮರು ಮೀಸಲಾತಿಗೆ ಅರ್ಹರು ಎಂದು ಸಮರ್ಥನೆ ಕೊಳ್ಳುತ್ತಿದ್ದಾರೆ. ಇದ್ಯಾವುದಕ್ಕೂ ಅವಕಾಶವಿಲ್ಲ ಎಂದರು.
ರಾಹುಲ್ ಗಾಂಧಿ ಜಾತಿಗಣತಿಯಾಗಬೇಕೆಂದು ಒತ್ತಾಯ ಮಾಡಿದ್ದಾರೆ. ಅದರ ಫಲವಾಗಿ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ಪ್ರಧಾನಿ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಶ್ನಾತೀತ ನಾಯಕ ಮುಂದೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ತೆಲಂಗಾಣ , ಹರಿಯಾಣ, ಸೇರಿದಂತೆ ಕೆಲ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಒಳಮೀಸಲಾತಿ ಜಾರಿಯಾಗೋವರೆಗೂ ಯಾವ ಹುದ್ದೆ ತುಂಬಬಾರದು ಎಂದು ಒತ್ತಾಯಿಸಿದ್ದೇವೆ. ಒಳಮೀಸಲಾತಿ ನೀಡೋದಾಕ್ಕಾಗಿಯೇ ಜಾತಿಗಣತಿ ನಡೆಯುತ್ತಿದೆ. ಮಗ್ರ ದಾಖಲೆ ನೀಡುವಂತೆ ಸಮಾಜಕ್ಕೆ ಆಂಜನೇಯ ಕರೆ ನೀಡಿದ್ದಾರೆ.
