German boy in Ayodhya Ram Mandir: ಭಾರತೀಯರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿರುವ ಹಿಂದೂಗಳು ಕೂಡ ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅದೇ ರೀತಿ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆಂದು ಬಂದ ಪುಟ್ಟ ಬಾಲಕನೋರ್ವನ ವೀಡಿಯೋ ಸಖತ್ ವೈರಲ್ ಆಗಿದೆ.

ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ಜರ್ಮನ್ ಬಾಲಕ

ಅಯೋಧ್ಯೆ: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣವಾದಾಗಿನಿಂದಲೂ ಲಕ್ಷಾಂತರ ಜನ ಭಕ್ತರು ಪ್ರತಿದಿನವೂ ಅಯೋಧ್ಯೆಗೆ ಭೇಟಿ ನೀಡುತ್ತಲೇ ಇದ್ದಾರೆ. ಭಾರತೀಯರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿರುವ ಹಿಂದೂಗಳು ಕೂಡ ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅದೇ ರೀತಿ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆಂದು ಬಂದ ಪುಟ್ಟ ಬಾಲಕನೋರ್ವನ ವೀಡಿಯೋ ಸಖತ್ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಜರ್ಮನಿ ಮೂಲದ ಬಾಲಕನೋರ್ವ ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದು ಪುನೀತನಾಗಿದ್ದಾನೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನದ ಬಳಿಕ ಆ ಬಾಲಕ ಮಾತನಾಡಿದ ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಬಾಲಕ ಬಹಳ ಮುದ್ದಾಗಿ ಮಾತನಾಡಿದ್ದಾನೆ. ನಾನು ಜರ್ಮನಿಯಿಂದ ಬಂದಿದ್ದೇನೆ ನನ್ನ ಹೆಸರು ಆಂಜನೇಯ ಎಂದು ಆ ಬಾಲಕ ಹೇಳಿದ್ದಾನೆ.

ಇದನ್ನೂ ಓದಿ: ಏರ್ ಇಂಡಿಯಾ ಎಡವಟ್ಟು: 7 ಗಂಟೆ ಜರ್ನಿ ಬಳಿಕ ವಾಪಸ್ ಬಂದ 300 ಪ್ರಯಾಣಿಕರಿದ್ದ ವಿಮಾನ

ಈ ದೇಗುಲಕ್ಕೆ ಬಂದ ನಂತರ ನಿಮಗೆ ಹೇಗನಿಸಿತು ಎಂದು ಆ ಬಾಲಕನ ಬಳಿ ಮಾಧ್ಯಮದವರು ಪ್ರಶ್ನೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಬಾಲಕ ಇದು ನಿಜವಾಗಿಯೂ ತುಂಬಾ ಚೆನ್ನಾಗಿದೆ. ಆದರೆ ವಿಚಾರ ಏನು ಅಂದ್ರೆ ಇಲ್ಲಿ ಸಿಕ್ಕಾಬಟ್ಟೆ ಬಿಸಿಲು ಸೆಖೆ ಇದೆ. ಭಾರತ ಹಾಗೆ ಇದೆ. ಆದ್ರೂ ಈ ಬಿಸಿಲಿನ ಸಮಯವನ್ನು ನನಗೆ ಮ್ಯಾನೇಜ್ ಮಾಡಬಹುದು. ದೇವಸ್ಥಾನ ಮಾತ್ರ ನಿಜವಾಗಿಯೂ ತುಂಬಾ ಚೆನ್ನಾಗಿದೆ. ಇದು ನಿಜವಾಗಿಯೂ ಒಂದು ಒಳ್ಳೆಯ ಅನುಭವ ಎಂದು ಬಾಲಕ ವಿವರಿಸಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಇರಾನ್ ಇಸ್ರೇಲ್ ಯುದ್ಧದಲ್ಲಿ ಭಾಗಿ ಹಿನ್ನೆಲೆ: ಅಮೆರಿಕಾಕ್ಕೆ ಶಸ್ತ್ರಾಸ್ತ್ರ ರಫ್ತಿಗೆ ಅನುಮೋದನೆ ನಿರಾಕರಿಸಿದ ಸ್ವಿಟ್ಜರ್ಲೆಂಡ್

View post on Instagram