ಪ್ರೀತಿಯ ಗೆಳೆಯನ ಜೊತೆ ಫೋಟೋ ತೆಗೆದುಕೊಂಡು ಸಂತೋಷದಿಂದ ವಿದಾಯ ಹೇಳಿದರು. ಆದರೆ ಅದು ಶಾಶ್ವತ ವಿದಾಯ ಎಂದು ಯಾರೂ ಊಹಿಸಿರಲಿಲ್ಲ.

ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಒಂದು ಫೋಟೋ ವೈರಲ್ ಆಗಿತ್ತು. ಲಕ್ಷಾಂತರ ಜನರ ಹೃದಯವನ್ನು ಮುಟ್ಟಿದ ಈ ಫೋಟೋ ಶಾಲೆಯೊಂದರ ಪದವಿ ಪ್ರದಾನ ಸಮಾರಂಭದಲ್ಲಿ ತೆಗೆದ ಗುಂಪು ಫೋಟೋ. ಆದರೆ ಇದು ಸಾಮಾನ್ಯ ಪದವಿ ಪ್ರದಾನ ಫೋಟೋಗಳಿಗಿಂತ ಭಿನ್ನವಾಗಿತ್ತು. 

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಸಹಪಾಠಿಯ ಜೊತೆ ಫೋಟೋ ತೆಗೆಯಲು ವಿದ್ಯಾರ್ಥಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಫೋಟೋ ಸಂತೋಷ ತಂದರೂ, ದುರದೃಷ್ಟವಶಾತ್ ಫೋಟೋ ತೆಗೆದ ಕೆಲವೇ ಗಂಟೆಗಳಲ್ಲಿ ಆ ವಿದ್ಯಾರ್ಥಿ ಮೃತಪಟ್ಟ.

ಸಿಚುವಾನ್ ಪ್ರಾಂತ್ಯದ ಒಂದು ಮಾಧ್ಯಮಿಕ ಶಾಲೆಯ ಪದವಿ ಪ್ರದಾನ ಸಮಾರಂಭದ ಗುಂಪು ಫೋಟೋ ಇದಾಗಿತ್ತು. ಜೀವನದ ಸಂತಸದ ಕ್ಷಣದಲ್ಲಿ ತಮ್ಮೊಂದಿಗೆ ಓದಿದ ಗೆಳೆಯ ಆಸ್ಪತ್ರೆಯಲ್ಲಿರುವುದು ಇತರ ವಿದ್ಯಾರ್ಥಿಗಳಿಗೆ ಬೇಸರ ತಂದಿತ್ತು. ಕೊನೆಯ ಗುಂಪು ಫೋಟೋದಲ್ಲಿ ಆತನೂ ಇರಬೇಕೆಂದು ಅವರು ಬಯಸಿದ್ದರು. 

ಹೀಗಾಗಿ ವಿದ್ಯಾರ್ಥಿಗಳೆಲ್ಲರೂ ಆಸ್ಪತ್ರೆಗೆ ತೆರಳಿದರು. ಪ್ರೀತಿಯ ಗೆಳೆಯನ ಜೊತೆ ಫೋಟೋ ತೆಗೆದುಕೊಂಡು ಸಂತೋಷದಿಂದ ವಿದಾಯ ಹೇಳಿದರು. ಆದರೆ ಅದು ಶಾಶ್ವತ ವಿದಾಯ ಎಂದು ಯಾರೂ ಊಹಿಸಿರಲಿಲ್ಲ. ಫೋಟೋ ತೆಗೆದ ಕೆಲವೇ ಗಂಟೆಗಳಲ್ಲಿ ಆ ವಿದ್ಯಾರ್ಥಿ ಮೃತಪಟ್ಟ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮೇ 17 ರಂದು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಶಾಲೆಯಿಂದ ಎರಡು ಕಿಲೋಮೀಟರ್ ನಡೆದು ಯಿಲಾಂಗ್ ಪೀಪಲ್ಸ್ ಆಸ್ಪತ್ರೆಗೆ ತೆರಳಿ ಈ ಫೋಟೋ ತೆಗೆದರು. 15 ವರ್ಷದ ರೆನ್ ಜುಂಚಿ ಎಂಬ ವಿದ್ಯಾರ್ಥಿಗೆ ಜೀವನದ ಕೊನೆಯ ಕ್ಷಣಗಳಲ್ಲಿ ಗೆಳೆಯರು ನೀಡಿದ ಅದ್ಭುತ ಉಡುಗೊರೆ ಇದಾಗಿತ್ತು. 

ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೆನ್ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆಸ್ಪತ್ರೆಗೆ ಭೇಟಿ ನೀಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರೆನ್ ಕುಟುಂಬ ಧನ್ಯವಾದ ತಿಳಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.