11:11 PM (IST) Mar 17

Karnataka News Live 17 March 2026ನೈಸ್ ರಸ್ತೆ ವಿವಿಧ ವಿವಾದ - ದಶಕಗಳ ಗೊಂದಲಕ್ಕೆ ಶೀಘ್ರವೇ ತೆರೆ, ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಭರವಸೆ

ಬೆಂಗಳೂರು-ಮೈಸೂರು ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ಆರೋಪಗಳ ಕುರಿತು ಸಚಿವ ಸಂಪುಟ ಉಪಸಮಿತಿ ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಶಾಸಕ ಎಸ್.ಟಿ. ಸೋಮಶೇಖರ್ ಅವರು ರೈತರಿಗೆ ಪರಿಹಾರ ವಿಳಂಬ, ಅಧಿಕ ಟೋಲ್ ಸಂಗ್ರಹ ಮತ್ತು ಕಿರಿದಾದ ಸೇತುವೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Read Full Story
10:55 PM (IST) Mar 17

Karnataka News Live 17 March 2026ಕಲಬುರಗಿಗೆ ಆರ್ಥಿಕ ಹಿನ್ನಡೆ, ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ! ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿತ!

ವರದಿ: ಶೇಷಮೂರ್ತಿ ಅವಧಾನಿ

2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯವು ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿ, ರಾಜ್ಯದಲ್ಲೇ ಕೊನೆಯ ಸ್ಥಾನ ಪಡೆದಿದೆ. ಕೃಷಿ ವೈಫಲ್ಯ, ಉದ್ದಿಮೆಗಳ ತೀವ್ರ ಕೊರತೆ ಜಿಲ್ಲೆಯು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದೆ.

Read Full Story
10:35 PM (IST) Mar 17

Karnataka News Live 17 March 2026ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರ ಕಾರಣ - ಸಚಿವ ಕೆ.ಜೆ.ಜಾರ್ಜ್ ಆಕ್ರೋಶ

ಸಿಲಿಂಡರ್ ಅಭಾವದ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ಸರಿಯಲ್ಲ. ಮುನ್ನೆಚ್ಚರಿಕೆ ವಹಿಸಿ ಸಿದ್ಧತೆ ಮಾಡಿಕೊಳ್ಳದ ಕಾರಣವೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಆಕ್ರೋಶ ವ್ಯಕ್ತಪಡಿಸಿದರು.

Read Full Story
10:34 PM (IST) Mar 17

Karnataka News Live 17 March 2026ಬೆಳಗಾವಿ - ಮಳೆ ನಿಲ್ಲಲು ಕಾಯುತ್ತಿದ್ದವರಿಗೆ ಕಾದಿತ್ತು ಮೃತ್ಯು - ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್

Woman dies in wall collapse: ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಅಕಾಲಿಕ ಮಳೆಗೆ ಪಾಳು ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Read Full Story
10:19 PM (IST) Mar 17

Karnataka News Live 17 March 2026ಚಿಕ್ಕಮಗಳೂರು - ರೈಲಿನಲ್ಲಿ ಪ್ರಯಾಣಿಕರು ಮರೆತ ಚಿನ್ನದ ಬ್ಯಾಗ್, ತೆರೆದಾಗ ಪೊಲೀಸರಿಗೆ ಕಾದಿತ್ತು ಅಚ್ಚರಿ!

ತರೀಕೆರೆ ನಿವಾಸಿ ರೂಪಾ ಅವರು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ತಮ್ಮ ಚಿನ್ನಾಭರಣ ಹಾಗೂ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಮರೆತಿದ್ದರು. ಬೀರೂರು ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯ ತ್ವರಿತ ಕಾರ್ಯಚರಣೆಯಿಂದಾಗಿ, ಬ್ಯಾಗನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
Read Full Story
10:08 PM (IST) Mar 17

Karnataka News Live 17 March 2026ಬಿಗ್‌ಬಾಸ್‌ ಲವ್‌ಬರ್ಡ್ಸ್‌ ಸೂರಜ್‌-ರಾಶಿಕಾ ಬ್ರೇಕಪ್‌? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ!

ಬಿಗ್‌ಬಾಸ್-12ರ ಜೋಡಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರೂ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಿಗೂಢ ಸ್ಟೋರಿಗಳು ಈ ವದಂತಿಗೆ ಕಾರಣವಾಗಿದ್ದು, ಇವರ ಪ್ರೀತಿಯಲ್ಲಿ ಬಿರುಕು ಮೂಡಿದೆಯೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Read Full Story
09:34 PM (IST) Mar 17

Karnataka News Live 17 March 2026ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ - ರಾಜ್ಯ ಸರ್ಕಾರದ ವಿರುದ್ಧ ಧನಂಜಯ ಸರ್ಜಿ ವಾಗ್ದಾಳಿ

ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೂ ಔಷಧಿ ಲಭ್ಯವಿಲ್ಲದಿರುವುದು ದುರದೃಷ್ಟಕರ," ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story
09:11 PM (IST) Mar 17

Karnataka News Live 17 March 2026ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿಯಾದ ಮಂಗಳೂರಿನ 15200 ಅಭ್ಯರ್ಥಿಗಳಲ್ಲಿ ಕೇವಲ 8.45%ಗೆ ಮಾತ್ರ ಜಾಬ್!

ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ (PMKVY) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, ತರಬೇತಿ ಪಡೆದ ಸಾವಿರಾರು ಯುವಕರಲ್ಲಿ ಕೇವಲ 8% ಕ್ಕಿಂತ ಕಡಿಮೆ ಮಂದಿ ಉದ್ಯೋಗ ಪಡೆದಿದ್ದು, ಇದು ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Read Full Story
09:08 PM (IST) Mar 17

Karnataka News Live 17 March 2026ಚಿಕ್ಕಮಗಳೂರು - 50 ಅಡಿ ಆಳದ ಕಂದಕಕ್ಕೆ ಬಿದ್ದ ‌ಕಾರು - ಅನುಮಾನ ಹುಟ್ಟಿಸಿದ ಆಕ್ಸಿಡೆಂಟ್

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ, ಸ್ಥಳದಲ್ಲಿ ಯಾರೂ ಇಲ್ಲದಿರುವುದು ಮತ್ತು ಪೊಲೀಸರಿಗೆ ಮಾಹಿತಿ ನೀಡದಿರುವುದು ಘಟನೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

Read Full Story
08:54 PM (IST) Mar 17

Karnataka News Live 17 March 2026'ಹುಲಿ ಹುಲಿ..' ಅಂದ್ಕೊಂಡು ಇಬ್ಬರು ಮಹಿಳೆಯರ ಜೊತೆ ಟ್ರಿಪಲ್‌ ರೈಡ್‌ ಮಾಡಿದ್ದ ರೀಲ್ಸ್‌ ಮಂಜಣ್ಣ, ಭರ್ಜರಿ ಫೈನ್‌ ಹಾಕಿದ ಪೊಲೀಸ್‌!

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗಲು, ಇಬ್ಬರು ಯುವತಿಯರೊಂದಿಗೆ ತ್ರಿಪಲ್ ರೈಡಿಂಗ್ ಮಾಡಿ ರೀಲ್ಸ್ ಚಿತ್ರೀಕರಿಸಿದ ದೊಡ್ಡಬಳ್ಳಾಪುರದ ವ್ಯಕ್ತಿಗೆ ಸಂಚಾರಿ ಪೊಲೀಸರು ರೂ. ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೆ, ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Read Full Story
08:45 PM (IST) Mar 17

Karnataka News Live 17 March 2026ಶಾಸಕ ಬಸವರಾಜ ರಾಯರೆಡ್ಡಿ ಹಿಡಿದ ಕೆಲಸ ಬಿಡದ ಛಲಗಾರ - ಸಿಎಂ ಸಿದ್ದರಾಮಯ್ಯ

ನನ್ನ ಕ್ಷೇತ್ರದಲ್ಲೂ ನಿಮ್ಮ ರಾಯರೆಡ್ಡಿಯಷ್ಟು ನಾನ್ ಕೆಲಸ ಮಾಡಿಲ್ಲ, ಅಷ್ಟು ಅಭಿವೃದ್ಧಿ ಕೆಲಸಗಾರ ನಿಮ್ಮ ಶಾಸಕ ಬಸವರಾಜ ರಾಯರೆಡ್ಡಿ. ಹಿಡಿದ ಕೆಲಸ ಬಿಡದ ಛಲಗಾರ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

Read Full Story
08:36 PM (IST) Mar 17

Karnataka News Live 17 March 2026ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪನೆ - ಚಲುವರಾಯಸ್ವಾಮಿ

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Read Full Story
08:26 PM (IST) Mar 17

Karnataka News Live 17 March 2026ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದ ಸ್ಥಿತಿ - ಸಚಿವ ಕೃಷ್ಣ ಬೈರೇಗೌಡ ಬೇಸರ

ಇದ್ದ ಜಮೀನೆಲ್ಲ ಕೊಟ್ಟು ಈಗ ಸ್ಮಶಾನಕ್ಕೆ ಜಾಗ ಸಿಗದೆ ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Read Full Story
08:18 PM (IST) Mar 17

Karnataka News Live 17 March 2026ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಸುರಕ್ಷತಾ ವರದಿ - ಕೆಐಎಯಲ್ಲಿ ಲೇಸರ್ ಕಡಿಮೆ, ಸುರಕ್ಷತೆಯಲ್ಲಿಯೂ ಮುಂಚೂಣಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಇತರ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಅತಿ ಕಡಿಮೆ ಲೇಸರ್ ಹಸ್ತಕ್ಷೇಪ ಪ್ರಕರಣಗಳನ್ನು ದಾಖಲಿಸಿ ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿದೆ. ದೆಹಲಿ, ಚೆನ್ನೈನಂತಹ ನಿಲ್ದಾಣಗಳಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೆ, ಕೆಐಎಯಲ್ಲಿನ ಕಡಿಮೆ ಸಂಖ್ಯೆಯು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ಪರಿಣಾಮಕಾರಿತ್ವವನ್ನು ತೋರಿಸುತ್ತದೆ.
Read Full Story
08:13 PM (IST) Mar 17

Karnataka News Live 17 March 2026'ಬಿಯರ್ ಬೆಲೆ ಏರಿಸಿದ್ದಕ್ಕೆ ಮಕ್ಕಳು ಗಾಂಜಾ ಮೊರೆ ಹೋಗ್ತಿದ್ದಾರೆ' - ಅಬಕಾರಿ ಬೆಲೆ ಏರಿಕೆಗೆ ಹೆಚ್. ವಿಶ್ವನಾಥ್ ಆಕ್ರೋಶ!

ವಿಧಾನಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಚರ್ಚೆಯಲ್ಲಿ, ಹೆಚ್. ವಿಶ್ವನಾಥ್ ಅವರು ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ, ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ತೀವ್ರವಾಗಿ ಟೀಕಿಸಿದರು. ಜಾಹೀರಾತು ವೆಚ್ಚ, ಬಿಯರ್ ಬೆಲೆ ಏರಿಕೆ, ಮತ್ತು ಕುರಿಗಾಹಿಗಳ ಅನುದಾನದ ದುರ್ಬಳಕೆಯನ್ನು ಅವರು ಪ್ರಶ್ನಿಸಿದ್ದಾರೆ. 

Read Full Story
07:32 PM (IST) Mar 17

Karnataka News Live 17 March 2026Heart Health - ಮಹಿಳೆಯರಲ್ಲಿ ಹೃದಯಾಘಾತ ಲಕ್ಷಣಗಳು ವಿಭಿನ್ನ - ಇಲ್ಲಿದೆ ತಪ್ಪದೇ ತಿಳಿಯಬೇಕಾದ ಮಾಹಿತಿ

ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಮತ್ತು ಕಾರಣಗಳು ಬೇರೆಯಾಗಿರುತ್ತವೆ. ಇದೇ ಕಾರಣಕ್ಕೆ ರೋಗ ಪತ್ತೆ ಮಾಡುವುದು ಕೂಡ ತಡವಾಗಬಹುದು. ಈ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಕೆಲವು ಮುಖ್ಯ ವಿಚಾರಗಳು ಇಲ್ಲಿವೆ.

Read Full Story
07:30 PM (IST) Mar 17

Karnataka News Live 17 March 2026ಕಾರವಾರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಗೋವಾ ಆಕರ್ಷಣೆ, ಮೋಜು ಮಸ್ತಿಗೆ ರಸ್ತೆ ಮಧ್ಯೆಯೇ ಜೀವ ಬಿಡ್ತಿರೋ ಮಕ್ಕಳು!

ಗೋವಾ ರಾಜ್ಯದ ಸಾಮೀಪ್ಯದಿಂದಾಗಿ ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮೋಜು-ಮಸ್ತಿಯ ಜೀವನಶೈಲಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಕಾರಣದಿಂದಾಗಿ ಕಳೆದ ಒಂದು ವರ್ಷದಲ್ಲಿ ಹಲವು ರಸ್ತೆ ಅಪಘಾತಗಳು ಸಂಭವಿಸಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗಳಿಂದ ಕಾಲೇಜು ಆಡಳಿತದ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
Read Full Story
07:21 PM (IST) Mar 17

Karnataka News Live 17 March 2026Summer Hair Fall - ಬೇಸಿಗೆಯಲ್ಲಿ ಕೂದಲು ಉದುರುತ್ತಿದೆಯಾ? ಟೆನ್ಶನ್ ಬೇಡ! ಇಲ್ಲಿವೆ 6 ಸಿಂಪಲ್ ಟಿಪ್ಸ್

ಬೇಸಿಗೆ ಬಂತೆಂದರೆ ಬರೀ ಬಿಸಿಲಲ್ಲ, ನಮ್ಮ ಕೂದಲು ಕೂಡಾ ಸುಸ್ತಾಗುತ್ತದೆ. ಬೆವರು, ಧೂಳು ಮತ್ತು ಸೂರ್ಯನ ಕಿರಣಗಳಿಂದ ಕೂದಲು ಉದುರುವುದು ಡಬಲ್ ಆಗುತ್ತದೆ. ಇದಕ್ಕೆ ಹಳೆಯ ಕಾಲದ ಅಜ್ಜಿ ಮದ್ದು ಮಾತ್ರ ಸಾಲದು, Gen Z ಲೈಫ್‌ಸ್ಟೈಲ್‌ಗೆ ಹೊಂದುವ ಸ್ಮಾರ್ಟ್ ಟಿಪ್ಸ್ ಬೇಕು.

Read Full Story
07:18 PM (IST) Mar 17

Karnataka News Live 17 March 2026ರೌಡಿಗಳ ಮೇಲೆ ಕಲ್ಲು ಹಾಕುವಾಗ ನಡುಗಿ ಹೋದೆ - Karna Serial ಫೈಟಿಂಗ್​ ಅನುಭವ ಹಂಚಿಕೊಂಡ Annayya ರಾಣಿ

'ಕರ್ಣ' ಸೀರಿಯಲ್‌ನ ಮಹಿಳಾ ದಿನದ ವಿಶೇಷ ಸಂಚಿಕೆಯಲ್ಲಿನ ಫೈಟಿಂಗ್ ದೃಶ್ಯದ ಬಗ್ಗೆ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟಿ ರಾಘವಿ ಅರಳಗುಂಡಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಭಯಪಟ್ಟಿದ್ದು, ನಟ ಕಿರಣ್ ರಾಜ್ ಅವರನ್ನು ಶ್ಲಾಘಿಸಿದ್ದು, ಸಹ-ನಟಿಯರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

Read Full Story
07:05 PM (IST) Mar 17

Karnataka News Live 17 March 2026ನಕಲಿ ಹಕ್ಕು ಪತ್ರ ನೀಡಿದವರ ವಿರುದ್ಧ ಕಠಿಣ ಕ್ರಮ - ಸಚಿವ ಜಮೀರ್‌ ಅಹ್ಮಮದ್‌ ಖಾನ್‌

ಸಚಿವ ಜಮೀರ್‌ ಅಹ್ಮಮದ್‌ ಖಾನ್‌, ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಹೆಚ್ಚು ಅನುದಾನ ಏಕೆ ತೆಗೆದುಕೊಳ್ಳಲಿಲ್ಲ? ಸರ್ಕಾರ ಸ್ಲಂ ಬೋರ್ಡ್‌ಗೆ 50 ಕೋಟಿ ರು. ನೀಡಿದೆ. ರಾಜ್ಯದಲ್ಲಿ 2,800 ಕೊಳಗೇರಿಗಳಿವೆ. ಬೆಂಗಳೂರಿನಲ್ಲಿ 480 ಕೊಳಗೇರಿಗಳಿವೆ.

Read Full Story