MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.

1 Min read
Author : Chethan Kumar
Published : May 10 2026, 10:48 PM IST
Share this Photo Gallery
  • FB
  • TW
  • Linkdin
  • Whatsapp
15
ಕಾಮಾಕ್ಷಿಪಾಳ್ಯ ನಿವಾಸ ತಲುಪಿದ ಮೃತದೇಹ
Image Credit : Asianet News

ಕಾಮಾಕ್ಷಿಪಾಳ್ಯ ನಿವಾಸ ತಲುಪಿದ ಮೃತದೇಹ

ತಾಯಿ ಜೊತೆ ದೇವರ ದರ್ಶನಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ತಾಯಿ ಮುಂದೆ ಮಗನ ಎತ್ತಿಕೊಂಡು ಹೋದ ಚಿರತೆ ಕೊಂದು ಹಾಕಿದೆ. ಸುರೇಶ್ ಹಾಗೂ ಪವಿತ್ರ ದಂಪತಿಯ ಪುತ್ರ ಹರ್ಷಿತ್ ಗೌಡ ದುರಂತ ಅಂತ್ಯ ಕಂಡ ಬಾಲಕನ. ಇದೀಗ ಬಾಲಕನ ಮೃತದೇಹ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸ ತಲುಪಿದೆ.

Add Asianetnews Kannada as a Preferred SourcegooglePreferred
25
ದೇವರ ದರ್ಶನಕ್ಕೆ ಹೋದ ಬಾಲಕ ಮೃತ
Image Credit : Asianet News

ದೇವರ ದರ್ಶನಕ್ಕೆ ಹೋದ ಬಾಲಕ ಮೃತ

ಇಂದು ಬೆಳಗ್ಗೆ 7.30 ಸುಮಾರಿಗೆ ಚಿರತೆ ದಾಳಿ ನಡೆಸಿದೆ. ಘಟನೆ ಕುರಿತು ಮೃತ ಬಾಲಕನ ತಂದೆ ಸುರೇಶ್ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರ ದರ್ಶನಕ್ಕೆ ಹೋಗಿದ್ದ ಮಗ ಶವವಾಗಿ ಬಂದಿದ್ದಾನೆ. ನನ್ನ ಮಗನ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ತಂದೆ ಸುರೇಶ್ ಆರೋಪಿಸಿದ್ದಾರೆ.

Related Articles

Related image1
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!
Related image2
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!
35
ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ
Image Credit : Asianet News

ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ

ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಹೀಗಾಗಿದೆ. ನಾನು ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಿಚಾರಿಸುವವರೆಗೂ ನಮ್ಮ ಮನೆಯವರಿಗೆ ಮಾಹಿತಿ ನೀಡಿಲ್ಲ. ನಾನು ಮಧ್ಯಾಹ್ನ 2.30ಕ್ಕೆ ಹೋಗಿ ವಿಚಾರಿಸಿದಾಗ ಮೃತದೇಹ ತಂದು ಕೊಟ್ಟರು. ಇನ್ನು ಮುಂದೆಯಾದ್ರೂ ಅರಣ್ಯ ಇಲಾಖೆಯವರು ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಿ ಎಂದು ಸುರೇಶ್ ಮನವಿ ಮಾಡಿದ್ದಾರೆ.

45
ಕಣ್ಣ ಮುಂದೆ ನನ್ನ ಮಗುವನ್ನು ಚಿರತೆ ಕೊಂದು ಹಾಕಿತು
Image Credit : Asianet News

ಕಣ್ಣ ಮುಂದೆ ನನ್ನ ಮಗುವನ್ನು ಚಿರತೆ ಕೊಂದು ಹಾಕಿತು

ನನ್ನ ಕಣ್ಣ ಮುಂದೆಯೇ ನನ್ನ ಮಗುವನ್ನು ಚಿರತೆ ಎತ್ತಿಕೊಂಡು ಹೊಯ್ತು. ನಾವು ಬೆದರಿಸಿದ್ರು ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ. ನನ್ನ ಮಗ ನನ್ನ ಕಣ್ಮುಂದೆಯೇ ಸತ್ತು ಹೋಗಿದ್ದಾನೆ ಎಂದು ಹರ್ಷಿತ್ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.

55
ಹುಲಿ ಚಿರತೆ ಇದೆ ಗೊತ್ತಿದ್ದರೆ ಹೋಗ್ತಾನೆ ಇರಲಿಲ್ಲ
Image Credit : Asianet News

ಹುಲಿ ಚಿರತೆ ಇದೆ ಗೊತ್ತಿದ್ದರೆ ಹೋಗ್ತಾನೆ ಇರಲಿಲ್ಲ

ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸರಿಯಾದ ಭದ್ರತೆ ಕೈಗೊಂಡಿಲ್ಲ. ಹುಲಿ, ಚಿರತೆ ಇದೆ ಅಂತ ಒಂದು ಎಚ್ಚರಿಕೆ ಬೋರ್ಡ್ ಕೂಡ ಹಾಕಿಲ್ಲ. ನಮಗೆ ಮೊದಲೇ ಗೊತ್ತಿದ್ರೆ ಅಲ್ಲಿ ಹೋಗ್ತಾನೆ ಇರಲಿಲ್ಲ ಎಂದು ಮೃತ ಬಾಲಕನ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.

ಹುಲಿ ಚಿರತೆ ಇದೆ ಗೊತ್ತಿದ್ದರೆ ಹೋಗ್ತಾನೆ ಇರಲಿಲ್ಲ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಿರತೆ
ಚಾಮರಾಜನಗರ
ಕರ್ನಾಟಕ ಸುದ್ದಿ
ಅರಣ್ಯ

Latest Videos
Recommended Stories
Recommended image1
ಮನೆ ತಲುಪಲು 2 ಕಿ.ಮಿ ಬಾಕಿ ಇರುವಾಗಲೇ ಮದುವೆಗೆ ತೆರಳಿದ್ದ ಬಸ್ ಯಲ್ಲಾಪುರದ ಬಳಿ ಅಪಘಾತ
Recommended image2
ರಾಜ್ಯ ಪೊಲೀಸ್ ಇಲಾಖೆ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳ ವರ್ಗಾವಣೆ! ನಿಮ್ಮ ಠಾಣೆಗೆ ಬಂದವರಾರು ಪಟ್ಟಿನೋಡಿ!
Recommended image3
ಹಾವು ಹಿಡಿಯಲು ಬಂದ ಉರಗ ತಜ್ಞ ರಜಾಕ್ ಶಾ ಹೊಟ್ಟೆಗೆ ಕಚ್ಚಿದ 15 ಅಡಿ ಉದ್ದದ ಹೆಬ್ಬಾವು; ಮುಂದೇನಾಯ್ತು ನೋಡಿ!
Related Stories
Recommended image1
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!
Recommended image2
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved