10:48 PM (IST) May 10

Karnataka News Live 10 May 2026 ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.

Read Full Story
09:41 PM (IST) May 10

Karnataka News Live 10 May 2026 ಈಜಲು ಹೋದ ಕೊಪ್ಪಳದ ಯುವಕ ನೀರಿನಲ್ಲಿ ಮುಳುಗಿ ಸಾವು, ಮತೃದೇಹಕ್ಕಾಗಿ ಹುಡುಕಾಟ

17ರ ಹರೆಯದ ಯುವಕ ಬೋದೂರು ಗ್ರಾಮದಲ್ಲಿ ಈಜಾಡಲು ತೆರಳಿದ್ದಾನೆ. 6 ಮಂದಿ ಯುವಕರ ಗುಂಪು ಈಜಾಡುತ್ತಿದ್ದ ವೇಳೆ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.

Read Full Story
09:23 PM (IST) May 10

Karnataka News Live 10 May 2026 ಅಂಜನಾದ್ರಿ ದೇವಾಲಯಕ್ಕೆ ದಾನವಾದ ಆಭರಣಗಳು ಸಂಪೂರ್ಣ ಚಿನ್ನವಲ್ಲ - ಎಸಿ ಮಾಲಗಿತ್ತಿ ಹೇಳೋದೇನು?

ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ.

Read Full Story
08:32 PM (IST) May 10

Karnataka News Live 10 May 2026 25 ವರ್ಷಗಳಲ್ಲಾಗದ ಅಭಿವೃದ್ಧಿ 3 ವರ್ಷದಲ್ಲಿ ಮಾಡಿರುವೆ - ಎಚ್‌ಡಿಕೆ ವಿರುದ್ಧ ಇಕ್ಬಾಲ್ ಹುಸೇನ್ ವಾಗ್ದಾಳಿ

ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Read Full Story
07:53 PM (IST) May 10

Karnataka News Live 10 May 2026 ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ - ವಾಟಾಳ್ ನಾಗರಾಜ್

ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Read Full Story
07:42 PM (IST) May 10

Karnataka News Live 10 May 2026 ಅವರಿಗೆ ಮಗಳಾಗಿ, ಇವರಿಗೆ ತಾಯಿಯಾಗಿರಲು ನಾನು ನಿಜಕ್ಕೂ ಅದೃಷ್ಟವಂತೆ; ರಾಧಿಕಾ ಪಂಡಿತ್ ಪೋಸ್ಟ್ ವೈರಲ್!

ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಡಲ ತೀರದ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ರಾಧಿಕಾ ತಮ್ಮ ತಾಯಿ ಮತ್ತು ಮುದ್ದಾದ ಮಕ್ಕಳ ಜೊತೆ ಕಾಲ ಕಳೆಯುತ್ತಿರುವುದು ಕಂಡುಬಂದಿದೆ. ಆದರೆ ಈ ಪೋಸ್ಟ್ ಯಾಕೆ ಅಷ್ಟೊಂದು ವೈರಲ್ ಆಗಿದೆ ಗೊತ್ತಾ? ಈ ಸ್ಟೋರಿ ನೋಡಿ..

Read Full Story
07:16 PM (IST) May 10

Karnataka News Live 10 May 2026 ಒಳ ಮೀಸಲಾತಿಯಿಂದ ಯಾರಿಗೂ ಅನ್ಯಾಯ ಆಗಲ್ಲ - ಸಚಿವ ಕೆ.ಎಚ್‌.ಮುನಿಯಪ್ಪ

ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್‌ ದಾಸ್‌ ವರದಿಯನ್ನು ಕಾಂಗ್ರೆಸ್‌ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

Read Full Story
06:06 PM (IST) May 10

Karnataka News Live 10 May 2026 ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ

ಮಣಿಪಾಲದ ಎಂಐಟಿಯು ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನಿಂದ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಿದೆ. ಸಂಸ್ಥೆಯು 2023ರಿಂದ ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿಯಲ್ಲಿ ಬಿಟೆಕ್ ಕೋರ್ಸ್ ಅನ್ನು ಸಹ ಆರಂಭಿಸಿದೆ.
Read Full Story
05:38 PM (IST) May 10

Karnataka News Live 10 May 2026 ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?

ಮಂಗಳೂರಿನ ಕದ್ರಿಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಹೊಸ ಉದ್ಯಾನವನ ನಿರ್ಮಾಣವಾಗಲಿದೆ. ಹಾಲಿ ಉದ್ಯಾನವನದ ಎದುರು ನಿರ್ಮಾಣವಾಗಲಿರುವ ಈ ಪಾರ್ಕ್‌ನಲ್ಲಿ ವಾಕಿಂಗ್ ಪಥ, ಸಣ್ಣ ವೇದಿಕೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿರಲಿವೆ. ಅಲ್ಲದೆ, ಹಳೆಯ ಪಾರ್ಕ್‌ನ ನೀರಿನ ಕೊರತೆ ನೀಗಿಸಲು ಎಸ್‌ಟಿಪಿ ನೀರು ಮರುಬಳಕೆ ಯೋಜನೆ ರೂಪಿಸಲಾಗಿದೆ.
Read Full Story
04:36 PM (IST) May 10

Karnataka News Live 10 May 2026 ಮಂಗಳೂರು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಹಿಡಿದ ರೈಲ್ವೆ ಪೊಲೀಸರೇ ಶಾಕ್ ಆದ್ರು!

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನನ್ನು ರೈಲ್ವೆ ಪೊಲೀಸರು ವಿಚಾರಿಸಿದಾಗ, ಆತ ಕೇರಳದ ಕುಖ್ಯಾತ ದರೋಡೆಕೋರ ಎಂದು ತಿಳಿದುಬಂದಿದೆ. ಬಂಧಿತ ಕಾಸರಗೋಡು ಮೂಲದ ಆಶಿಫ್‌ನಿಂದ ಸುಮಾರು ₹13.06 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೇರಳದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
Read Full Story
03:55 PM (IST) May 10

Karnataka News Live 10 May 2026 ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!

ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ದುರ್ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಭಕ್ತರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
Read Full Story
03:43 PM (IST) May 10

Karnataka News Live 10 May 2026 ಪ್ರತಿ ದಿನ 25 ಕಿ.ಮಿ ಇವಿ ಯೂನಿಸೈಕಲ್‌ನಲ್ಲಿ ಬೆಂಗಳೂರಿಗನ ಪ್ರಯಾಣ, ಪೊಲೀಸ್ ತಡೆದಿದ್ದೇಕೆ?

ಬೆಂಗಳೂರಿನ ಯವಕ ಪ್ರತಿ ದಿನ ಮನೆಯಿಂದ ಕಚೇರಿಗೆ ಎಲೆಕ್ಟ್ರಿಕ್ ಯೂನಿಸೈಕಲ್‌ನಲ್ಲಿ ಪ್ರಯಾಣ ಮಾಡುತ್ತಾನೆ. ಟ್ರಾಫಿಕ್ ನಡುವೆ ಸರಾಗವಾಗಿ ಸಾಗಬಹುದು, ಪಾರ್ಕಿಂಗ್ ಸಮಸ್ಯೆ ಇಲ್ಲ, ದಿಢೀರ್ ಟ್ರಾಫಿಕ್ ಪೊಲೀಸರು ತಡೆದು ಮಾಡಿದ್ದೇನು?

Read Full Story
02:22 PM (IST) May 10

Karnataka News Live 10 May 2026 ಬಿಟ್ ಕಾಯಿನ್ - ಇಷ್ಟೆಲ್ಲಾ ಆದ್ರೂ ಬುದ್ಧಿ ಕಲಿಯದ ಶ್ರೀಕಿ, ಇಡಿ ಬಂಧನದ ಹಿಂದಿನ ದಿನ ಅಮೆರಿಕ ಕಂಪನಿಯ ಸರ್ವರ್ ಹ್ಯಾಕ್

ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದೆ. ಸರ್ಕಾರದ ವೆಬ್‌ಸೈಟ್‌ ಹ್ಯಾಕ್ ಮಾಡಿ, ಹಣವನ್ನು ಬಿಟ್‌ಕಾಯಿನ್ ಮೂಲಕ ವರ್ಗಾಯಿಸುತ್ತಿದ್ದ ಈ ಜಾಲವನ್ನು ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
Read Full Story
01:59 PM (IST) May 10

Karnataka News Live 10 May 2026 ಅಪ್ಪು 'ಜೇಮ್ಸ್' ಪ್ರೊಡ್ಯೂಸರ್ ಭರ್ಜರಿ ಕಂಬ್ಯಾಕ್; ಭಾರೀ ಮೊತ್ತಕ್ಕೆ 'ಪೆದ್ದಿ' ಡಿಸ್ಟ್ರಿಬ್ಯೂಷನ್ ರೈಟ್ಸ್!

ನಗುಮುಖದ ಒಡೆಯ ಪುನೀತ್ ರಾಜ್‌ಕುಮಾರ್ ನಟಿಸಿದ ಕಟ್ಟ ಕಡೆಯ ಸಿನಿಮಾ ಜೇಮ್ಸ್. 50 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 151 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು. ಅಪ್ಪು ನಮ್ಮನ್ನ ಅಗಲಿದ ನಂತ್ರ ತೆರೆಕಂಡ ಸಿನಿಮಾ ಇದಾಗಿತ್ತು.

Read Full Story
12:48 PM (IST) May 10

Karnataka News Live 10 May 2026 ರಾಯಚೂರು - ಲಿಂಗಸುಗೂರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳಿಂದಲೇ ತಡರಾತ್ರಿಯವರೆಗೆ ಗುಂಡು-ತುಂಡು ಪಾರ್ಟಿ, ಭಾರೀ ಆಕ್ರೋಶ

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಿಡಬ್ಲ್ಯುಡಿ ಕಚೇರಿಯಲ್ಲಿ, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ತಡರಾತ್ರಿ ಪಾರ್ಟಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Read Full Story
12:40 PM (IST) May 10

Karnataka News Live 10 May 2026 'ಗೋಲ್ಡನ್ ಮೂವಿಸ್'ನಿಂದ ಸಿಹಿ ಸುದ್ದಿ; ಕೇವಲ ನಿರ್ಮಾಪಕಿಯಲ್ಲ, ಈಗ ಗಾಯಕಿಯೂ ಆದ ಶಿಲ್ಪಾ ಗಣೇಶ್!

ಗಣೇಶ್ ಅವರ ಸಿನಿಮಾಗಳಲ್ಲಿ ಸಂಗೀತಕ್ಕೆ ಯಾವಾಗಲೂ ಒಂದು ವಿಶೇಷ ತೂಕವಿರುತ್ತದೆ. ಈಗ ತಮ್ಮದೇ ಮನೆಯ ನಿರ್ಮಾಣದ ಚಿತ್ರಕ್ಕೆ ಪತ್ನಿಯೇ ಹಾಡಿರುವುದು ಈ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 'ಪಿಕ್ಚರ್' ಚಿತ್ರದ ಈ ಹಾಡು ಈಗ ವೈರಲ್ ಆಗಿದೆ.

Read Full Story
12:11 PM (IST) May 10

Karnataka News Live 10 May 2026 ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪಾದಯಾತ್ರೆಗೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದಿದ್ದು, ಬಳಿಕ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಪಾದಯಾತ್ರಿಗಳ ಸುರಕ್ಷತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.
Read Full Story
11:55 AM (IST) May 10

Karnataka News Live 10 May 2026 JDS - ಮೈಚಳಿ ಬಿಟ್ಟು ಪಕ್ಷ ಸಂಘಟಿಸಿ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ - ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ

ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುಖಂಡರು ವೈಮನಸ್ಸು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದಿಟ್ಟು, ಮುಂಬರುವ ಚುನಾವಣೆಗಳಲ್ಲಿ ಯುವಶಕ್ತಿಯ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.

Read Full Story
11:19 AM (IST) May 10

Karnataka News Live 10 May 2026 ಮೈಸೂರು ಕನ್ನಡಿ ಗೋಡೆ - ಮೂತ್ರ ವಿಸರ್ಜನೆ ತಡೆ ಯೋಜನೆ ವಿಫಲ! ಕ್ಯಾರೇ ಅನ್ನದೆ ಕನ್ನಡಿ ಮುಂದೆ ನಿಂತೇ ಮೂತ್ರ ಮಾಡಿದ!

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನಕ್ಕೇರಲು ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿ ಗೋಡೆಗಳನ್ನು ಅಳವಡಿಸಿತ್ತು. ಆದರೆ, ಸಬರ್ಬ್ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಈ ಕನ್ನಡಿಯ ಎದುರೇ ಮೂತ್ರ ವಿಸರ್ಜಿಸುವ ಮೂಲಕ ಈ ಯೋಜನೆಗೆ ಹಿನ್ನಡೆ ಉಂಟುಮಾಡಿದ್ದಾರೆ.
Read Full Story
11:09 AM (IST) May 10

Karnataka News Live 10 May 2026 ಬೆಂಗಳೂರಿನ ನೆಲದಲ್ಲಿಂದು ಕೇಸರಿ ಸೂರ್ಯ ಉದಯ, ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ!

ಪಂಚರಾಜ್ಯ ಚುನಾವಣೆಯಲ್ಲಿನ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡು, ದಕ್ಷಿಣ ಭಾರತದಲ್ಲಿ ಪಕ್ಷದ ಬೆಳವಣಿಗೆಯನ್ನು ಶ್ಲಾಘಿಸಿದರು 

Read Full Story