10:37 PM (IST) Jun 10

Karnataka News Live 10 June 2026 ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ಬೆಳ್ಳಿ ಕತ್ತಿ ಗಿಫ್ಟ್‌ ಮಾಡಿದ ಬಿಗ್‌ಬಾಸ್‌ ಅಶ್ವಿನಿ ಗೌಡ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ 60ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ನಟಿ ಹಾಗೂ ಬಿಗ್‌ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ಅವರು ನಾರಾಯಣ ಗೌಡರಿಗೆ ಬೆಳ್ಳಿ ಕತ್ತಿಯನ್ನು ಉಡುಗೊರೆಯಾಗಿ ನೀಡಿ ಶುಭ ಕೋರಿದರು.
Read Full Story
09:52 PM (IST) Jun 10

Karnataka News Live 10 June 2026 ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆರಡು ವರ್ಷ ಅಸ್ಥಿರತೆ ಕಾಡಲಿದೆ - ಸಂಸದ ಬೊಮ್ಮಾಯಿ

ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

Read Full Story
09:49 PM (IST) Jun 10

Karnataka News Live 10 June 2026 ಡಿಕೆಶಿ ಹೇಳಿಕೆ ಬಳಿಕ ನಟ ದರ್ಶನ್ ಫ್ಯಾನ್ಸ್ ಪರಿಸ್ಥಿತಿ ಹೇಗಾಗಿದೆ ಗೊತ್ತಾ? 'ಹೀಗಾಗಿದೆ' ಅಂತ ಹೇಳಬಹುದಾ..?!

ಜಸ್ಟ್ ಎರಡು ವರ್ಷಗಳ ಹಿಂದೆ ದರ್ಶನ್ ಅಂದ್ರೆ ಎಲ್ಲರೂ ಮುತ್ತಿಕ್ತಾ ಇದ್ರು. ಚಿತ್ರರಂಗ ದಾಸನನ್ನ ಹೊತ್ತು ಮೆರೆಸ್ತಾ ಇತ್ತು. ರಾಜಕಾರಣಿಗಳು, ಉದ್ಯಮಿಗಳು ದಾಸನ ಹಿಂದೆ ಮುಂದೆ ಸುತ್ತತಾ ಇದ್ರು. ಆಗ ದರ್ಶನ್ ಥೇಟ್ ಚಕ್ರವರ್ತಿಯಂತೆ ಮೆರೀತಾ ಇದ್ರು… ಆದ್ರೀಗ ಎಲ್ಲವೂ ಉಲ್ಟಾ ಆಗಿದೆ.. 

Read Full Story
09:21 PM (IST) Jun 10

Karnataka News Live 10 June 2026 ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಯತ್ನ - ಎಚ್‌ಡಿಕೆ ಆರೋಪ

ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯನ್ನೇ ಹಾಕಿರಲಿಲ್ಲ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

Read Full Story
08:10 PM (IST) Jun 10

Karnataka News Live 10 June 2026 ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ ಬೆನ್ನಲ್ಲೇ ಏರ್ಪೋರ್ಟ್‌ನಿಂದ ವಿಶೇಷ ಕೆಕೆಆರ್‌ಟಿಸಿ ಬಸ್ ಸಂಚಾರ ಆರಂಭ

ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆ ಪುನರಾರಂಭಗೊಂಡ ಹಿನ್ನೆಲೆಯಲ್ಲಿ, ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ KKRTCಯು ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್, ವಿಮಾನದ ಸಮಯಕ್ಕೆ ಅನುಗುಣವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಅನುಕೂಲ ಮಾಡಿಕೊಡಲಿದೆ.
Read Full Story
07:20 PM (IST) Jun 10

Karnataka News Live 10 June 2026 ಬೀದರ್ ವಿಮಾನ ಸಂಚಾರಕ್ಕೆ ಸಂಕಷ್ಟದ ಭೀತಿ, ಸಿಎಂ ಡಿಕೆಶಿಗೆ ಪತ್ರ ಬರೆದ ಸಚಿವ ಈಶ್ವರ್ ಖಂಡ್ರೆ

ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

Read Full Story
06:58 PM (IST) Jun 10

Karnataka News Live 10 June 2026 ಬರೀ 16 ವರ್ಷಕ್ಕೆ ಇನ್ನೊಂದು ಜಲಾಶಯಕ್ಕೆ ಬಲಿಯಾದ ಅದ್ಬುತ ಹಿರೇಭಾಸ್ಕರ ಡ್ಯಾಮ್‌, ವರ್ಷಕ್ಕೆ ಒಮ್ಮೆ ಮಾತ್ರ ಕಾಣುವ ಸೋಜಿಗ!

ಶಿವಮೊಗ್ಗದ ಹಿರೇಭಾಸ್ಕರ ಆಣೆಕಟ್ಟು ಬೇಸಿಗೆಯಲ್ಲಿ ಮಾತ್ರ ಕಾಣಸಿಗುವ ಐತಿಹಾಸಿಕ ವಿಸ್ಮಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿತವಾದ ಇದು, 1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಅದರ ಹಿನ್ನೀರಿನಲ್ಲಿ ಮುಳುಗಡೆಯಾಯಿತು. 

Read Full Story
06:37 PM (IST) Jun 10

Karnataka News Live 10 June 2026 ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿ ವಿಜಯಲಕ್ಷ್ಮಿ ದರ್ಶನ್​ - ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 'ಜಲಗಾರ ಯೂನಿವರ್ಸಿಟಿ' ಎಂಬ ನಕಲಿ ಖಾತೆಯ ವ್ಯಕ್ತಿ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story
06:35 PM (IST) Jun 10

Karnataka News Live 10 June 2026 ದಕ್ಷಿಣ ಭಾರತದ ರೈಲ್ವೆ ಅಭಿವೃದ್ಧಿಗೆ 448 ಕೋಟಿ, ಪುಣೆ-ಬೆಂಗಳೂರು-ಕನ್ಯಾಕುಮಾರಿ ಹಳಿ ಮೇಲ್ದರ್ಜೆಗೆ 162.57 ಕೋಟಿ!

ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.  

Read Full Story
06:19 PM (IST) Jun 10

Karnataka News Live 10 June 2026 ಶಕ್ತಿ ಯೋಜನೆಯಡಿ BMTC ಕಂಡಕ್ಟರ್‌ನಿಂದ ಯುಪಿಐ ಟಿಕೆಟ್ ವ್ಯವಸ್ಥೆ ದುರ್ಬಳಕೆ?; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್!

ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ವೊಬ್ಬರು ಸತತವಾಗಿ ಟಿಕೆಟ್‌ಗಳನ್ನು ಪ್ರಿಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು 'ಶಕ್ತಿ ಯೋಜನೆ'ಯ ದುರ್ಬಳಕೆ ಎಂಬ ಆರೋಪಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಮತ್ತು ನೆಟ್ಟಿಗರ ನಡುವೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 

Read Full Story
06:10 PM (IST) Jun 10

Karnataka News Live 10 June 2026 ಖಾಲಿ ಜಾಗ ಇದ್ರೆ ಸಾಕು, ತಿಂಗಳಿಗೆ 22 ಲಕ್ಷ ದುಡಿಯಬಹುದು - ಗೆಳೆಯನ ಬ್ಯುಸಿನೆಸ್ ಐಡಿಯಾ ಹಂಚಿಕೊಂಡ ಯುವತಿ

ಉತ್ತರ ಪ್ರದೇಶದ ಮೀರತ್‌ನ ಯುವಕ ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ಬೇಸಿಗೆಯಲ್ಲಿ ತಿಂಗಳಿಗೆ ₹22.5 ಲಕ್ಷ ಹಾಗೂ ಉಳಿದ ತಿಂಗಳುಗಳಲ್ಲಿ ₹7.5 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಈ ಸ್ಮಾರ್ಟ್ ಬ್ಯುಸಿನೆಸ್ ಮಾದರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read Full Story
05:48 PM (IST) Jun 10

Karnataka News Live 10 June 2026 'ಶಿವಪ್ಪ ಕಾಯೋ ತಂದೆ' ಎಂದು ಕೊಟ್ಟಿಯೂರು ಶಿವಾಲಯಕ್ಕೆ ಹೋದ ದರ್ಶನ್ ಫ್ಯಾನ್ಸ್‌ಗೆ ಆಗಿದ್ದೇನು?

‘ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ, ಇಲ್ಲಿಗೆ ಬರಬೇಡಿ’ ಅಂತ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಡ್ತಾ ಇದ್ದಾರೆ. ಅಷ್ಟಕ್ಕೂ ನಿಮಗ್ಯಾರು ಅಲ್ಲಿಗೆ ಹೋಗ್ಲಿಕ್ಕೆ ಹೇಳಿದ್ರು ಅಂದ್ರೆ ಇವರು ರಿಷಬ್, ದರ್ಶನ್ ರನ್ನ ನೋಡಿ ಹೋದ್ವಿ ಅಂತಾರೆ. ಎನೆಲ್ಲಾ ಪರದಾಟ ಅನುಭವಿಸಿದ್ರು ನೋಡಿ..!

Read Full Story
05:14 PM (IST) Jun 10

Karnataka News Live 10 June 2026 ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್

ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹತ್ತು ವರ್ಷಗಳ ಹಿಂದೆ ನಿಧನರಾದ ಮಾವನ ಆತ್ಮ ತನ್ನ ಮೈಮೇಲೆ ಬಂದಿದೆ ಎಂದು ಹೇಳುತ್ತಿರುವ ಸೊಸೆಯೊಬ್ಬಳು, ಮಾವನಂತೆಯೇ ಬೀಡಿ ಸೇದಲು ಆರಂಭಿಸಿದ್ದಾಳೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
04:51 PM (IST) Jun 10

Karnataka News Live 10 June 2026 ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ - ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ

ನೂತನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) 2026-27ನೇ ಹಣಕಾಸು ವರ್ಷದ ಆರಂಭದಲ್ಲೇ ದಾಖಲೆಯ ₹2,949.55 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಶೇ. 5ರ ರಿಯಾಯಿತಿ ವಿಸ್ತರಣೆ ಮತ್ತು 'ಬಿ-ಟು-ಎ' ಖಾತಾ ಯೋಜನೆ ಈ ಯಶಸ್ಸಿಗೆ ಕಾರಣವಾಗಿದ್ದು, ಪ್ರಾಧಿಕಾರವು ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
Read Full Story
04:48 PM (IST) Jun 10

Karnataka News Live 10 June 2026 AI ಯಡವಟ್ಟು; ಸಿಎಂ ವಿಜಯ್ ದೇಹಕ್ಕೆ ನಿರ್ದೇಶಕ ಭಾರತಿರಾಜಾ ಶ್ರದ್ಧಾಂಜಲಿ; ನೆಟ್ಟಿಗರಿಂದ ಫುಲ್ ಕ್ಲಾಸ್

ಎಲೋನ್ ಮಸ್ಕ್ ಅವರ 'ಗ್ರಾಕ್' (Grok) ಎಐ ಇತ್ತೀಚೆಗೆ ಮಾಡಿದ ಒಂದು ದೊಡ್ಡ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳಿನಿಂದ ಸುದ್ದಿಯನ್ನು ಅನುವಾದಿಸುವಾಗ ಎಐ ತಂತ್ರಜ್ಞಾನವು, ನಟ ವಿಜಯ್ ಅವರನ್ನು 'ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದಲ್ಲದೆ, ಅವರ ಪಾರ್ಥಿವ ಶರೀರಕ್ಕೆ ನಿರ್ದೇಶಕ ಭಾರತಿರಾಜ ಅವರು ಅಂತಿಮ ನಮನ ಸಲ್ಲಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದೆ.

Read Full Story
04:32 PM (IST) Jun 10

Karnataka News Live 10 June 2026 ಕಿಚ್ಚ ಸುದೀಪ್‌ ಮೆಚ್ಚಿದ ಅಸಲಿ ಪಚ್ಚ ಪ್ರಶಾಂತ್‌ ಹಿರೇಮಠ - ಯಾರು ಈ ಹೊಸ ಖಳನಟ?

ಪ್ರಶಾಂತ್‌ ಹಿರೇಮಠ 1989ರಿಂದ 2022ರವರೆಗೆ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು. 180ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ನಿರ್ದೇಶನ ಮಾಡಿದ್ದಾರೆ. ಮಹತ್ವದ..

Read Full Story
03:48 PM (IST) Jun 10

Karnataka News Live 10 June 2026 ವಿಶ್ವದ ಅತ್ಯುತ್ತಮ ಆಹಾರ ನಗರ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸಿಟಿ ಬೆಂಗಳೂರು, ಕನ್ನಡಿಗರು ಮೆಚ್ಚಿದ ತಿಂಡಿ ಇದೇ ನೋಡಿ!

ಪ್ರಖ್ಯಾತ 'ಟೈಮ್ ಔಟ್' ನಿಯತಕಾಲಿಕೆಯು 2026ರ ವಿಶ್ವದ ಅತ್ಯುತ್ತಮ ಆಹಾರ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರು 13ನೇ ಸ್ಥಾನ ಪಡೆದಿದೆ. ಈ ಪ್ರತಿಷ್ಠಿತ ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಇದಾಗಿದ್ದು, ಸಾಂಪ್ರದಾಯಿಕ  ಪಾಕಪದ್ಧತಿಯ ಸಮ್ಮಿಶ್ರಣಕ್ಕಾಗಿ ಈ ಮನ್ನಣೆ ಲಭಿಸಿದೆ.

Read Full Story
03:25 PM (IST) Jun 10

Karnataka News Live 10 June 2026 ಫುಟ್ಬಾಲ್ ಮುಂದೆ ಕ್ರಿಕೆಟ್ ಏನೂ ಅಲ್ಲ! T20 ವಿಶ್ವಕಪ್ ಗೆದ್ದ ಭಾರತಕ್ಕೆ ಸಿಕ್ಕಿದ್ದು ₹22 ಕೋಟಿ, ಫುಟ್ಬಾಲ್‌ನಲ್ಲಿ ಸೋತೋರಿಗೂ ಸಿಗುತ್ತೆ ₹87 ಕೋಟಿ!

2026ರ ಫಿಫಾ ವಿಶ್ವಕಪ್ ಮತ್ತು ಟಿ20 ವಿಶ್ವಕಪ್‌ಗಳ ಬಹುಮಾನದ ಹಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಫುಟ್ಬಾಲ್ ವಿಶ್ವಕಪ್‌ನಲ್ಲಿ ಸೋತ ತಂಡಕ್ಕೆ ಸಿಗುವ ಹಣವು, ಇಡೀ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತಕ್ಕೆ ಸಮನಾಗಿರುವುದು ಫುಟ್ಬಾಲ್‌ನ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ.
Read Full Story
03:17 PM (IST) Jun 10

Karnataka News Live 10 June 2026 ರೇಣುಕಾಸ್ವಾಮಿ ಕೇಸ್ - ದರ್ಶನ್ ಗ್ಯಾಂಗ್‌ನ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಗ್ಯಾಂಗ್‌ನ ಪವನ್, ರಾಘವೇಂದ್ರ, ನಂದೀಶ್, ವಿನಯ್ ಹಾಗೂ ಧನರಾಜ್ ಜಾಮೀನು ರದ್ದು ಕೋರಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Read Full Story
01:45 PM (IST) Jun 10

Karnataka News Live 10 June 2026 ಶಿವಂ ಅಸೋಸಿಯೇಟ್ಸ್ ಅಕ್ರಮ ಹಣದಲ್ಲಿ ಸನ್ನಿ ಲಿಯೋನ್‌ ಮಾತ್ರವಲ್ಲ, ಇನ್ನೂ 4 ಕನ್ನಡದ ನಟ-ನಟಿಯರಿಗೆ ಪಾಲಿದೆಯಾ?!

ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. 

Read Full Story