MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 'ಗಂಡು ಮಗು ಹುಟ್ಟಿದೆ' ಎಂದು ಡಾಕ್ಟರ್​ ಹೇಳಿದಾಕ್ಷಣವೇ ಡಿಸೈಡ್​ ಮಾಡಿಬಿಟ್ಟಿದ್ದೆ- ಮೇಘನಾ ರಾಜ್ ಮೆಲುಕು

'ಗಂಡು ಮಗು ಹುಟ್ಟಿದೆ' ಎಂದು ಡಾಕ್ಟರ್​ ಹೇಳಿದಾಕ್ಷಣವೇ ಡಿಸೈಡ್​ ಮಾಡಿಬಿಟ್ಟಿದ್ದೆ- ಮೇಘನಾ ರಾಜ್ ಮೆಲುಕು

ನಟಿ ಮೇಘನಾ ರಾಜ್ ಅವರು ಪತಿ ಚಿರು ಸರ್ಜಾ ಅವರ ಅಕಾಲಿಕ ಮರಣ ಮತ್ತು ಮಗ ರಾಯನ್ ಜನನದ ಸಂದರ್ಭದಲ್ಲಿ ಅನುಭವಿಸಿದ ದುಃಖ ಮತ್ತು ಸಂತೋಷದ ಮಿಶ್ರ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಮಗನಿಗಾಗಿ ಬದುಕುವ ನಿರ್ಧಾರದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

2 Min read
Author : Suchethana D
Published : Feb 23 2026, 07:31 PM IST
Share this Photo Gallery
  • FB
  • TW
  • Linkdin
  • Whatsapp
16
ದುಃಖ ಖುಷಿ ಒಂದೇ ಸಲವಾದಾಗ...
Image Credit : X

ದುಃಖ- ಖುಷಿ ಒಂದೇ ಸಲವಾದಾಗ...

ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಮೇಘನಾ ರಾಜ್​ ಸದ್ಯ ಮಗ ರಾಯನ್​ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಗರ್ಭಿಣಿಯಾಗಿದ್ದಾಗಲೇ ಪತಿ ಚಿರು ಅಗಲಿದ್ದರಿಂದ, ಆ ಸಮಯದಲ್ಲಿ ನಟಿ ಪಟ್ಟಿರುವ ಯಾತನೆ, ಸಂಕಟ ಬಹುಶಃ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲದ್ದು. ಒಂದೆಡೆ ಮಗುವಿನ ಜನನದ ಖುಷಿ, ಮತ್ತೊಂದೆಡೆ ಪತಿಯ ಅಕಾಲಿಕ ಮರಣ... ಈ ಸಂದರ್ಭದಲ್ಲಿ ತಾವು ಅನುಭವಿಸಿರುವ ನೋವಿನ ಕಥೆಯನ್ನು ಎಳೆಎಳೆಯಾಗಿ ನಟಿ ತೆರೆದಿಟ್ಟಿದ್ದಾರೆ.

26
ಮನಸ್ಸಿನ ತೊಳಲಾಟ
Image Credit : Instagram Meghana Raj

ಮನಸ್ಸಿನ ತೊಳಲಾಟ

Rayane Mithun ಎನ್ನುವ ಇಂಗ್ಲಿಷ್​ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮೇಘನಾ ರಾಜ್​ (Meghana Raj) ಅವರು, ತಮಗೆ ಆ ಸಂದರ್ಭದಲ್ಲಿ ಆಗಿರುವ ನೋವಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಆ ಸಮಯದಲ್ಲಿ ಸೀಮಂತ ಮಾಡಿಕೊಳ್ಳಲೂ ಇಷ್ಟವಿರಲಿಲ್ಲ. ಆದರೆ, ಮನೆಯವರು ಆ ಶಾಸ್ತ್ರವನ್ನು ಮಾಡಿದರು. ಆಗ ನನಗಾದ ಸಂಕಟವನ್ನು ಹೇಗೆ ಹೇಳಲಿ ಎಂದು ಪ್ರಶ್ನಿಸಿದ್ದಾರೆ ನಟಿ.

Related Articles

Related image1
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
Related image2
Meghana Raj's Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​
36
ತುಂಬಾ ಭಯವಿತ್ತು
Image Credit : youtube/@Rayane_Mithun

ತುಂಬಾ ಭಯವಿತ್ತು

ನನ್ನೊಳಗಿನ ತೊಳಲಾಟದಲ್ಲಿ, ಆ ಸಂದರ್ಭದಲ್ಲಿನ ಮಾನಸ್ಥಿಕ ಸ್ಥಿತಿಯಲ್ಲಿ ಮಗು ಹೇಗೆ ಹುಟ್ಟುತ್ತದೆಯೋ ಎನ್ನುವ ಭಯವಿತ್ತು. ತುಂಬು ಗರ್ಭಿಣಿಯಾಗಿದ್ದರಿಂದ ಅಮ್ಮನ ಮನಸ್ಥಿತಿ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುವ ಕಾರಣದಿಂದ ನನ್ನ ಮಗು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಹುಟ್ಟಲಿ ಎನ್ನುವ ಆಸೆ ಬಿಟ್ಟರೆ ಮತ್ತಿನ್ನೇನೂ ನನ್ನ ತಲೆಯಲ್ಲಿ ಹೊಳೆಯುತ್ತಿರಲಿಲ್ಲ ಎಂದು ಆ ದಿನಗಳ ನೋವನ್ನು ನಟಿ ತೆರೆದಿಟ್ಟಿದ್ದಾರೆ.

46
ಆಗಲೇ ಡಿಸೈಡ್​ ಮಾಡಿಬಿಟ್ಟೆ
Image Credit : Instagram

ಆಗಲೇ ಡಿಸೈಡ್​ ಮಾಡಿಬಿಟ್ಟೆ

ರಾಯನ್​ ಹುಟ್ಟಿದ ಮೇಲೆ ನನ್ನ ಪ್ರಪಂಚವೇ ಬದಲಾಯಿತು. ನನಗೆ ಮಗು ಹುಟ್ಟಿದಾಗ, ಮಗುವನ್ನು ಎತ್ತಿಕೊಂಡ ಡಾಕ್ಟರ್​ ಗಂಡು ಮಗು ಹುಟ್ಟಿದೆ. ಪಿಂಕ್​ ಪಿಂಕ್​ ಬೇಬಿ ಬಾಯ್​ ಎಂದು ಹೇಳಿದರು. ಆಗಲೇ ನಾನು ಡಿಸೈಡ್​ ಮಾಡಿಬಿಟ್ಟೆ. ಇವನಿಗಾಗಿ ಬದುಕಬೇಕು, ಇವನಿಗಾಗಿ ಜೀವಿಸಬೇಕು, ಖುಷಿಯಾಗಿ ಇರಬೇಕು ಎನ್ನುವುದಾಗಿ ನಟಿ ಹೇಳಿದ್ದಾರೆ.

56
ಎರಡನೆಯ ಮದುವೆಯ ಬಗ್ಗೆ
Image Credit : Instagram

ಎರಡನೆಯ ಮದುವೆಯ ಬಗ್ಗೆ

ಇದೇ ಸಂದರ್ಶನದಲ್ಲಿ ನಟಿ ತಮ್ಮ ಎರಡನೆಯ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. 'ಪ್ರತಿಯೊಬ್ಬರಿಗೂ ಸಂಗಾತಿ ಬೇಕು, ಆತ ಗಂಡನಾಗಿಯೇ ಅಂತಲ್ಲ, ಆದರೆ ಜೊತೆಗಾರನಾಗಿ ಇರಬೇಕು. ಒಂದು ಗಂಡಿಗೆ ಒಂದು ಹೆಣ್ಣು ಹೌದಾದರೂ, ಎಲ್ಲಾ ಸಂದರ್ಭದಲ್ಲಿಯೂ ಅದು ಹಾಗೆಯೇ ಆಗಬೇಕೆಂದೇನೂ ಇಲ್ಲ.ಕೊನೆ ಪಕ್ಷ ನಮ್ಮ ಕಷ್ಟ-ಸುಖ ಮಾತನಾಡಲು ಆದರೂ ಜೊತೆಗಾರ ಬೇಕು ಎಂದಿದ್ದಾರೆ.

66
ತುಂಬಾ ಮಂದಿ ಕೇಳ್ತಾರೆ
Image Credit : Instagram

ತುಂಬಾ ಮಂದಿ ಕೇಳ್ತಾರೆ

ಈ ಬಗ್ಗೆ ತುಂಬಾ ಮಂದಿ ನನ್ನ ಬಳಿ ಮಾತನಾಡುತ್ತಾರೆ. ಮತ್ತೊಂದು ಮದುವೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ಸದ್ಯ ಇನ್ನೊಂದು ಲವ್​ ಬಗ್ಗೆ ನಾನು ಮಾನಸಿಕವಾಗಿ ರೆಡಿಯಾಗಿಲ್ಲ. ಹಾಗೆಂದು ಅದು ಆಗುವುದೇ ಇಲ್ಲವೆಂದೇನಲ್ಲ. ಮುಂದೊಮ್ಮೆ ಏನಾದರೂ ಈ ರೀತಿ ಚಾನ್ಸ್​ ಬಂದರೆ, ಆ ಕ್ಷಣದಲ್ಲಿ ಏನು ನಿರ್ಧಾರ ಮಾಡಬೇಕು ಎನ್ನುವುದನ್ನು ಯೋಚನೆ ಮಾಡುತ್ತೇನೆ ಎನ್ನುವ ಮೂಲಕ, ಇನ್ನೊಂದು ಮದುವೆಯಾಗುವ ಸೂಚನೆ ಕೊಟ್ಟಿದ್ದರು. ಆದರೆ ಇದೀಗ ಓಪನ್​ ಆಗಿ ಅದರ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮೇಘನಾ ರಾಜ್
ಚಿರಂಜೀವಿ
ಮನರಂಜನಾ ಸುದ್ದಿ
ಸಂಬಂಧಗಳು
ಮಹಿಳೆಯರು
ಗರ್ಭಧಾರಣೆ
ವೈದ್ಯರು
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
Toxic Making Video: ಯಶ್​ ಡಬಲ್​ ರೋಲ್​; ಗಡ್ಡಲೆಸ್​ ಲುಕ್​- ನಾಯಕಿಯರು ಇವರೇ; ಏನಿದು ಸ್ಟೋರಿ?
Recommended image2
ಹಸಿರು ಗಾಜಿನ ಬಳೆ ತೊಟ್ಟು ಸಂಭ್ರಮಿಸಿದ ಕಾವೂ, ಕೊಟ್ಟಿದ್ದು ಯಾರು ಅಂತಾ ಗೊತ್ತಾಯ್ತು ಅಂದ ಗಿಲ್ಲಿ ಫ್ಯಾನ್ಸ್‌!
Recommended image3
ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತೆ, ಪ್ರಿಯಾ ಪಾತ್ರ ಮಾಡ್ಬೇಡಿ ಅಂದ್ರು: Nanda Gokula Serial ಅರ್ಪಿತಾ ಗೌಡ
Related Stories
Recommended image1
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
Recommended image2
Meghana Raj's Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved