ಜಸ್ಟ್ ಎರಡು ವರ್ಷಗಳ ಹಿಂದೆ ದರ್ಶನ್ ಅಂದ್ರೆ ಎಲ್ಲರೂ ಮುತ್ತಿಕ್ತಾ ಇದ್ರು. ಚಿತ್ರರಂಗ ದಾಸನನ್ನ ಹೊತ್ತು ಮೆರೆಸ್ತಾ ಇತ್ತು. ರಾಜಕಾರಣಿಗಳು, ಉದ್ಯಮಿಗಳು ದಾಸನ ಹಿಂದೆ ಮುಂದೆ ಸುತ್ತತಾ ಇದ್ರು. ಆಗ ದರ್ಶನ್ ಥೇಟ್ ಚಕ್ರವರ್ತಿಯಂತೆ ಮೆರೀತಾ ಇದ್ರು… ಆದ್ರೀಗ ಎಲ್ಲವೂ ಉಲ್ಟಾ ಆಗಿದೆ.. 

ಕರ್ನಾಟಕದ ನೂತನ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ (DK Shivakumar) ಇತ್ತೀಚಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ವಿಸಿಟ್ ಮಾಡಿದ್ರು. ಆಗ ಕನಕಪುರದ ದರ್ಶನ್ (Darshan Thoogudeepa) ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಅಂತ ಕೂಗಿದ್ರು. ಡಿ ಬಾಸ್ ಹೆಸರು ಕೇಳ್ತಾನೇ ಗರಂ ಆದ ಸಿಎಂ , ಗಲಾಟೆ ಮಾಡಿದ್ರೆ ಲಾಠಿಯೇಟು ಬೀಳುತ್ತೆ ಅಂತ ಎಚ್ಚರಿಸಿದ್ದಾರೆ. ಅಲ್ಲಿಗೆ ಮುಖ್ಯಮಂತ್ರಿಗಳ ಮಾತು ಕೇಳಿ ದಾಸನ ಫ್ಯಾನ್ಸ್ ಥಂಡಾ ಹೊಡೆದಿದ್ದಾರೆ. ಸದ್ಯ ಅಭಿಮಾನಿಗಳನ್ನ ಬಿಟ್ರೆ ಯಾರಿಗೂ ದರ್ಶನ್ ಬೇಕಾಗಿಲ್ಲ ಅನ್ನುವಂತೆ ಆಗಿಬಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವ ‘ಡಿ ಬಾಸೂ’ ಇಲ್ಲ.. ಸುಮ್ನಿರಿ.. ಸಿಎಂ ಗರಂ..!

ಕೆ‘ಡಿ’ ಫ್ಯಾನ್ಸ್​ಗೆ ಲಾಠಿಯೇಟು.. ಡಿಕೆಶಿ ವಾರ್ನಿಂಗ್..!

ದಾಸನ ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಖುದ್ದು ಸಿಎಂ ಡಿ.ಕೆ ಶಿವಕುಮಾರ್ ಲಾಠಿಯೇಟು ಬೀಳುತ್ತೆ ಹುಷಾರ್ ಅಂತ ಕೆಡಿ ಫ್ಯಾನ್ಸ್​ಗೆ ವಾರ್ನ್ ಮಾಡಿದ್ದಾರೆ.

ಅಷ್ಟಕ್ಕೂ ಇದು ನಡೆದಿದ್ದು ಮೊನ್ನೆ ಕನಕಪುರಕ್ಕೆ ನೂತನ ಸಿಎಂ ಡಿ.ಕೆಶಿ ಭೇಟಿ ಕೊಟ್ಟ ವೇಳೆ. ಡಿ.ಕೆ ಶಿವಕುಮಾರ್ ಗೆ ಸೇಬಿನ ಹಾರ ಹಾಕಿ ಸಂಭ್ರಮಿಸ್ತಾ ಇದ್ದ ಅಭಿಮಾನಿಗಳ ನಡುವೆ, ಒಂದಿಷ್ಟು ಜನ ಡಿ ಬಾಸ್ ಡಿ ಬಾಸ್ ಅಂತ ಕೂಗಿದ್ದಾರೆ.

ಆದ್ರೆ ಡಿ.ಕೆ ಶಿವಕುಮಾರ್ ಯಾವ ಬಾಸೂ ಇಲ್ಲ. ಸುಮ್ನಿರಯ್ಯಾ ಅಂದಿದ್ದಾರೆ. ಇನ್ನೂ ಜೋರು ಗಲಾಟೆ ಮಾಡಿದ್ರೇ ಲಾಠಿಯೇಟು ಬೀಳುತ್ತೆ ನೋಡಿ ಅಂತ ಗದರಿದ್ದಾರೆ,

ಹಿಂದೊಮ್ಮೆ ಡಿ.ಕೆ.ಶಿವಕುಮಾರ್ ಎದುರು ಇದೇ ಫ್ಯಾನ್ಸ್ ಡಿ ಬಾಸ್ , ಡಿ ಬಾಸ್ ಅಂತ ಕೂಗಿದಾಗ , ನಿಮ್ಮ ಡಿ ಬಾಸ್ ಬರ್ತಾರೆ ಸುಮ್ನಿರಿ ಅಂತ ಸಮಾಧಾನ ಮಾಡಿದ್ರು ಡಿ.ಕೆ ಸಾಹೇಬ್ರು. ಆದ್ರೆ ಈಗ ಡಿ ಬಾಸ್ ಹೆಸರು ಎತ್ತಿದ್ರೆ ಲಾಟಿ ಏಟು ಫಿಕ್ಸ್ ಅಂತಿದ್ದಾರೆ.

ಚಿತ್ರರಂಗಕ್ಕೂ ಬೇಡ.. ರಾಜಕೀಯ ನಾಯಕರಿಗೂ ಬೇಡ..!

ದರ್ಶನ್ ಹೆಸರು ಕೇಳಿದ್ರೆ ಈಗ ಎಲ್ಲರಿಗೂ ಅಲರ್ಜಿ..!

ಯೆಸ್ ಜಸ್ಟ್ ಎರಡು ವರ್ಷಗಳ ಹಿಂದೆ ದರ್ಶನ್ ಅಂದ್ರೆ ಎಲ್ಲರೂ ಮುತ್ತಿಕ್ತಾ ಇದ್ರು. ಚಿತ್ರರಂಗ ದಾಸನನ್ನ ಹೊತ್ತು ಮೆರೆಸ್ತಾ ಇತ್ತು. ರಾಜಕಾರಣಿಗಳು, ಉದ್ಯಮಿಗಳು ದಾಸನ ಹಿಂದೆ ಮುಂದೆ ಸುತ್ತತಾ ಇದ್ರು. ಆಗ ದರ್ಶನ್ ಥೇಟ್ ಚಕ್ರವರ್ತಿಯಂತೆ ಮೆರೀತಾ ಇದ್ರು.

ಅದ್ರಲ್ಲೂ ದರ್ಶನ್ ಸ್ನೇಹ ಸಂಪಾದಿಸೋದಕ್ಕೆ ರಾಜಕಾರಣಿಗಳು ಮುಗಿ ಬೀಳ್ತಾ ಇದ್ರು. ಯಾಕಂದ್ರೆ ದರ್ಶನ್​ಗಿರೋ ಫ್ಯಾನ್ ಫಾಲೋವಿಂಗ್​ಗೆ ಅವರು ಜೊತೆಗೆ ನಿಂತ್ರೆ ತಮಗೆ ದೊಡ್ಡ ಅನುಕೂಲ ಆಗುತ್ತೆ ಅಂತ ಭಾವಿಸ್ತಾ ಇದ್ರು.

ಸುಮಲತಾರನ್ನ ಗೆಲ್ಲಿಸಿದ ರೋಚಕ ಕಥೆ

ದರ್ಶನ್ ಮಂಡ್ಯದಲ್ಲಿ ಪ್ರಚಾರ ಮಾಡಿ ಸುಮಲತಾರನ್ನ ಗೆಲ್ಲಿಸಿದ ರೋಚಕ ಕಥೆ ಅಂತೂ ಗೊತ್ತೇ ಇದೆ. ರಾಜ್ಯದ ಹಲವು ರಾಜಕಾರಣಿಗಳ ಪರ ದರ್ಶನ್ ಪ್ರಚಾರ ಮಾಡಿದ್ರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರ ಪರ ಪ್ರಚಾರ ಮಾಡಿದ್ರು.

ಆದ್ರೆ ಈಗ ಹೇಗಾಗಿದೆ ಅಂದ್ರೆ ದರ್ಶನ್ ಹೆಸರು ಎತ್ತಿದ್ರೆ ಸಿನಿಮಾದವರು ಮಾತನಾಡೋದಕ್ಕೆ ಹಿಂದೇಟು ಹಾಕ್ತಾರೆ. ರಾಜಕಾರಣಿಗಳಂತೂ ದಾಸ ಅಂದ್ರೆ ಲಾಟಿಯೇಟು ಬೀಳುತ್ತೆ ಅಂತಾರೆ.

ಸದ್ಯ ದರ್ಶನ್ ಗೆ ಇನ್ನೊಂದು ವರ್ಷ ಬೇಲ್ ಸಿಕ್ಕೋದು ಅಸಾಧ್ಯ ಅನ್ನುವಂತೆ ಆಗಿದೆ. ಸುಪ್ರೀಂ ಕೋರ್ಟ್ ಇನ್ನೊಂದು ವರ್ಷ ಬೇಲ್ ಸಿಕ್ಕಂಗಿಲ್ಲ ಅಂದಿದೆ. ಸೋ ಇನ್ನೊಂದು ವರ್ಷ ದಾಸನ ಹೆಸರೇ ಎತ್ತೋಹಾಗಿಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿಬಿಟ್ಟಿದೆ..!

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..