- Home
- Entertainment
- ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್: ಕಮೆಂಟ್ ಹಾಕಿದವರಲ್ಲಿ ಶುರುವಾಯ್ತು ನಡುಕ
ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್: ಕಮೆಂಟ್ ಹಾಕಿದವರಲ್ಲಿ ಶುರುವಾಯ್ತು ನಡುಕ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 'ಜಲಗಾರ ಯೂನಿವರ್ಸಿಟಿ' ಎಂಬ ನಕಲಿ ಖಾತೆಯ ವ್ಯಕ್ತಿ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯಲಕ್ಷ್ಮಿಗೆ ಕಿಡಿಗೇಡಿಗಳ ಕಾಟ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲಿಗೆ ಹೋದಾಗಿನಿಂದಲೂ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರಿಗೆ ಕೆಟ್ಟ ಕೆಟ್ಟ ಕಮೆಂಟ್ಸ್ಗಳ ಸುರಿಮಳೆಯಾಗುತ್ತಲೇ ಇದೆ. ಹಿಂದೆ ಕೂಡ ಇದೇ ರೀತಿ ಮಾಡಲಾಗಿತ್ತು. ಈಗಲೂ ಅಸಭ್ಯ, ಅಶ್ಲೀಲ ಎನ್ನುವಂಥ ಕಮೆಂಟ್ಸ್ ಹಾಕಿದ್ದಾರೆ ಕಿಡಿಗೇಡಿಗಳು.
ಫೇಕ್ ಅಕೌಂಟ್
ಸದ್ಯ ಒಂದು ಖಾತೆಯ ನೆಟ್ಟಿಗನಿಗೆ ನಡುಕ ಹುಟ್ಟಿಸುವ ಕೆಲಸ ಮಾಡಿದ್ದಾರೆ ವಿಜಯಲಕ್ಷ್ಮಿ, ಜಲಗಾರ ಯೂನಿವರ್ಸಿಟಿ’ ಎಂಬ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅಸಭ್ಯ ಕಮೆಂಟ್ಸ್ ಮಾಡಲಾಗಿದೆ. ನಕಲಿ ಖಾತೆಯಲ್ಲಿ ಕಮೆಂಟ್ಸ್ ಹಾಕಿದ್ರೆ ತಮ್ಮನ್ನು ಗುರುತು ಹಿಡಿಯಲು ಆಗುವುದಿಲ್ಲ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಆ ಖಾತೆ ತೆಗೆಯುವಾಗಲೂ ತಮ್ಮ ಜಾತಕ ಅಥವಾ ತಮ್ಮವರದ್ದೇ ಯಾರದ್ದೋ ಜಾತಕ ಅದರಲ್ಲಿ ಕೊಟ್ಟಿರುತ್ತಾರೆ ಎನ್ನುವುದು ಅವರಿಗೆ ಅರಿವೇ ಇರುವುದಿಲ್ಲ.
ಪೊಲೀಸರಲ್ಲಿ ದೂರು
ಇದೇ ಕಾರಣಕ್ಕೆ ವಿಜಲಕ್ಷ್ಮಿ ಅವರು ಈ ಫೇಕ್ ಅಕೌಂಟಿಗನ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ವಿಜಯಲಕ್ಷ್ಮಿ ಸಿನಿಮಾ ನೋಡಲು ಹೋದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆಕ್ಷೇಪಾರ್ಹವಾಗಿ ನಿಂದಿಸಿದ್ದಾರೆ.
ವೈಯಕ್ತಿಕ ಬದುಕು ಗುರಿ
ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ ಎಂದು ಕಮೆಂಟ್ ಮಾಡಿರೋ ಈತ, ವಿಜಯಲಕ್ಷ್ಮಿಯ ವೈಯಕ್ತಿಕ ಬದುಕನ್ನೂ ಗುರಿಯಾಗಿಸಿಕೊಂಡು ಕೆಟ್ಟ ಕಮೆಂಟ್ಸ್ ಹಾಕಿದ್ದಾನೆ. ಗಂಡ ಜೈಲಿನಲ್ಲಿ ಇದ್ದಾನೆ, ಇತ್ತ ವಿಜಯಲಕ್ಷ್ಮಿ ಕಾರಿನಲ್ಲಿ ಓಡಾಟ ಎಂದೆಲ್ಲಾ ಏನೇನೋ ಅಸಭ್ಯ ಪದಗಳ ಜೊತೆ ಕಮೆಂಟ್ ಹಾಕಿದ್ದಾನೆ.
ನಡುಕ ಹುಟ್ಟಿಸಿದ ವಿಜಯಲಕ್ಷ್ಮಿ
ಈತನಿಗೆ ಈಗ ವಿಜಯಲಕ್ಷ್ಮಿ ಅವರು ನಡುಕ ಹುಟ್ಟಿಸಿದ್ದಾರೆ. ಬೆಂಗಳೂರಿನ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ನಕಲಿ ಪ್ರೊಫೈಲ್‌ಗಳ ಹಿಂದೆ ಅಡಗಿರುವ ಅಸಲಿ ಮುಖ ಯಾರದ್ದು ಎಂದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ರಮ್ಯಾ ಘಟನೆ ನೆನಪಿಗೆ
ಇಂತಹ ಟ್ರೋಲ್ ಪೇಜ್‌ಗಳ ಐಪಿ ಅಡ್ರೆಸ್ ಟ್ರ್ಯಾಕ್ ಮಾಡಿ, ಅವರ ವಿರುದ್ಧ ಕಠಿಣ ಕಾನೂನು ಜರುಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಹಿಂದೊಮ್ಮೆ ನಟಿ ರಮ್ಯಾ ಕೂಡ ಇಂಥ ಕಮೆಂಟ್ ಹಾಕಿದವನ ಚಳಿ ಬಿಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

