10:42 PM (IST) Feb 23

Karnataka News Live 23 February 2026ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ

ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗವಾಗಿದೆ. ಉದಯಪುರದಲ್ಲಿ ಇಂದು ಸಂಜೆಯಂದಲೇ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಕಳೆಗಟ್ಟಿದೆ.

Read Full Story
10:08 PM (IST) Feb 23

Karnataka News Live 23 February 2026ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ - Nandagokula Serial ಪ್ರಿಯಾ Interview

ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್‌ ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ರಿಯಲ್‌ ಪತಿ ಬಗ್ಗೆ ಮಾತನಾಡಿದ್ದಾರೆ.

Read Full Story
09:46 PM (IST) Feb 23

Karnataka News Live 23 February 2026ಸ್ಟಾರ್‌ ಹೀರೋಗಳ ಜೊತೆ ನಟಿಸಿ, UK ಕಂಪೆನಿಗೆ ಡೈರೆಕ್ಟರ್‌ ಆದ ನಟ ದರ್ಶನ್‌ ಸಿನಿಮಾ ಹೀರೋಯಿನ್!‌ ಯಾರದು?

ದರ್ಶನ್‌ ತೂಗುದೀಪ ನಟನೆಯ ಜಗ್ಗುದಾದ ಸಿನಿಮಾ ಹೀರೋಯಿನ್‌ ದೀಕ್ಷಾ ಸೇಠ್‌ಗೆ ನಟಿಯಾಗುವ ಯಾವ ಆಸೆಯೂ ಇರಲಿಲ್ಲ. ಚೆನ್ನೈ, ಮುಂಬೈ, ಕೋಲ್ಕತ್ತಾ, ಕಠ್ಮಂಡು, ರಾಜಸ್ಥಾನ, ಗುಜರಾತ್‌ ಹೀಗೆ ತಂದೆ ಉದ್ಯೋಗದ ಸ್ಥಳ ಬದಲಾದಂತೆ ದೀಕ್ಷಾ ಕೂಡ ಇಷ್ಟೆಲ್ಲ ನಗರಗಳಲ್ಲಿ ವಾಸ ಮಾಡಲು ಆರಂಭಿಸಿದರು.

Read Full Story
09:18 PM (IST) Feb 23

Karnataka News Live 23 February 2026Muddu Sose Serial - ವಿದ್ಯಾಗೆ ಸಂಕಟ ತಂದಿಟ್ಟ ವಿನೋದಿನಿ; ಈಗ ಸೋತರೆ ಮಾತ್ರ ಭದ್ರನಿಂದ ಶಾಶ್ವತವಾಗಿ ದೂರ!

Muddu Sose Serial Kannada: 'ಮುದ್ದುಸೊಸೆ' ಧಾರಾವಾಹಿಯಲ್ಲಿ ಕುತೂಹಲಕಾರಿ ಘಟ್ಟಕ್ಕೆ ಬಂದಿದೆ. ವೇಗವಾದ ಕಥಾಹಂದರ, ರೋಚಕ ತಿರುವುಗಳ ಮೂಲಕ ಗಮನಸೆಳೆದ ಈ ಸೀರಿಯಲ್‌ನಲ್ಲಿ, ಇದೀಗ ಹೀರೋಯಿನ್ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆ‌ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
09:08 PM (IST) Feb 23

Karnataka News Live 23 February 2026ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ

ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ, ಬರೋಬ್ಬರಿ 7,000 ಉದ್ಯೋಗಿಗಳ ಕೆಲಸ ಮಾಡಲು ಸ್ಥಳವಕಾಶವಿರುವ ಅತೀ ದೊಡ್ಡ ಕಚೇರಿ ಇದಾಗಿದೆ. 11 ಮಹಡಿ, 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ.

Read Full Story
08:11 PM (IST) Feb 23

Karnataka News Live 23 February 2026ಆನ್ಲೈನ್ ಗೇಮ್ ಆಡುತ್ತಾ, ಒಂಟಿಯಾಗಿದ್ದ ಅಜ್ಜಿ ಮನೆಗೆ ಹೊಕ್ಕ ಎಂ.ಕಾಂ ಪದವೀಧರ; ಮುಂದಾಗಿದ್ದ ಪೈಶಾಚಿಕ ಕೃತ್ಯ!

ದಾವಣಗೆರೆಯ ನ್ಯಾಮತಿ ತಾಲೂಕಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಭಾವಿಸಲಾಗಿದ್ದ ವೃದ್ಧೆಯ ಸಾವು ಕೊಲೆ ಎಂದು ಸಾಬೀತಾಗಿದೆ. ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ ಎಂ.ಕಾಂ ಪದವೀಧರ, ಚಿನ್ನಕ್ಕಾಗಿ ವೃದ್ಧೆಯನ್ನು ಕತ್ತು ಹಿಸುಕಿ ಕೊಂದಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

Read Full Story
07:40 PM (IST) Feb 23

Karnataka News Live 23 February 2026ಅಖಂಡ ಬಳ್ಳಾರಿ ಜಿಲ್ಲೆಗೆ ₹2372 ಕೋಟಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗ, ಅಭಿವೃದ್ಧಿಯ ಹೊಸ ಶಕೆ

ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ₹2372 ಕೋಟಿ ವೆಚ್ಚದಲ್ಲಿ ಕಂಪ್ಲಿ ವಯಾ ಗಂಗಾವತಿ-ದರೋಜಿ ಸೇರಿದಂತೆ ಎರಡು ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಸಂಸದ ಈ. ತುಕರಾಮ್ ಅವರ ಪ್ರಕಾರ, ಈ ಯೋಜನೆಯು ಕೃಷಿ ಉತ್ಪನ್ನಗಳ ಸಾಗಣೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. 

Read Full Story
07:34 PM (IST) Feb 23

Karnataka News Live 23 February 2026ಎಣ್ಣೆ ಬೇಕು ಅಣ್ಣಾ, ಬಾರ್ ತೆಗೆಸು ಚಿನ್ನ; ಕಾಂಗ್ರೆಸ್ ಆಫೀಸ್ ಪಕ್ಕದ ಕಟ್ಟಡದ ಮೇಲೇರಿ ಪೊಲೀಸರಿಗೆ ಬಾಟ್ಲು ಕೇಳಿದ ಕುಡುಕ!

ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಬಂದ್ ಹಿನ್ನೆಲೆ ಮದ್ಯ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬ ಕಟ್ಟಡವೇರಿ ಮೇಲಿಂದ ಬೀಳುವುದಾಗಿ ಬೆದರಿಕೆ ಹಾಕಿದ್ದಾನೆ. ನನಗೆ ಎಣ್ಣೆ ತಂದುಕೊಟ್ಟರೆ ಮಾತ್ರ ಕೆಳಗೆ ಇಳಿಯುವುದಾಗಿ ಪಟ್ಟು ಹಿಡಿದ ಆತನನ್ನು, ಪೊಲೀಸರು ಹರಸಾಹಸಪಟ್ಟು ರಕ್ಷಿಸಿದ್ದಾರೆ.

Read Full Story
07:31 PM (IST) Feb 23

Karnataka News Live 23 February 2026'ಗಂಡು ಮಗು ಹುಟ್ಟಿದೆ' ಎಂದು ಡಾಕ್ಟರ್​ ಹೇಳಿದಾಕ್ಷಣವೇ ಡಿಸೈಡ್​ ಮಾಡಿಬಿಟ್ಟಿದ್ದೆ- ಮೇಘನಾ ರಾಜ್ ಮೆಲುಕು

ನಟಿ ಮೇಘನಾ ರಾಜ್ ಅವರು ಪತಿ ಚಿರು ಸರ್ಜಾ ಅವರ ಅಕಾಲಿಕ ಮರಣ ಮತ್ತು ಮಗ ರಾಯನ್ ಜನನದ ಸಂದರ್ಭದಲ್ಲಿ ಅನುಭವಿಸಿದ ದುಃಖ ಮತ್ತು ಸಂತೋಷದ ಮಿಶ್ರ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಮಗನಿಗಾಗಿ ಬದುಕುವ ನಿರ್ಧಾರದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

Read Full Story
07:22 PM (IST) Feb 23

Karnataka News Live 23 February 2026ಗದಗ - ಅಪಾರ ಸಸ್ಯ ಸಂಪತ್ತು, ಚಿನ್ನದ ನಿಕ್ಷೇಪ ಇರುವ ಕಪ್ಪತ್ತಗುಡ್ಡದ ಸಂರಕ್ಷಣೆಯ ಕೂಗು

ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ ಅವರು ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾದ ಈ ಜೀವವೈವಿಧ್ಯ ತಾಣದ ಸಂರಕ್ಷಣೆ ಎಲ್ಲರ ಹೊಣೆ ಎಂದಿದ್ದಾರೆ.

Read Full Story
07:09 PM (IST) Feb 23

Karnataka News Live 23 February 2026ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಸ್ನೇಹಮಯಿ ಕೃಷ್ಣಗೆ ಮತ್ತೆ ಬಿತ್ತು ಗುದ್ದು!

ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹೊಸ ದೂರು ದಾಖಲಾಗಿದೆ. ಮುಡಾ ಹಗರಣ ಮತ್ತು ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರುದಾರ ಜಯಂತ್ ಟಿ. ಆರೋಪಿಸಿದ್ದು, ತಕ್ಷಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
Read Full Story
07:02 PM (IST) Feb 23

Karnataka News Live 23 February 2026ಧಾರವಾಡ-ರಾಮನಗರ ಸಂಪರ್ಕಿಸೋ ಆ ಕಾಲದ ಸೇತುವೆ, ಹೊಸ ತಾಲೂಕು ಅಳ್ನಾವರಕ್ಕೆ ಅಪಾಯದಂಚಲ್ಲಿರುವ ಹಳೇ ಸೇತುವೆಗಳೇ ಸಮಸ್ಯೆ!

ಅಳ್ನಾವರ ತಾಲೂಕಿನಲ್ಲಿರುವ ಬ್ರಿಟಿಷರ ಕಾಲದ ಸೇತುವೆಗಳು ಸೇರಿದಂತೆ ಪ್ರಮುಖ ಸಂಪರ್ಕ ಕೊಂಡಿಗಳಾದ ಹಳೆಯ ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿವೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಸೇತುವೆಗಳ ದುರಸ್ತಿಗೆ ಸ್ಥಳೀಯ ಆಡಳಿತ ಗಮನ ಹರಿಸದ ಕಾರಣ, ಮಳೆಗಾಲಕ್ಕೂ ಮುನ್ನ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.
Read Full Story
06:44 PM (IST) Feb 23

Karnataka News Live 23 February 2026ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ, ನಂತರ ಆತನೂ ಬಂದು ರೇ*ಪ್‌ ಮಾಡಿದ, ಈಗ ಇಬ್ರೂ ಅರೆಸ್ಟ್‌!

17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸ್ನೇಹಿತನಿಗೆ ಕಳುಹಿಸಿದ ಯುವಕ. ಆ ವಿಡಿಯೋ ಬಳಸಿ ಬಾಲಕಿಗೆ ಬ್ಲಾಕ್ಮೇಲ್ ಮಾಡಿ ಆತ ಕೂಡ ದೌರ್ಜನ್ಯ ಎಸಗಿದ್ದು, ಈ ಪ್ರಕರಣದಲ್ಲಿ ಪತ್ತನಂತಿಟ್ಟ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
Read Full Story
06:06 PM (IST) Feb 23

Karnataka News Live 23 February 2026'ಬಾಲಿವುಡ್‌ ನಟನಾದ್ರೆ ಈಗಲೇ ಕೇಸ್‌ ವಿಚಾರಣೆ ಮಾಡ್ಬೇಕಾ?' - ಕರ್ನಾಟಕದ ಅಳಿಯನಿಗೆ ಹೈಕೋರ್ಟ್‌ ಫುಲ್‌ ಕ್ಲಾಸ್‌!

'ಕಾಂತಾರಾ' ಪಾತ್ರವನ್ನು ಅವಹೇಳನ ಮಾಡಿದ್ದ ಆರೋಪದ ಮೇಲೆ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದೆ. ಈ ಎಫ್‌ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ ನ್ಯಾಯಾಲಯವು ವಿಶೇಷ ಆದ್ಯತೆ ನೀಡಲು ನಿರಾಕರಿಸಿ, ತುರ್ತು ವಿಚಾರಣೆ ಮನವಿಯನ್ನು ಪ್ರಶ್ನಿಸಿದೆ.

Read Full Story
05:36 PM (IST) Feb 23

Karnataka News Live 23 February 2026ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ - ಸಿಎಂ ಸಿದ್ದರಾಮಯ್ಯ ಘೋಷಣೆ

ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕೋಲಾದಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಲಕ್ಕಿ ಒಕ್ಕಲಿಗರ ಎಸ್ಟಿ ಸೇರ್ಪಡೆ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದ್ದು, ಮತ್ತೊಮ್ಮೆ ಶಿಫಾರಸು ಮಾಡುವುದಾಗಿ ತಿಳಿಸಿದರು.

Read Full Story
04:53 PM (IST) Feb 23

Karnataka News Live 23 February 2026ಕಾಂಗ್ರೆಸ್‌ ನಲ್ಲಿ ಹೊಸ ಬಿರುಗಾಳಿ, ಸಚಿವ ಸಂಪುಟ ಪುನರ್‌ರಚನೆಗೆ ಒತ್ತಾಯಿಸಿ ಹೈಕಮಾಂಡ್ ಮೊರೆ ಹೋದ 31 ಶಾಸಕರು!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆಗೆ ಒತ್ತಾಯ ಹೆಚ್ಚಾಗಿದ್ದು, 30ಕ್ಕೂ ಹೆಚ್ಚು ಮೊದಲ ಬಾರಿಯ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಕನಿಷ್ಠ 5ಮಂದಿ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದು, 2028ರ ಚುನಾವಣೆಯ ಗುರಿ ಸಾಧಿಸಲು ಅಗತ್ಯವೆಂದು ಪ್ರತಿಪಾದಿಸಿದ್ದಾರೆ.

Read Full Story
04:48 PM (IST) Feb 23

Karnataka News Live 23 February 2026ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಾಳೆ ಬಂದ್ - ಶಾಲೆಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ!

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಫೆಬ್ರವರಿ 24 ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ನಿಂದಾಗಿ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Read Full Story
04:41 PM (IST) Feb 23

Karnataka News Live 23 February 2026Rain Alert - ಬಿರು ಬೇಸಿಗೆಯ ನಡುವೆ ವರುಣನ ಎಂಟ್ರಿ - ರಾಜ್ಯದ ಈ 5 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಎಲ್ಲೋ ಅಲರ್ಟ್'!

ಹವಾಮಾನ ಇಲಾಖೆಯು ಕರ್ನಾಟಕದ ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಮಳೆಯು ಬಿಸಿಲಿನಿಂದ ತಾತ್ಕಾಲಿಕ ಉಪಶಮನ ನೀಡಲಿದ್ದರೂ, ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುವ ಎಚ್ಚರಿಕೆಯನ್ನೂ ನೀಡಲಾಗಿದೆ.
Read Full Story
04:29 PM (IST) Feb 23

Karnataka News Live 23 February 2026ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿಗೆ ಅಪೊಲೊ ಫಾರ್ಮಸಿ ಕೊಡ್ತಿದ್ದ ಸಂಬಳ ರಿವೀಲ್ ಮಾಡಿದ ತಾಯಿ!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ, ಮೃತನ ತಾಯಿ ರತ್ನಪ್ರಭಾ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿದರು. ತನ್ನ ಮಗ ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ತನಗೆ ತಿಳಿದಿಲ್ಲವೆಂದೂ, ಅವನೊಂದಿಗಿನ ಕೊನೆಯ ಕರೆಯ ವಿವರಗಳನ್ನು ಹಂಚಿಕೊಂಡರು. ಆತನಿಗೆ ಅಪೊಲೋ ಫಾರ್ಮಸಿ ನೀಡ್ತಿದ್ದ ಸಂಬಳ ವಿವರ ಹಂಚಿಕೊಂಡರು.

Read Full Story
04:27 PM (IST) Feb 23

Karnataka News Live 23 February 2026Toxic Making Video - ಯಶ್​ ಡಬಲ್​ ರೋಲ್​; ಗಡ್ಡಲೆಸ್​ ಲುಕ್​- ನಾಯಕಿಯರು ಇವರೇ; ಏನಿದು ಸ್ಟೋರಿ?

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಗಡ್ಡ ಬೋಳಿಸಿರುವುದು ದ್ವಿಪಾತ್ರದ ಬಗ್ಗೆ ಸುಳಿವು ನೀಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಸೇರಿ ಹಲವು ನಾಯಕಿಯರಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

Read Full Story