10:52 PM (IST) Aug 23

Karnataka News Live 23 August 2026Karnataka Politics - ಡೆಲ್ಲಿಯಲ್ಲಿ ರಾಹುಲ್ 'ಫೈಟ್'; ಬೆಂಗಳೂರಲ್ಲಿ ಡಿಕೆಶಿ 'ಊಟ್-ಬೈಟ್'! ಅದಾನಿ ಭೇಟಿಗೆ ಬಿಜೆಪಿ ಛಾಟಿ!

ಬೆಂಗಳೂರಿನಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಗೌಪ್ಯ ಸಭೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ಟೆಂಡರ್ ಪ್ರಕ್ರಿಯೆಯ ನಿರ್ಣಾಯಕ ಹಂತದಲ್ಲಿ ಈ ಭೇಟಿ ನಡೆದಿದ್ದು, ಇದು ಕಾಂಗ್ರೆಸ್‌ನ ದ್ವಂದ್ವ ನೀತಿ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ.

Read Full Story
10:29 PM (IST) Aug 23

Karnataka News Live 23 August 2026Koppal - ಚಿರತೆ ಆತಂಕದ ಬೆನ್ನಲ್ಲೇ ಗಂಗಾವತಿಯಲ್ಲಿ ಹುಲಿ ಪ್ರತ್ಯಕ್ಷ - ಅರಣ್ಯ ಇಲಾಖೆ ಹೈ ಅಲರ್ಟ್!

Gangavathi: ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.

Read Full Story
10:24 PM (IST) Aug 23

Karnataka News Live 23 August 2026Cricket - ಥೇಟ್‌ ಕೆಜಿಎಫ್‌ ಸ್ಟೈಲ್‌ ಅಲ್ಲಿ ಪೋಸ್ಟ್; ತಾಯಿಯನ್ನು ಕಳೆದುಕೊಂಡ 16 ದಿನಗಳ ಬಳಿಕ ಮನದ ನೋವು ಬಿಚ್ಚಿಟ್ಟ ಈ ಖ್ಯಾತ ಕ್ರಿಕೆಟಿಗ

ತಾಯಿಯ ನಿಧನದ ನೋವಿನ ನಡುವೆಯೂ ಕ್ರಿಕೆಟಿಗ ನಿತೀಶ್ ರಾಣಾ ಮೈದಾನಕ್ಕಿಳಿದು ಅರ್ಧಶತಕ ಬಾರಿಸಿದ್ದಾರೆ. ತಮ್ಮ ಈ ಸಾಧನೆಯನ್ನು ಸ್ವರ್ಗಸ್ಥ ತಾಯಿಗೆ ಅರ್ಪಿಸಿ, ಮೈದಾನದಲ್ಲೇ ಕಣ್ಣೀರಿಟ್ಟ ಅವರು, ನಂತರ 'ಕೆಜಿಎಫ್' ಶೈಲಿಯಲ್ಲಿ ತಮ್ಮ ತಾಯಿಯ ತ್ಯಾಗವನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Read Full Story
10:22 PM (IST) Aug 23

Karnataka News Live 23 August 2026ನಾಳೆ ದಾವಣಗೆರೆ ಬಂದ್.. ತುರ್ತು ಸೇವೆ ಬಿಟ್ಟ ಎಲ್ಲಾ ಬಂದ್ ಬಂದ್! ಕಾರಣ ಏನು..?

ಭದ್ರಾ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಾವಣಗೆರೆ ನಗರ ಬಂದ್‌ಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿದೆ. ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಖಾಸಗಿ ಬಸ್, ಆಟೋ ಮತ್ತು ವರ್ತಕರ ಸಂಘ ಬೆಂಬಲ ಸೂಚಿಸಿವೆ.

Read Full Story
10:05 PM (IST) Aug 23

Karnataka News Live 23 August 2026ಕೊಪ್ಪಳಕ್ಕೆ ಬಿಗ್ ನ್ಯೂಸ್! 2 ವರ್ಷದಲ್ಲಿ ಆರೋಗ್ಯ ಸೇವೆ ವಿಸ್ತರಣೆ - ಸದ್ಗುರು ಮಧುಸೂದನ ಸಾಯಿ ಘೋಷಣೆ

Madhusudana Sai: ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ.

Read Full Story
09:31 PM (IST) Aug 23

Karnataka News Live 23 August 2026Kunal - ಒಂದೆಡೆ ಮದುವೆಯ ಹಠ, ಮತ್ತೊಂದೆಡೆ ಕುಟುಂಬದಿಂದ ಅಂತರ; ಐಫೋನ್‌ ವಿವಾದದ ಹಿಂದೆ ಅಡಗಿದ್ದ ಸತ್ಯ ಬಿಚ್ಚಿಟ್ಟ ಕುನಾಲ್‌ ಚಿಕ್ಕಮ್ಮ!

ಜಲ್ನಾದ ಖಾವದ್ಯ ಬೆಟ್ಟದಲ್ಲಿ ನಡೆದ ದುರಂತದಲ್ಲಿ ಕುನಾಲ್, ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ಸಾವನ್ನಪ್ಪಿದ್ದಾರೆ. ಈ ಘಟನೆ ಕೇವಲ ಅಪಘಾತವಲ್ಲ, ಬದಲಾಗಿ ವರ್ಷಗಳಿಂದ ಕುಟುಂಬದಲ್ಲಿ ಬೇರೂರಿದ್ದ ಕೌಟುಂಬಿಕ ಕಲಹ ಮತ್ತು ಮುರಿದ ಸಂಬಂಧಗಳ ದುರಂತಮಯ ಅಂತ್ಯವಾಗಿತ್ತು. ಸಂಬಂಧಿಕರು ಈಗ ಈ ದುರಂತದ ಹಿಂದಿನ ಕಟು ಸತ್ಯವನ್ನು ಬಹಿರಂಗಪಡಿಸಿದ್ದಾರೆ.
Read Full Story
09:06 PM (IST) Aug 23

Karnataka News Live 23 August 2026ರಾಜ್‌ಕುಮಾರ್ ಮೊಮ್ಮಗಳು ಎಂಬ ಟ್ಯಾಗ್... ‘ನನಗೆ ಅನುಕೂಲವಾಗಿಲ್ಲ’ ಎಂದ ಧನ್ಯಾ ರಾಮ್‌ಕುಮಾರ್!

ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗಳು, ನಟಿ ಧನ್ಯಾ ರಾಮ್‌ಕುಮಾರ್ ಇದೀಗ ಕನ್ನಡ ಸಿನಿಮಾವನ್ನು ಮೀರಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದಾರೆ.

Read Full Story
07:56 PM (IST) Aug 23

Karnataka News Live 23 August 2026ಐಫೋನ್ ಹುಚ್ಚೋ ಅಥವಾ ಮಾನಸಿಕ ಕಾಯಿಲೆಯೋ? ಕುನಾಲ್‌ನ ಹಳೆಯ ರಹಸ್ಯ ಬಯಲು! ಕಳೆದ ಬಾರಿ ಜೀವ ಉಳಿದಿತ್ತು! ಈ ಬಾರಿ ಕುಟುಂಬವೇ ಬಲಿಯಾಯ್ತು!

ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ ಇಎಂಐ ವಿಚಾರವಾಗಿ ನಡೆದ ಜಗಳವು ಭೀಕರ ದುರಂತಕ್ಕೆ ಕಾರಣವಾಗಿದೆ. ಖವಾಡ್ಯಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಗನನ್ನು ಉಳಿಸಲು ಹೋಗಿ, ತಂದೆ, ತಾಯಿ ಹಾಗೂ ಮಗ ಮೂವರೂ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಇಡೀ ಕುಟುಂಬದ ನಾಶಕ್ಕೆ ಕಾರಣವಾಯಿತು.

Read Full Story
07:34 PM (IST) Aug 23

Karnataka News Live 23 August 2026ಸಿಂಡ್ರೆಲ್ಲಾ ರಾಧಿಕಾ ಪಂಡಿತ್ 5 ಮಿಲಿಯನ್ ಕ್ಲಬ್‌ಗೆ ಎಂಟ್ರಿ - ಈಗ ಫ್ಯಾನ್ಸ್ ಕೇಳುತ್ತಿರುವುದೇನು ಗೊತ್ತಾ?

ರಾಧಿಕಾ ಪಂಡಿತ್ ಅವರ ಜನಪ್ರಿಯತೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ನಟ ಯಶ್ ಅವರ ಪತ್ನಿ ಎಂಬ ಕಾರಣಕ್ಕೂ ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.

Read Full Story
07:09 PM (IST) Aug 23

Karnataka News Live 23 August 2026DRDO - ಚೀನಾ-ಪಾಕಿಸ್ತಾನದ ನಿದ್ದೆಗೆಡಿಸಿದ DRDOನ ಆ ಒಂದು ಹೆಜ್ಜೆ! ಎಂಟ್ರಿಯಾಯ್ತು ದೇಶದ ಅತ್ಯಂತ ಕ್ಷಿಪ್ರ ಹಾಗೂ ಮಾರಕ ಕ್ಷಿಪಣಿ!

1983ರಲ್ಲಿ ಆರಂಭವಾದ IGMDP ಯೋಜನೆಯಡಿ ಅಭಿವೃದ್ಧಿಪಡಿಸಿದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ 'ಪೃಥ್ವಿ', ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿತು. ಸೇನೆಯ ಮೂರೂ ಪಡೆಗಳಿಗೆ ಪ್ರತ್ಯೇಕ ಆವೃತ್ತಿಗಳಲ್ಲಿ ಲಭ್ಯವಾದ ಈ ಕ್ಷಿಪಣಿಯು, ತನ್ನ ಸುಧಾರಿತ ತಂತ್ರಜ್ಞಾನದಿಂದ ಭಾರತವನ್ನು ಕ್ಷಿಪಣಿ ಕ್ಷೇತ್ರದಲ್ಲಿ ಸೂಪರ್‌ ಪವರ್ ಆಗಲು ದಾರಿ ಮಾಡಿಕೊಟ್ಟಿತು.
Read Full Story
06:54 PM (IST) Aug 23

Karnataka News Live 23 August 2026‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ - ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್

ಹೊಸ ಫೋಟೋಶೂಟ್‌ನಲ್ಲಿ ಅನುಶ್ರೀ ರಾಯಲ್ ಬ್ಲೂ ಬಣ್ಣದ ಕಂಗೊಳಿಸುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸರಳತೆ ಹಾಗೂ ಗ್ಲಾಮರ್ ಎರಡನ್ನೂ ಮೇಳೈಸಿರುವ ಅವರ ಈ ಲುಕ್, ಫೋಟೋಗಳಿಗೆ ಮತ್ತಷ್ಟು ಮೆರುಗು ನೀಡಿದೆ.

Read Full Story
06:15 PM (IST) Aug 23

Karnataka News Live 23 August 2026‘Do I Look Civilized To You?’ ಯಶ್ ವೈರಲ್ ಡೈಲಾಗ್‌ಗೆ ರುಕ್ಮಿಣಿ ಕೊಟ್ಟ ಉತ್ತರ ಕೇಳಿದ್ರೆ ನಗ್ತೀರಾ!

Yash Toxic Dialogue: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ.

Read Full Story
05:41 PM (IST) Aug 23

Karnataka News Live 23 August 2026ಕನ್ನಡ ZEE5ನಿಂದ ಮನರಂಜನೆ ಹೊಸ ಪರ್ವ; ಸಿನಿಮಾ-ಒರಿಜಿನಲ್ಸ್-ಲೈವ್ ಸ್ಪೋರ್ಟ್ಸ್.. ಬೃಹತ್ ಕಂಟೆಂಟ್ ಲಾಂಚ್!

"ಕಳೆದ ವರ್ಷ ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲ ನಮಗೆ ಹೊಸ ಉತ್ಸಾಹ ತುಂಬಿದೆ. 'ಕಾರ್ಪೊರೇಟ್ ಲವ್ ಸ್ಟೋರಿ'ಯಂತಹ ಲಾಂಗ್-ಫಾರ್ಮ್ಯಾಟ್ ಸರಣಿ ಹಾಗೂ 'ಕರಾವಳಿ'ಯಂತಹ ಮಹತ್ವದ ಸಿನಿಮಾಗಳ ಮೂಲಕ ಕನ್ನಡದಲ್ಲೇ ಅತ್ಯಂತ ವೈವಿಧ್ಯಮಯ ಮನರಂಜನೆ ನೀಡುವ ಮುಂಚೂಣಿ ಒಟಿಟಿ ತಾಣವಾಗಿ Zee5 ಬೆಳೆಯುತ್ತಿದೆ"

Read Full Story
05:40 PM (IST) Aug 23

Karnataka News Live 23 August 2026Atal Bihari Vajpayee - ಸಕ್ಕರೆ ಬೆಲೆ ₹20ಕ್ಕೆ ಹೆಚ್ಚಳವಾದಾಗ ಸಂಸತ್ತಿನಲ್ಲಿ ಗುಡುಗಿದ್ದ ವಾಜಪೇಯಿ! ಅಂದು ಅವರು ಹೇಳಿದ್ದ ಮಾತು ಈಗ ವೈರಲ್!

ದೇಶದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹60 ದಾಟಿ ಏರಿಕೆಯಾಗುತ್ತಿದ್ದು, ಗ್ರಾಹಕರ ಬಜೆಟ್ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ಇದೇ ರೀತಿ ಬೆಲೆ ಏರಿಕೆ ಖಂಡಿಸಿದ್ದ ವಾಜಪೇಯಿಯವರ ಹಳೆಯ ಭಾಷಣ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

Read Full Story
05:40 PM (IST) Aug 23

Karnataka News Live 23 August 2026'ಹೆಣ್ಣುಮಕ್ಕಳು ಸಿನಿಮಾ ನೋಡಿ ಭರ್ಜರಿ ಎಂಜಾಯ್ ಮಾಡ್ತಾರೆ' - ಟಾಕ್ಸಿಕ್ ವಿವಾದಕ್ಕೆ ಯಶ್ ಖಡಕ್ ಉತ್ತರ

Toxic Women Controversy: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಚರ್ಚೆ ಹುಟ್ಟುಹಾಕಿದೆ.

Read Full Story
05:21 PM (IST) Aug 23

Karnataka News Live 23 August 2026ಕೆಪಿಎಸ್‌ಸಿ ಹಗರಣ - ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!

ಕೆಪಿಎಸ್‌ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.

Read Full Story
05:14 PM (IST) Aug 23

Karnataka News Live 23 August 2026‘ಭಾರತ ಮತ್ತೆ ಅವರನ್ನ ಪ್ರೀತಿಸಲಿದೆ’ - ‘ಟಾಕ್ಸಿಕ್’ನಲ್ಲಿ ಕಿಯಾರಾ ಅಭಿನಯಕ್ಕೆ ಯಶ್ ಫಿದಾ

ಆಗಸ್ಟ್ 26ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಇದೇ ವೇಳೆ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಯಶ್, ತಮ್ಮ ಸಹನಟಿ ಕಿಯಾರಾ ಅಡ್ವಾಣಿ ಬಗ್ಗೆ ಆಡಿರುವ ಮಾತುಗಳು ಇದೀಗ ಸಖತ್ ಗಮನ ಸೆಳೆಯುತ್ತಿವೆ.

Read Full Story
05:01 PM (IST) Aug 23

Karnataka News Live 23 August 2026Entertainment - ₹2,000 ಸಂಬಳದಿಂದ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೆ! ಟಾಕ್ಸಿಕ್ ಚಿತ್ರದಲ್ಲೂ ಕಮಾಲ್ ಮಾಡಲಿದ್ದಾರೆ ಈ ಬಾಕ್ಸ್ ಆಫೀಸ್ ಕ್ವೀನ್!

ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್‌ನಲ್ಲಿ ಕೇವಲ ₹2000 ಸಂಪಾದಿಸುತ್ತಿದ್ದ ನಟಿ, ಒಂದು ಮ್ಯಾಗಜೀನ್ ಫೋಟೋಶೂಟ್‌ನಿಂದಾಗಿ 'ಮನಸ್ಸಿನಕ್ಕರೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಲೇಡಿ ಸೂಪರ್‌ಸ್ಟಾರ್' ಆಗಿ ಬೆಳೆದ ಅವರ ಯಶಸ್ಸಿನ ಪಯಣ, ವಿವಾದಗಳು ಮತ್ತು ಮುಂಬರುವ 'ಟಾಕ್ಸಿಕ್' ಚಿತ್ರದ ಕುರಿತಾದ ಮಾಹಿತಿಯನ್ನು ಈ ಸ್ಟೋರಿಯಲ್ಲಿದೆ.

Read Full Story
04:36 PM (IST) Aug 23

Karnataka News Live 23 August 2026ಮಂಗಳೂರು ಏರ್‌ಪೋರ್ಟ್‌ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಆಗಿದ್ದು ಯಾರನ್ನು?

ಜೊತೆಗೆ ದರ್ಶನ್‌ ಅವರು ಜೈಲಿನಲ್ಲಿ ಕೆಲವು ವ್ಯವಸ್ಥೆಗಳನ್ನ ಕೇಳಿದ್ದರು. ಜೈಲಿನ ಕಠಿಣ ನಿಯಮಗಳ ಪ್ರಕಾರ ಅದೂ ಕೂಡ ಅವರಿಗೆ ಸಿಕ್ಕಿಲ್ಲ. ಇದರ ಮಧ್ಯೆ ಸೊಳ್ಳೆ ಕಾಟದಿಂದ ನಿದ್ದೆ ಕೂಡ ಬರುತ್ತಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ವರದಿಗಳಿವೆ. ಇದೀಗ ಈ ಬೆಳವಣಿಗೆ ನಡೆದಿದೆ.

Read Full Story
04:36 PM (IST) Aug 23

Karnataka News Live 23 August 2026ಹೀರೋ ಅಲ್ಲ, ವಿಲನ್.. - ‘ಕೌಂತೇಯ’ದಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಅವತಾರ

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಇದುವರೆಗೆ ಹೀರೋ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಇದೇ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರದ ಮೂಲಕ..

Read Full Story