MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮದ್ವೆಯಾಗಿ 3 ದಿನ ಆದ್ರೂ ಫಸ್ಟ್​ ನೈಟ್​ಗೆ ಬಿಡಲೇ ಇಲ್ಲ, ಅದ್ಕೇ... Bigg Boss ವಿನಯ್​ ಗೌಡ ಓಪನ್​ ಮಾತು

ಮದ್ವೆಯಾಗಿ 3 ದಿನ ಆದ್ರೂ ಫಸ್ಟ್​ ನೈಟ್​ಗೆ ಬಿಡಲೇ ಇಲ್ಲ, ಅದ್ಕೇ... Bigg Boss ವಿನಯ್​ ಗೌಡ ಓಪನ್​ ಮಾತು

ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ತಮ್ಮ ಪತ್ನಿ ಅಕ್ಷತಾ ಜೊತೆಗಿನ ಸಂದರ್ಶನವೊಂದರಲ್ಲಿ ತಮ್ಮ ಮೊದಲ ರಾತ್ರಿ ಮೂರು ದಿನಗಳ ಕಾಲ ವಿಳಂಬವಾದ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ನಂತರ ತಮಗೆ ಸಿಗುತ್ತಿರುವ ಸಿನಿಮಾ ಹಾಗೂ ವೆಬ್ ಸೀರೀಸ್ ಆಫರ್‌ಗಳ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Mar 22 2026, 01:56 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ
Image Credit : Instagram

ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ

ಬಿಗ್​ಬಾಸ್​​ 10ರ ಖ್ಯಾತಿಯ ವಿನಯ್​ ಗೌಡ ಬಿಗ್​ಬಾಸ್​ನಿಂದ ಬಂದ ಮೇಲೆಯೂ ಸಕತ್​ ಡಿಮಾಂಡ್​ ಕುದುರಿಸಿಕೊಂಡಿದ್ದಾರೆ. ಬಿಗ್​ಬಾಸ್​ನಲ್ಲಿ ಸದಾ ಜಗಳದಿಂದಲೇ ಫೇಮಸ್​ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್​ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೇ ರನ್ನರ್​ ಅಪ್​ ಆಗಿ ಮಿಂಚಿದರು.

26
ಫಸ್ಟ್​ ನೈಟ್​ ಬಗ್ಗೆ
Image Credit : Boss TV Instagram

ಫಸ್ಟ್​ ನೈಟ್​ ಬಗ್ಗೆ

ಇದೀಗ ಅವರು ತಮ್ಮ ಬದುಕಿನ ಹಲವು ವಿಷಯಗಳ ಬಗ್ಗೆ ಬಾಸ್​​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಈ ಷೋಗೆ ಅವರ ಪತ್ನಿ ಅಕ್ಷತಾ ಗೌಡ ಕೂಡ ಹಾಜರಾಗಿದ್ದರು. ಪ್ರೀತಿಸಿ ಮದುವೆಯಾಗಿದೆ ಈ ಜೋಡಿ. ಈ ಸಮಯದಲ್ಲಿ ತಮ್ಮ ಮದುವೆ ಮತ್ತು ಫಸ್ಟ್​ ನೈಟ್​ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ ವಿನಯ್​ ಗೌಡ.

Related Articles

Related image1
ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ: ಒದ್ದು ಓಡಿಸಿ ಟ್ರೀಟ್​ಮೆಂಟ್​ ಕೊಡ್ಬೇಕು: Bigg Boss ವಿನಯ್‌ ಗೌಡ ಕಿಡಿ
Related image2
BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?
36
ಮೂರು ದಿನವಾದ್ರೂ...
Image Credit : vinay gowda instagram

ಮೂರು ದಿನವಾದ್ರೂ...

ಮದುವೆಯಾಗಿ ಮೂರು ದಿನ ಆದ್ರೂ ಫಸ್ಟ್​ ನೈಟ್​ ಮಾಡಲು ಕೊಟ್ಟೇ ಇರಲಿಲ್ಲ. ಆ ಶಾಸ್ತ್ರ, ಈ ಶಾಸ್ತ್ರ ಎಂದರು. ನಾನು ಯಾವಾಗ ಈ ಶಾಸ್ತ್ರ ಎಲ್ಲಾ ಮುಗಿಯತ್ತೆ ಎಂದು ಕಾಯ್ತಿದ್ದೆ. ಕೊನೆಗೂ ಮೂರನೆಯ ದಿನ ಯಾವುದೋ ಒಂದು ಮುಹೂರ್ತ ಫಿಕ್ಸ್​ ಮಾಡಿದ್ರು. ಹೂವಿನ ಅಲಂಕಾರ ಎಲ್ಲಾ ಮಾಡಿದ್ರು. ಮೊದಲೇ ಮೂರು ದಿನ ಆಗಿತ್ತು. ಆ ಹೂವಿನ ಅಲಂಕಾರ, ಮುಹೂರ್ತ ಯಾರಿಗೆ ಬೇಕಿತ್ತು ಎಂದು ತಮಾಷೆಯಾಗಿ ಅಂದಿನ ದಿನ ಮೆಲುಕು ಹಾಕಿದ್ದಾರೆ ವಿನಯ್​ ಗೌಡ.

46
ಕೊನೆಗೂ ಹೆಂಡ್ತಿ ನೋಡಲು ಕೊಟ್ಟರು
Image Credit : our own

ಕೊನೆಗೂ ಹೆಂಡ್ತಿ ನೋಡಲು ಕೊಟ್ಟರು

ಮೂರು ದಿನ ಹೆಂಡತಿಯನ್ನು ನೋಡಲೂ ಬಿಟ್ಟಿರಲಿಲ್ಲ. ಎಲ್ಲರೂ ನನ್ನ ಹಿಂದೆ ಮುಂದೆ ಇರುತ್ತಿದ್ದರು. ಕೊನೆಗೂ ಮೂರನೆಯ ದಿನ ಬಿಟ್ಟರಪ್ಪ. ಸೋನು ನಿಗಮ್​ ಅವರ ಹಾಡನ್ನು ಹಾಕಿ ನಮ್ಮ ಕೆಲಸ ಮುಗಿಸಿದ್ವಿ. ಸರಿಯಾಗಿ ಒಂದು ವರ್ಷಕ್ಕೆ ಮಗ ಹುಟ್ಟಿದ. ನಾನು, ಪತ್ನಿ ಮತ್ತು ಮಗ ಇದಿಷ್ಟೇ ನನ್ನ ಪ್ರಪಂಚ ಎಂದಿದ್ದಾರೆ ವಿನಯ್​ ಗೌಡ.

56
ಸಿನಿಮಾಗಳ ಆಫರ್​
Image Credit : our own

ಸಿನಿಮಾಗಳ ಆಫರ್​

ಇನ್ನು, ವಿನಯ್ ಗೌಡ (Bigg Boss Vinay Gowda) ಅವರಿಗೆ ಬಿಗ್​ಬಾಸ್​ನಿಂದ ಬಂದ ಮೇಲೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್​ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು.

66
ವೆಬ್​ ಸೀರೀಸ್​
Image Credit : Instagram

ವೆಬ್​ ಸೀರೀಸ್​

ಕೆಲ ದಿನಗಳ ಹಿಂದೆ ಇವರು ಇದೇ ಬಿಗ್​ಬಾಸ್​​ನ ಮೋಕ್ಷಿತಾ ಪೈ (Mokshita Pai) ಜೊತೆ ಮಾಡುತ್ತಿರುವ ವೆಬ್​ಸೀರಿಸ್ ಕುರಿತು ಮಾತನಾಡಿದ್ದರು. ಧೃತಿ ಕ್ರಿಯೇಷನ್ಸ್​ನಲ್ಲಿ ನಿರ್ಮಾಣವಾಗುತ್ತಿರುವ ವೆಬ್​ ಸೀರಿಸ್​ ಇದಾಗಿದೆ. ಈಗಾಗಲೇ ಇವರ ಚಿಕ್ಕ ಕ್ಲಿಪ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ನಟರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಮದುವೆ
Latest Videos
Recommended Stories
Recommended image1
Amruthadhaare: ನೀನು ಗಂಡಸೇ ಅಲ್ಲ- ಭೂಮಿಕಾ ಬೆಂಕಿ; ಮಲ್ಲಿ ಮದುವೆ ನಿಲ್ಲಿಸಲು ಹೋಗೇ ಬಿಟ್ಟಳು
Recommended image2
ಧಾರಾವಾಹಿಗೆ ಗುಡ್ ಬೈ ಹೇಳಿ ಹೊಸ ಬ್ಯುಸಿನೆಸ್ ಶುರು ಮಾಡಿದ ‘ಅಮೃತಧಾರೆ’ ನಟಿ
Recommended image3
‘Lakshmi Nivasa’ ರೋಚಕ ತಿರುವು… ವಿಶ್ವನ ಹೀರೋ ಮಾಡಿ, ಜಯಂತ್-ಸಿದ್ಧೇಗೌಡ್ರನ್ನ ಸೈಡ್ ಮಾಡಿದ್ರಾ ಡೈರೆಕ್ಟರ್?
Related Stories
Recommended image1
ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ: ಒದ್ದು ಓಡಿಸಿ ಟ್ರೀಟ್​ಮೆಂಟ್​ ಕೊಡ್ಬೇಕು: Bigg Boss ವಿನಯ್‌ ಗೌಡ ಕಿಡಿ
Recommended image2
BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved