MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ದಕ್ಷಿಣ ಭಾರತದ ರೈಲ್ವೆ ಅಭಿವೃದ್ಧಿಗೆ 448 ಕೋಟಿ, ಪುಣೆ-ಬೆಂಗಳೂರು-ಕನ್ಯಾಕುಮಾರಿ ಹಳಿ ಮೇಲ್ದರ್ಜೆಗೆ 162.57 ಕೋಟಿ!

ದಕ್ಷಿಣ ಭಾರತದ ರೈಲ್ವೆ ಅಭಿವೃದ್ಧಿಗೆ 448 ಕೋಟಿ, ಪುಣೆ-ಬೆಂಗಳೂರು-ಕನ್ಯಾಕುಮಾರಿ ಹಳಿ ಮೇಲ್ದರ್ಜೆಗೆ 162.57 ಕೋಟಿ!

ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.  

2 Min read
Author : Gowthami K
Published : Jun 10 2026, 06:35 PM IST
Share this Photo Gallery
  • FB
  • TW
  • Linkdin
  • Whatsapp
17
ಭಾರತೀಯ ರೈಲ್ವೆಯು 448 ಕೋಟಿ ರೂಪಾಯಿಗಳ ಯೋಜನೆ
Image Credit : Gemini

ಭಾರತೀಯ ರೈಲ್ವೆಯು 448 ಕೋಟಿ ರೂಪಾಯಿಗಳ ಯೋಜನೆ

ದಕ್ಷಿಣ ಭಾರತದ ಪ್ರಮುಖ ರೈಲ್ವೆ ಕಾರಿಡಾರ್‌ಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಮತ್ತು ರೈಲು ವಿಳಂಬದ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ದಕ್ಷಿಣ ಮಧ್ಯ ರೈಲ್ವೆ ಮತ್ತು ನೈಋತ್ಯ ರೈಲ್ವೆ ವ್ಯಾಪ್ತಿಯ ಎರಡು ಪ್ರಮುಖ ಮಾರ್ಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು (ಟ್ರಾಕ್ಷನ್ ಸಿಸ್ಟಮ್) ಆಧುನೀಕರಿಸಲು ಭಾರತೀಯ ರೈಲ್ವೆಯು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.

ದಕ್ಷಿಣ ಮಧ್ಯ ರೈಲ್ವೆಯ ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಬೆಂಗಳೂರು-ತುಮಕೂರು ವಿಭಾಗಗಳು ಈ ಯೋಜನೆಯಡಿ ನವೀಕರಣಗೊಳ್ಳಲಿವೆ. ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಕಾರ್ಯಾಚರಣೆಯಲ್ಲಿ ವಿಶ್ವಾಸಾರ್ಹತೆ ತರುವುದು ಮತ್ತು ಪ್ರಯಾಣಿಕ ಹಾಗೂ ಸರಕು ಸಾಗಣೆಗೆ ವೇಗ ನೀಡುವುದು ಈ ಹೆಜ್ಜೆಯ ಮುಖ್ಯ ಉದ್ದೇಶವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ರೈಲ್ವೆ ಇಲಾಖೆ ಅನುಮೋದಿಸಿರುವ ಬದಲಾವಣೆಗಳೇನು?
Image Credit : Gemini

ರೈಲ್ವೆ ಇಲಾಖೆ ಅನುಮೋದಿಸಿರುವ ಬದಲಾವಣೆಗಳೇನು?

ಈ ಯೋಜನೆಯ ಮೂಲಕ ಹಳೆಯ ವಿದ್ಯುತ್ ವ್ಯವಸ್ಥೆಯ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಇದು ಭವಿಷ್ಯದ ಹೆಚ್ಚುವರಿ ಸಂಚಾರದ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಲಿದೆ.

ರೈಲ್ವೆ ಸಚಿವಾಲಯವು ಎರಡೂ ಮಾರ್ಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ 1x25 kV ವಿದ್ಯುತ್ ಎಳೆತ ವ್ಯವಸ್ಥೆಯನ್ನು ಅತ್ಯಾಧುನಿಕ 2x25 kV ವ್ಯವಸ್ಥೆಗೆ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ತೋರಿಸಿದೆ. ಇಲಾಖೆಯ ಪ್ರಕಾರ, ಈ ಹೊಸ ತಂತ್ರಜ್ಞಾನವು ರೈಲುಗಳ ಸುಗಮ ಸಂಚಾರಕ್ಕೆ ಹೆಚ್ಚು ಸ್ಥಿರ ಹಾಗೂ ದಕ್ಷತೆಯಿಂದ ಕೂಡಿದ ವಿದ್ಯುತ್ ಸರಬರಾಜನ್ನು ಖಚಿತಪಡಿಸುತ್ತದೆ.

Related Articles

Related image1
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ 2028ಕ್ಕೆ ಪೂರ್ಣ: ರೈಲ್ವೆ ರಾಜ್ಯ ಸಚಿವ ಸೋಮಣ್ಣ
Related image2
ಉತ್ತರ ಕರ್ನಾಟಕ ಪ್ರವಾಸೋದ್ಯಮ: ಹಿಡಕಲ್ ಡ್ಯಾಂ ಇನ್ನು ಮುಂದೆ ಪ್ರವಾಸಿ ತಾಣ, ಉದ್ಯಾನ, ಮಕ್ಕಳ ರೈಲು, ಬೋಟಿಂಗ್, ತಾರಾಲಯ
37
1. ಬೆಂಗಳೂರು-ತುಮಕೂರು ಮಾರ್ಗದ ಮಹತ್ವವೇನು?
Image Credit : Getty

1. ಬೆಂಗಳೂರು-ತುಮಕೂರು ಮಾರ್ಗದ ಮಹತ್ವವೇನು?

ಬೆಂಗಳೂರು-ತುಮಕೂರು ರೈಲು ವಿಭಾಗವು ಪುಣೆ-ಹುಬ್ಬಳ್ಳಿ-ಚಿಕ್ಕಜಾಜೂರು-ಬೀರೂರು-ತುಮಕೂರು-ಬೆಂಗಳೂರು-ಸೇಲಂ- ಕನ್ಯಾಕುಮಾರಿ ಕಾರಿಡಾರ್‌ನ ಪ್ರಮುಖ ಭಾಗವಾಗಿದೆ. ಇದು ದಕ್ಷಿಣದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುವ ಅತ್ಯಂತ ಜನನಿಬಿಡ ನೆಟ್‌ವರ್ಕ್ (High Utilization Network - HUN Route-10) ಎನಿಸಿಕೊಂಡಿದೆ.

ಸುಮಾರು 120 ಹಳಿ ಕಿಲೋಮೀಟರ್‌ಗಳಷ್ಟು ವ್ಯಾಪಿಸಲಿರುವ ಈ ನವೀಕರಣ ಯೋಜನೆಯಿಂದಾಗಿ, ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ರೈಲುಗಳ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ, ಸಾರ್ವಜನಿಕರ ಪ್ರಯಾಣ ಹಾಗೂ ಸರಕು ಸಾಗಣೆ ಮತ್ತಷ್ಟು ಸುಗಮವಾಗಲಿದೆ.

47
2. ಸಿಕಂದರಾಬಾದ್ ಮಾರ್ಗದಲ್ಲಿ ಏನು ಬದಲಾವಣೆಯಾಗಲಿದೆ?
Image Credit : x

2. ಸಿಕಂದರಾಬಾದ್ ಮಾರ್ಗದಲ್ಲಿ ಏನು ಬದಲಾವಣೆಯಾಗಲಿದೆ?

ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗವು ಧರ್ಮಾವರಂ, ಧೋನೆ, ಸಿಕಂದರಾಬಾದ್, ಮುದ್ಖೇಡ್, ಇಂದೋರ್ ಮತ್ತು ಅಜ್ಮೀರ್ ನಗರಗಳನ್ನು ಜೋಡಿಸುವ ಹೈ-ಡೆನ್ಸಿಟಿ ನೆಟ್‌ವರ್ಕ್ (ಅತಿ ಹೆಚ್ಚು ಜನದಟ್ಟಣೆಯ ಮಾರ್ಗ) ಆಗಿದೆ.

ಹೊಸ ಎಳೆತ ವ್ಯವಸ್ಥೆಯು ಈ ಮಾರ್ಗದ ಸಾಮರ್ಥ್ಯ ಮತ್ತು ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇದರಿಂದ ಸರಕು ಸಾಗಣೆ ರೈಲುಗಳ ವೇಗ ಹೆಚ್ಚಲಿದ್ದು, ಈ ಭಾಗದ ವ್ಯಾಪಾರ ಮತ್ತು ಕೈಗಾರಿಕಾ ವಲಯಕ್ಕೆ ಭಾರಿ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

57
ಪ್ರಯಾಣಿಕರಿಗೆ ಸಿಗುವ ಲಾಭಗಳೇನು?
Image Credit : Gemini

ಪ್ರಯಾಣಿಕರಿಗೆ ಸಿಗುವ ಲಾಭಗಳೇನು?

ಸ್ಥಿರ ವಿದ್ಯುತ್ ಸರಬರಾಜು: ನವೀಕೃತ 2x25 kV ವ್ಯವಸ್ಥೆಯು ರೈಲುಗಳಿಗೆ ನಿರಂತರ ಹಾಗೂ ಬಲಿಷ್ಠ ವಿದ್ಯುತ್ ಸಂಪರ್ಕವನ್ನು ಒದಗಿಸುತ್ತದೆ. ತಾಂತ್ರಿಕ ಅಡಚಣೆಗಳು ಕಡಿಮೆಯಾಗುತ್ತವೆ.

ಹೆಚ್ಚಿನ ರೈಲುಗಳ ಸಂಚಾರ: ಮುಂಬರುವ ದಿನಗಳಲ್ಲಿ ಈ ಮಾರ್ಗಗಳಲ್ಲಿ ರೈಲ್ವೆ ಇಲಾಖೆಗೆ ಮತ್ತಷ್ಟು ಹೊಸ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತದೆ.

ಸಮಯ ಉಳಿತಾಯ: ಕಾರ್ಯಾಚರಣೆಯ ದಕ್ಷತೆ ಹೆಚ್ಚಳದಿಂದಾಗಿ ಪ್ರಯಾಣಿಕರು ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬಹುದು ಹಾಗೂ ಸರಕು ಸಾಗಣೆಯೂ ವೇಗವಾಗಿ ನಡೆಯುತ್ತದೆ.

67
ಬೆಂಗಳೂರು - ತುಮಕೂರು ರೈಲು ಅಭಿವೃದ್ಧಿಗೆ ರೂ. 162.57 ಕೋಟಿ
Image Credit : Getty

ಬೆಂಗಳೂರು - ತುಮಕೂರು ರೈಲು ಅಭಿವೃದ್ಧಿಗೆ ರೂ. 162.57 ಕೋಟಿ

ದಕ್ಷಿಣ ರೈಲ್ವೆ ಅಭಿವೃದ್ಧಿಗೆ ಒಟ್ಟು ರೂ. 447.58 ಕೋಟಿ ಅಂದರೆ ಸುಮಾರು 448 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ರೈಲುಗಳ ಸಾಮರ್ಥ್ಯ, ದಕ್ಷತೆ ಮತ್ತು ಸಂಚಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಬೃಹತ್ ಜಂಟಿ ಯೋಜನೆ ಇದಾಗಿದೆ

ಇದರಲ್ಲಿ ನೈರುತ್ಯ ರೈಲ್ವೆ ವಿಭಾಗವಾದ ಬೆಂಗಳೂರು - ತುಮಕೂರು ರೈಲು ಅಭಿವೃದ್ಧಿಗೆ ರೂ. 162.57 ಕೋಟಿ ಮೀಸಲಿಡಲಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುವ ನಿರಂತರ ಕಾರ್ಯನಿರತ ಕಾರಿಡಾರ್.

77
ದಕ್ಷಿಣ ಮಧ್ಯ ರೈಲ್ವೆ ಅಭಿವೃದ್ಧಿಗೆ ರೂ. 285.01 ಕೋಟಿ
Image Credit : Indian Railways

ದಕ್ಷಿಣ ಮಧ್ಯ ರೈಲ್ವೆ ಅಭಿವೃದ್ಧಿಗೆ ರೂ. 285.01 ಕೋಟಿ

ಮಹಬೂಬ್‌ನಗರ - ಸಿಕಂದರಾಬಾದ್ - ಮೇಡ್ಚಲ್ ದಕ್ಷಿಣ ಮಧ್ಯ ರೈಲ್ವೆ (South Central Railway) ವಿಭಾಗಕ್ಕೆ ಸೇರಿದ್ದು, ರೂ. 285.01 ಕೋಟಿ ಹೂಡಿಕೆ ಮಾಡಲಾಗಿದೆ. ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಮಾರ್ಗವಾಗಿದ್ದು, ಭಾರೀ ಪ್ರಮಾಣದ ಪ್ರಯಾಣಿಕ ಹಾಗೂ ಸರಕು ಸಾಗಣೆ ಅವಲಂಬಿತವಾದ ಮಾರ್ಗವಾಗಿದೆ.

ದಿನನಿತ್ಯ ರೈಲು ಪ್ರಯಾಣ ಮಾಡುವ ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ರೈಲ್ವೆಯನ್ನು ನೆಚ್ಚಿಕೊಂಡಿರುವ ಉದ್ಯಮಗಳಿಗೆ ಈ ಹೂಡಿಕೆಯು ವರದಾನವಾಗಲಿದೆ. ಇದು ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠ ಮತ್ತು ಸುಸಜ್ಜಿತ ರೈಲ್ವೆ ಜಾಲವನ್ನು ನಿರ್ಮಿಸಲು ದಾರಿದೀಪವಾಗಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತೀಯ ರೈಲ್ವೆ
ಬೆಂಗಳೂರು
ರೈಲು
ಸುದ್ದಿ
ತುಮಕೂರು
Latest Videos
Recommended Stories
Recommended image1
Now Playing
ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
Recommended image2
ಆರೋಗ್ಯ ಇಲಾಖೆಗೆ ಸಚಿವ ಯು.ಟಿ. ಖಾದರ್ 'ಮೇಜರ್ ಸರ್ಜರಿ': 1280 ವೈದ್ಯರ ನೇಮಕ, ಗುತ್ತಿಗೆ ನೌಕರರು ಖಾಯಂ!
Recommended image3
ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್
Related Stories
Recommended image1
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ 2028ಕ್ಕೆ ಪೂರ್ಣ: ರೈಲ್ವೆ ರಾಜ್ಯ ಸಚಿವ ಸೋಮಣ್ಣ
Recommended image2
ಉತ್ತರ ಕರ್ನಾಟಕ ಪ್ರವಾಸೋದ್ಯಮ: ಹಿಡಕಲ್ ಡ್ಯಾಂ ಇನ್ನು ಮುಂದೆ ಪ್ರವಾಸಿ ತಾಣ, ಉದ್ಯಾನ, ಮಕ್ಕಳ ರೈಲು, ಬೋಟಿಂಗ್, ತಾರಾಲಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved