ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ
ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ, ಬರೋಬ್ಬರಿ 7,000 ಉದ್ಯೋಗಿಗಳ ಕೆಲಸ ಮಾಡಲು ಸ್ಥಳವಕಾಶವಿರುವ ಅತೀ ದೊಡ್ಡ ಕಚೇರಿ ಇದಾಗಿದೆ. 11 ಮಹಡಿ, 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ.
ಅಮೇಜಾನ್ ಬೆಂಗಳೂರು ಆಫೀಸ್ ಆರಂಭ
ಏಷ್ಯಾದಲ್ಲಿ ಎರಡನೇ ಅತೀ ದೊಡ್ಡ ಅಮೇಜಾನ್ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾರಂಭಗೊಡಿದೆ. 12 ಮಹಡಿಗಳ 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಈ ಕ್ಯಾಂಪಸ್‌ನಲ್ಲಿ ಬರೋಬ್ಬರಿ 7000 ಉದ್ಯೋಗಿಗಳು ಏಕಾಕಾಲದಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಇ ಕಾಮರ್ಸ್, ಪೇಮೆಂಟ್, ಮಾರ್ಕೆಟಿಂಗ್, ಟೆಕ್ನಾಲಜಿ, ಸರ್ವೀಸ್, ಸೇಲ್ಸ್ ಸೇರಿದಂತೆ ಎಲ್ಲಾ ವಿಭಾಗ ಒಂದೇ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲಿದೆ.
5 ಏಕರೆ ಪ್ರದೇಶದಲ್ಲಿ ತಲೆ ಎತ್ತಿದ ಕಚೇರಿ
ಐದು ಏಕರೆ ಪ್ರದೇಶದಲ್ಲಿ ಅಮೇಜಾನ್ ಕಚೇರಿ ತಲೆ ಎತ್ತಿ ನಿಂತಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 15 ಕಿಲೋಮೀಟರ್ ದೂರದಲ್ಲಿ ಈ ಕಾರ್ಪೋರೇಟ್ ಕ್ಯಾಂಪಸ್ ಇಂದು ಉದ್ಘಾಟನೆಗೊಂಡಿದೆ. ಸಚಿವ ಎಂಬಿ ಪಾಟೀಲ್ ಅಮೇಜಾನ್ ನೂತನ ಕಚೇರಿ ಉದ್ಘಾಟನೆ ಮಾಡಿದ್ದಾರೆ.
40 ಬಿಲಿಯನ್ ಡಾಲರ್ ಹೂಡಿಕೆ
ಅಮೇಜಾನ್ ಈಗಾಗಲೇ ಭಾರದಲ್ಲಿ 40 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. 2030ರ ವೇಳೆಗೆ ಮತ್ತೆ 35 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ. ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡುತ್ತಿರುವ ಅಮೇಜಾನ್ ಇದೀಗ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ಏಷ್ಯಾದ ಮೊದಲ ಅತೀ ದೊಡ್ಡ ಆಫೀಸ್ ಕೂಡ ಭಾರತದಲ್ಲೇ
ಏಷ್ಯಾದಲ್ಲಿ ಅಮೇಜಾನ್ ಕಂಪನಿಯ ಎರಡು ಅತೀ ದೊಡ್ಡ ಕಚೇರಿಗಳು ಭಾರತದಲ್ಲೇ ಇದೇ. ಏಷ್ಯಾದ ಅತೀ ದೊಡ್ಡ ಅಮೇಜಾನ್ ಆಫೀಸ್ ಇರುವುದು ಹೈದರಾಬಾದ್‌ನಲ್ಲಿ. ಇದೀಗ 2ನೇ ಅತೀ ದೊಡ್ಡ ಆಫೀಸ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಈ ಮೂಲಕ ಎರಡು ಐಟಿ ಸಿಟಿಗಳಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲೇ ಅಮೇಜಾನ್ ಹೂಡಿಕೆ ಮಾಡಿದೆ.
ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿದೆ ಅಮೇಜಾನ್
ಕರ್ನಾಟಕದಲ್ಲಿ ಅತೀ ವೇಗವಾಗಿ ಅಮೇಜಾನ್ ಕಂಪನಿ ಬೆಳೆಯುತ್ತಿದೆ. ಕರ್ನಾಟಕ ಮೂಲೆ ಮೂಲೆಯಲ್ಲೂ ಅಮೇಜಾನ್ ಡೆಲಿವರಿ ನೀಡುತ್ತಿದೆ. ತ್ವರಿತ ಡೆಲಿವರಿ ಸೇರಿದಂತೆ ಅಮೇಜಾನ್ ಕಂಪನಿ ಅತೀ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿದೆ ಅಮೇಜಾನ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

