ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಗಡ್ಡ ಬೋಳಿಸಿರುವುದು ದ್ವಿಪಾತ್ರದ ಬಗ್ಗೆ ಸುಳಿವು ನೀಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಸೇರಿ ಹಲವು ನಾಯಕಿಯರಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಯಶ್​ ನಟನೆಯ ಟಾಕ್ಸಿಸ್​ ಚಿತ್ರ ಇದಾಗಲೇ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದೆ. ಇದರ ಟೀಸರ್​ನಲ್ಲಿ ಕಾರೊಳಗಿನ ದೃಶ್ಯಕ್ಕೆ ಸಿಕ್ಕಾಪಟ್ಟೆ ಟೀಕೆಗಳೂ ಕೇಳಿಬರುತ್ತಿವೆ. ಇದರ ನಡುವೆಯೇ, ಟಾಕ್ಸಿಕ್​ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೀಸರ್​​ ಮತ್ತು ಪೋಸ್ಟರ್​​ ಮೂಲಕ ಇದಾಗಲೇ ಚಿತ್ರ ಹವಾ ಸೃಷ್ಟಿಸಿದೆ. ಇದೀಗ ಈ ಚಿತ್ರದ ಮೇಕಿಂಗ್​ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ಯಶ್​ ಅವರು ಗಡ್ಡದ ಶೇವಿಂಗ್​ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಯಶ್​ ಅವರದ್ದು ಡಬಲ್​ ರೋಲ್​ ಎಂದೇ ಹೇಳಲಾಗುತ್ತಿದ್ದು, ಇದೀಗ ಈ ವಿಡಿಯೋ ನೋಡಿದರೆ ಅದು ನಿಜ ಎನ್ನುವುದು ತಿಳಿಯುತ್ತದೆ. ಇದಾಗಲೇ ಈ ಚಿತ್ರವನ್ನು ಹಾಲಿವುಡ್​ ರೀತಿಯಲ್ಲಿ ಕೂಡ ಶೂಟ್​ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿರುವ ಕಾರಣ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಎನ್ನುವ ನಿರೀಕ್ಷೆಯೂ ಇದೆ.

ಯುಗಾದಿಯಂದು ಬಿಡುಗಡೆ

ಯುಗಾದಿ ಹಬ್ಬ ಅಂದ್ರೆ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಟಾಕ್ಸಿಕ್ ಬಿಡುಗಡೆ ಆಗಲಿದೆ. ಹೇರ್ ಸ್ಟೈಲಿಸ್ಟ್ ವಿಜಯ್ ವಿಖ್ಯಾತ್ ಅವರು ಯಶ್​ ಅವರಿಗೆ ಹೊಸ ಹೇರ್​ಸ್ಟೈಲ್​ ನೀಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಕಳೆದ ಜನವರಿ 8 ರಂದು ಯಶ್​ ಅವರ ಬರ್ತ್​ಡೇ ದಿನವೇ ಟಾಕ್ಸಿಕ್​ ಚಿತ್ರ ಗ್ಲಿಂಪ್ಸ್ ಒಂದನ್ನು ಅನಾವರಣ ಮಾಡಲಾಗಿತ್ತು. ಅದರಲ್ಲಿ ​​ ಅವರನ್ನು ರಾಯ ಎಂದು ಪರಿಚಯಿಸಲಾಗಿತ್ತು. ಆ ಬಳಿಕ, ಫೆಬ್ರವರಿ 20ರಂದು ಟೀಸರ್​ ಬಿಡುಗಡೆಯಾಗಿತ್ತು. ಇದು ಸಾಕಷ್ಟು ಟೀಕೆಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಉಳಿದೆಲ್ಲವನ್ನೂ ಬಿಟ್ಟು ಕಾರು ಡಾನ್ಸ್​ ಮಾಡುವುದೇ ಹೈಲೈಟ್​ ಆಗಿ, ಜನರು ವಿವಿಧ ಬಗೆಯ ಕಮೆಂಟ್​ ಹಾಕಲು ಶುರು ಮಾಡಿದ್ದರು. ಇದರ ಬಗ್ಗೆ ಪರ-ವಿರೋಧದ ನಿಲುವು ವ್ಯಕ್ತವಾಗಿತ್ತು.

ವಿವಿಧ ರೂಪ

ಆದರೆ ಈ ಟೀಸರ್​ನಲ್ಲಿ ಯಶ್​ ಅವರ ವಿವಿಧ ರೂಪವನ್ನು ನೋಡಬಹುದಾಗಿದೆ. ಆ ಬಳಿಕ ಮೊನ್ನೆ ಅಂದರೆ ಫೆ. 21ರಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಯಿತು. 'Rocking star Yash as Ticket' ಎಂದು ಅದರಲ್ಲಿ ಬರೆಯಲಾಗಿತ್ತು. ಇದು ನಟನನ್ನು ಸಖತ್ ಯಂಗ್ ಆಗಿ ತೋರಿಸಿತ್ತು. ಇದೀಗ ಅನಾವರಣಗೊಂಡಿರುವ ವಿಡಿಯೋ ಇದೇ ಟಿಕೆಟ್​​​ ಪಾತ್ರದ ಸ್ಟೈಲಿಂಗ್​​ ವಿಡಿಯೋ ಆಗಿದೆ.

ನಾಯಕಿಯರು ಇವರೇ

ಅಂದಹಾಗೆ,ಚಿತ್ರದ ನಾಯಕಿಯರ ಬಗ್ಗೆ ಇದಾಗಲೇ ಕುತೂಹಲವೂ ಮೂಡಿದ್ದು, ಅದಕ್ಕೂ ಈಗ ಉತ್ತರ ಸಿಕ್ಕಿದೆ. ಮೆಲಿಸಾ ಪಾತ್ರದಲ್ಲಿ ನಟಿ ರುಕ್ಮಿಣಿ ವಸಂತ್, ಗಂಗಾ ಆಗಿ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ನ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ ಇದ್ದಾರೆ. ಇಷ್ಟೊಂದು ಮಂದಿ ಇರುವಾಗ ಒಬ್ಬರೇ ನಾಯಕಿ ಡೌಟ್​ ಎಂದೂ ಹೇಳಲಾಗುತ್ತಿದೆ. ಈ ಚಿತ್ರ ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾನ್ಸ್ಟರ್ ಮೈಡ್ ಕ್ರಿಯೇಷನ್ಸ್ ಸೇರಿ ನಿರ್ಮಾಣ ಮಾಡಲಾಗಿದೆ.

View post on Instagram