11:15 PM (IST) Mar 22

Karnataka News Live 22 March 2026ಸಚಿವ ಶಿವರಾಜ್ ತಂಗಡಗಿಗೆ ಎದೆನೋವು - ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲು

Minister Shivaraj Tangadagi health: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕೊಪ್ಪಳದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

Read Full Story
10:00 PM (IST) Mar 22

Karnataka News Live 22 March 2026ಭಾವನ ಜೊತೆ ಸರಸ - ಬುದ್ಧಿ ಹೇಳಿದ ಗಂಡನಿಗೆ ಬೆಂಕಿ ಹಚ್ಚಿ ಕೊಂದ ಮೂರು ಮಕ್ಕಳ ತಾಯಿ

extramarital affair murder:ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿದ್ದ ತನ್ನ ಗಂಡನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ಅದನ್ನು ಕೊಲೆ ಎಂದು ಬಿಂಬಿಸಿದಂತಹ ಘಟನೆಯೊಂದು ತಮಿಳುನಾಡಿನ ಸೇಲಂ ಸಮೀಪದ ಕಲ್ಲಕುರಿಚಿ ಎಂಬಲ್ಲಿ ನಡೆದಿದೆ.

Read Full Story
09:36 PM (IST) Mar 22

Karnataka News Live 22 March 2026Anchor Suma - 'ಸುಮಾ ಗಂಡ' ಅನ್ನೋದು ಇಷ್ಟವಿಲ್ಲ - 'ಸುಮಾ ಬಿಟ್ಟ ಗಂಡ' ಅನ್ನಿಸಿಕೊಳ್ಳಬೇಡ ಎಂದಿದ್ಯಾಕೆ ಗೆಳೆಯ!

ಆ್ಯಂಕರ್ ಸುಮಾ ತೆಲುಗು ಚಿತ್ರರಂಗಕ್ಕೆ ಬರುವ ಮುನ್ನವೇ ರಾಜೀವ್ ಕನಕಾಲ ಕುಟುಂಬಕ್ಕೆ ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರಿತ್ತು. ರಾಜೀವ್ ಜೊತೆ ಮದುವೆಯಾದ ನಂತರ ಸುಮಾ ಅವರಿಗೂ ಉತ್ತಮ ಮನ್ನಣೆ ಸಿಕ್ಕಿತು.

Read Full Story
07:06 PM (IST) Mar 22

Karnataka News Live 22 March 2026ಯಕ್ಷದ್ರುವರ ಧ್ವನಿಯಲ್ಲಿ 'ಬನ' ಚಿತ್ರದ ಮೊದಲ 'ನಾಗ' ಹಾಡಿಗೆ ಮನಸೋತ ತುಳುನಾಡು

ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ 'ನಾಗ 'ಹಾಡು 'ಜಿಡೆ ನಾಗೆ' ಬಿಡುಗಡೆಗೊಂಡಿದ್ದು ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ.

Read Full Story
06:44 PM (IST) Mar 22

Karnataka News Live 22 March 2026ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್‌ ಗೆಲುವಿಗೆ ಶ್ರೀರಕ್ಷೆ - ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ

ಎಚ್.ವೈ. ಮೇಟಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಅವರು ನಡೆದು ಬಂದ ದಾರಿ, ಕಾರ್ಯಕರ್ತರಿಗೆ ಕೊಡುತ್ತಿದ್ದ ಗೌರವದಿಂದಾಗಿ ಕಾಂಗ್ರೆಸ್ ಗೆಲುವು ಖಚಿತ ಎಂದು ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.

Read Full Story
06:15 PM (IST) Mar 22

Karnataka News Live 22 March 2026ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಅಪ್ರಾಪ್ತ ಬಾಲಕಿ ಕೊಲೆ ಕೇಸಿನ ಆರೋಪಿ ಶಬೀಲ್ ರಾಜಸ್ಥಾನದಲ್ಲಿ ಅರೆಸ್ಟ್!

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ, ಭಾವಿ ಪತ್ನಿಯ ಮೇಲೆ ಅನುಮಾನಗೊಂಡ ಶಬೀಲ್ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯನ್ನು ಪಾಳುಬಿದ್ದ ಮನೆಗೆ ಕರೆಸಿ ಕತ್ತು ಸೀಳಿ ಹತ್ಯೆಗೈದು ರಾಜಸ್ಥಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅಜ್ಮೀರ್‌ನಲ್ಲಿ ಬಂಧಿಸಿದ್ದಾರೆ.

Read Full Story
05:37 PM (IST) Mar 22

Karnataka News Live 22 March 2026ರೈತರಿಗೆ ಬೇಸಿಗೆಯಲ್ಲೂ 7 ಗಂಟೆ 3 ಫೇಸ್ ವಿದ್ಯುತ್ - ಸಚಿವ ಕೆ.ಜೆ.ಜಾರ್ಜ್

ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ದಿನವಹಿ ಏಳು ಗಂಟೆಗಳ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದನ್ನು ಬೇಸಿಗೆ ಅವಧಿಯಲ್ಲೂ ಮುಂದುವರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

Read Full Story
05:21 PM (IST) Mar 22

Karnataka News Live 22 March 2026ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ - ಕೇಂದ್ರ ಸಚಿವ ವಿ.ಸೋಮಣ್ಣ ವಿಶ್ವಾಸ

ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story
04:50 PM (IST) Mar 22

Karnataka News Live 22 March 2026ಎಲ್ಲರೂ ಒಟ್ಟಾಗಿ ಬಾಳಬೇಕು, ಯಾವುದೇ ಧರ್ಮ ದ್ವೇಷ ಬೋಧಿಸುವುದಿಲ್ಲ - ಸಚಿವ ಆರ್.ಬಿ.ತಿಮ್ಮಾಪುರ

ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧಿಸುವುದಿಲ್ಲ, ಎಲ್ಲ ಧರ್ಮಗಳೂ ಪ್ರೀತಿ, ಮಾನವೀಯತೆ ಬೋಧಿಸುತ್ತವೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

Read Full Story
04:48 PM (IST) Mar 22

Karnataka News Live 22 March 2026ರವಿಚಂದ್ರನ್​ ರೀತಿ ಉಪ್ಪಿನಕಾಯಿ ಬಾಟ್ಲಿ ತೋರಿಸಿದ್ರೆ ಸೆರಗು ಸರ್ಸೋ ಸಮಸ್ಯೆನೇ ಆಗ್ತಿರಲಿಲ್ಲ- ಜಯಮಾಲಾ

ನಟ ಪ್ರೇಮ್ ಅವರ 'ಸೆರಗು ಸರ್ಸೆ' ಹಾಡಿನ ಡಬಲ್ ಮೀನಿಂಗ್ ಸಾಹಿತ್ಯದ ವಿವಾದದ ಕುರಿತು ಹಿರಿಯ ನಟಿ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ. ರವಿಚಂದ್ರನ್ ಅವರ ಹಳೆಯ ಹಾಡನ್ನು ಉಲ್ಲೇಖಿಸಿ, ಪ್ರೇಮ್ ಅವರ ಹಾಡಿನಲ್ಲಿ ಆದ ತಪ್ಪೇನೆಂದು ವಿವರಿಸಿದ್ದಾರೆ.

Read Full Story
04:40 PM (IST) Mar 22

Karnataka News Live 22 March 2026Love Psychology - ಹುಡುಗರಾ? ಹುಡುಗಿಯರಾ? ಮೊದಲು ಪ್ರೀತಿಯಲ್ಲಿ ಬೀಳೋದು ಯಾರು ಗೊತ್ತಾ?

ಮಹಿಳೆಯರು ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ಹಲವರು ನಂಬುತ್ತಾರೆ. ಅವರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಸಂಬಂಧವನ್ನು ಉಳಿಸಿಕೊಳ್ಳಲು ಹೆಚ್ಚು ಶ್ರಮಿಸುತ್ತಾರೆ ಎಂದು ಹೇಳಲಾಗುತ್ತದೆ.

Read Full Story
02:54 PM (IST) Mar 22

Karnataka News Live 22 March 2026ಫ್ಯಾನ್ 10, ಕೋಲ್ಡ್ ವಾಟರ್ 12 ರೂ, ಚಾರ್ಜಿಂಗ್ ಫ್ರಿ, ಬೆಂಗಳೂರಿನ ಪ್ರಿಮಿಯಂ ಆಟೋ ವೈರಲ್

ಫ್ಯಾನ್ 10, ಕೋಲ್ಡ್ ವಾಟರ್ 12 ರೂ, ಚಾರ್ಜಿಂಗ್ ಫ್ರಿ, ಬೆಂಗಳೂರಿನ ಪ್ರಿಮಿಯಂ ಆಟೋ ವೈರಲ್, ಬೆಂಗಳೂರಲ್ಲಿ ಹಲವರು ಆಟೋ ಪ್ರಯಾಣ ನೆಚ್ಚಿಕೊಂಡಿದ್ದಾರೆ. ಹಲವು ಬಾರಿ ಅನಿವಾರ್ಯ. ಪ್ರಯಾಣದ ಜೊತೆ ಪ್ರಿಮಿಯಂ ಸೇವೆ ನೀಡೋ ಆಟೋ ಭಾರಿ ಸದ್ದು ಮಾಡುತ್ತಿದೆ.

Read Full Story
02:32 PM (IST) Mar 22

Karnataka News Live 22 March 2026ಡಿಕೆಶಿ ಪರ ಪ್ರಣವಾನಂದ ಸ್ವಾಮೀಜಿ ಬ್ಯಾಟಿಂಗ್, ಸಿಎಂ ಸಿದ್ದರಾಮಯ್ಯರ ಮೇಲೆ ಶ್ರೀಗಳು ಅಸಮಾಧಾನಗೊಂಡಿದ್ದು ಏಕೆ?

ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕಾಂಗ್ರೆಸ್‌ಗಾಗಿ ದುಡಿದ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Read Full Story
01:56 PM (IST) Mar 22

Karnataka News Live 22 March 2026ಮದ್ವೆಯಾಗಿ 3 ದಿನ ಆದ್ರೂ ಫಸ್ಟ್​ ನೈಟ್​ಗೆ ಬಿಡಲೇ ಇಲ್ಲ, ಅದ್ಕೇ... Bigg Boss ವಿನಯ್​ ಗೌಡ ಓಪನ್​ ಮಾತು

ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ತಮ್ಮ ಪತ್ನಿ ಅಕ್ಷತಾ ಜೊತೆಗಿನ ಸಂದರ್ಶನವೊಂದರಲ್ಲಿ ತಮ್ಮ ಮೊದಲ ರಾತ್ರಿ ಮೂರು ದಿನಗಳ ಕಾಲ ವಿಳಂಬವಾದ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ನಂತರ ತಮಗೆ ಸಿಗುತ್ತಿರುವ ಸಿನಿಮಾ ಹಾಗೂ ವೆಬ್ ಸೀರೀಸ್ ಆಫರ್‌ಗಳ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Read Full Story
01:33 PM (IST) Mar 22

Karnataka News Live 22 March 2026Bank Holiday Alert - ಬ್ಯಾಂಕ್ ಗ್ರಾಹಕರ ಗಮನಕ್ಕೆ - ಮುಂದಿನ ವಾರ ಸತತ 4 ದಿನ ಬ್ಯಾಂಕ್ ರಜೆ; ಈಗಲೇ ಪ್ಲಾನ್ ಮಾಡಿಕೊಳ್ಳಿ!

ಮುಂದಿನ ವಾರ, ಮಾರ್ಚ್ 23 ರಿಂದ 29ರ ನಡುವೆ, ಹಬ್ಬಗಳು ಮತ್ತು ವಾರದ ರಜೆಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಕ್ಲೋಸ್. ಶ್ರೀ ರಾಮ ನವಮಿ, ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆಗಳು ಇದರಲ್ಲಿ ಸೇರಿವೆ. ಆದಾಗ್ಯೂ, ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯ

Read Full Story
12:44 PM (IST) Mar 22

Karnataka News Live 22 March 2026'ನನ್ನ ಫೋಟೋ ಇರುವ ಫ್ಲೆಕ್ಸ್ ಹಾಕಬೇಡಿ' ; ಅಭಿಮಾನಿಗಳಿಗೆ ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ಮನವಿ

ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆಯಾದ್ಯಂತ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರು ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದಿದ್ದಾರೆ.

Read Full Story
12:25 PM (IST) Mar 22

Karnataka News Live 22 March 2026ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್

ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್, ಟೂರ್ನಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ ಬಾಕಿ ಅಷ್ಟರಲ್ಲೇ ಆರ್‌ಸಿಬಿ ಫ್ರಾಂಚೈಸಿ ಮಾರಾಟದಲ್ಲಿ ಕೆಲ ಅಚ್ಚರಿ ಬೆಳವಣಿಗೆ ನಡೆದಿದೆ.

Read Full Story
12:13 PM (IST) Mar 22

Karnataka News Live 22 March 2026ವಿಜಯನಗರ - ಚೆನ್ನೈ ವ್ಯಕ್ತಿಗೆ ಕಡಿಮೆ ಬೆಲೆಗೆ ಚಿನ್ನದ ಆಮಿಷ; 30 ಲಕ್ಷ ರೂಪಾಯಿ ವಂಚಿಸಿದ್ದ ನಕಲಿ ಬಂಗಾರ ವಂಚಕರು ಅರೆಸ್ಟ್

ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕೂಡ್ಲಿಗಿ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್. ಘಟನೆ ನಡೆದ ಒಂದು ವಾರದಲ್ಲಿಯೇ ಆರೋಪಿಗಳನ್ನು ಬಂಧಿಸಿ, ಅವರಿಂದ 29.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಖಾನಾಹೊಸಳ್ಳಿ ಪೊಲೀಸರು ಯಶಸ್ವಿ

Read Full Story
12:11 PM (IST) Mar 22

Karnataka News Live 22 March 2026ರಾಮಲಲ್ಲಾನ ಭೇಟಿ ಮಾಡಿದ ಆಂಜನೇಯ - ಅಯೋಧ್ಯೆಗೆ ಬಂದ ಜರ್ಮನ್ ಬಾಲಕನ ವೀಡಿಯೋ ಭಾರಿ ವೈರಲ್

German boy in Ayodhya Ram Mandir: ಭಾರತೀಯರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿರುವ ಹಿಂದೂಗಳು ಕೂಡ ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅದೇ ರೀತಿ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆಂದು ಬಂದ ಪುಟ್ಟ ಬಾಲಕನೋರ್ವನ ವೀಡಿಯೋ ಸಖತ್ ವೈರಲ್ ಆಗಿದೆ.

Read Full Story
11:59 AM (IST) Mar 22

Karnataka News Live 22 March 2026ಉಪಚುನಾವಣೆಗೆ ಕುಟುಂಬದ ಕುಡಿಗಳಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್, ಮುಸ್ಲಿಂ ನಾಯಕರಿಗೆ ಹಿನ್ನಡೆ

ಉಪಚುನಾವಣೆಗೆ ಕುಟುಂಬದ ಕುಡಿಗಳಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್, ಮುಸ್ಲಿಂ ನಾಯಕರಿಗೆ ಹಿನ್ನಡೆ, ಬಾಗಲಕೋಟೆಯಲ್ಲಿ ಉಮೇಶಿ ಮೇಟಿಗೆ ಟಿಕೆಟ್ ನೀಡಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಮಲ್ಲಿಕಾರ್ಜುನಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

Read Full Story