Bengaluru: ಬಾರದ ಲೋಕಕ್ಕೆ ಪಯಣ ಬೆಳೆಸಿದ ಮಹಿಳಾ ಅಧಿಕಾರಿ ಎಸ್‌ಪಿ ಲಾವಣ್ಯ ಎನ್.
ಬೆಸ್ಕಾಂ ವಿಜಿಲೆನ್ಸ್ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದ 2010ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿ ಲಾವಣ್ಯ ಎನ್. ಅವರು ಕೊಲೊನ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. 39 ವರ್ಷದ ಲಾವಣ್ಯ ಅವರು ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಲಾವಣ್ಯ ಎನ್. ನಿಧನ
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 2.30ರ ವೇಳೆಗೆ ನಿಧನರಾಗಿದ್ದಾರೆ. ಲಾವಣ್ಯ ಎನ್. ಮೃತ ಮಹಿಳಾ ಅಧಿಕಾರಿ. ಲಾವಣ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
2010ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿ
ಬೆಸ್ಕಾಂ ವಿಜಿಲೆನ್ಸ್ ನಲ್ಲಿ ಎಸ್‌ಪಿಯಾಗಿ ಲಾವಣ್ಯ ಅವರು ಸೇವೆ ಸಲ್ಲಿಸುತ್ತಿದ್ದರು. ಲಾವಣ್ಯ ಅವರು ಕೊಲೊನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಲಾವಣ್ಯ ಅವರು 2010ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿಯಾಗಿದ್ದರು. ಮಂಡ್ಯ- ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ, ಬಳ್ಳಾರಿ- ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ, ಬೆಂಗಳೂರಿನಲ್ಲಿ ಇಂಟಲಿಜೆನ್ಸ್, ಬೆಂಗಳೂರಿನಲ್ಲಿ ಡಿಸಿಆರ್‌ಇ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ.2023 ರಿಂದ ಬೆಸ್ಕಾಂ ಎಸ್ಪಿಯಾಗಿದ್ದರು.
ಇದನ್ನೂ ಓದಿ: ಈ ಹೆಂಗಸ್ರು ಯಾಕೆ ಹೀಗೆ ಅಂತಾನೆ ಅರ್ಥ ಆಗಲ್ಲ: Nanda Gokula ಪ್ರಿಯಾ ಭಾರಿ ಅಸಮಾಧಾನ
ಆರೋಗ್ಯ ವಿಚಾರಿಸಿದ್ರು ಡಿಜಿ ಸಲೀಂ
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಲಾವಣ್ಯ ಅವರ ವಿದ್ಯಾರಣ್ಯಪುರ ನಿವಾಸಕ್ಕೆ ಡಿಜಿ ಸಲೀಂ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು. ಮೃತ ಲಾವಣ್ಯ ಅವರಿಗೆ 39 ವಯಸ್ಸು ಆಗಿತ್ತು. ಲಾವಣ್ಯ N ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರಿನವರು. ಲಾವಣ್ಯ ಅವರು ಪತಿ, 10 ವರ್ಷದ ಮಗ,3 ವರ್ಷದ ಹೆಣ್ಣು ಮಗು ಅಗಲಿದ್ದಾರೆ.
ಇದನ್ನೂ ಓದಿ: ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

