- Home
- Entertainment
- TV Talk
- ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ದುಬಾರಿ ಬೆಳ್ಳಿ ಕತ್ತಿ ಗಿಫ್ಟ್ ಮಾಡಿದ ಬಿಗ್‌ಬಾಸ್ ಅಶ್ವಿನಿ ಗೌಡ
ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ದುಬಾರಿ ಬೆಳ್ಳಿ ಕತ್ತಿ ಗಿಫ್ಟ್ ಮಾಡಿದ ಬಿಗ್‌ಬಾಸ್ ಅಶ್ವಿನಿ ಗೌಡ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ 60ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ನಟಿ ಹಾಗೂ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ನಾರಾಯಣ ಗೌಡರಿಗೆ ಬೆಳ್ಳಿ ಕತ್ತಿಯನ್ನು ಉಡುಗೊರೆಯಾಗಿ ನೀಡಿ ಶುಭ ಕೋರಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಕನ್ನಡ ಪರ ಹೋರಾಟದ ಪ್ರಮುಖ ನಾಯಕ ಟಿಎ ನಾರಾಯಣ ಗೌಡ ಅವರು ಬುಧವಾರ ಅದ್ದೂರಿಯಾಗಿ ತಮ್ಮ 60ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಸಾಕಷ್ಟು ಕನ್ನಡ ಪರ ಹೋರಾಟಗಾರರು ಹಾಗೂ ಕಾರ್ಯಕರ್ತರು ಅವರನ್ನು ಅಭಿನಂದಿಸಿದ್ದಾರೆ.
ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರಣದಿಂದಾಗಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಟಿ ಹಾಗೂ 12ನೇ ಆವೃತ್ತಿಯ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ, ನಾರಾಯಣ ಗೌಡ ಅವರ ನಿವಾಸಕ್ಕೆ ಆಗಮಿಸಿ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ಕರವೇ ಮಹಿಳಾ ಘಟಕದ ರಾಜ್ಯ ಗೌರವಾಧ್ಯಕ್ಷೆ ಕೂಡ ಆಗಿರುವ ಅಶ್ವಿನಿ ಗೌಡ, ಬೆಳ್ಳಿ ಕತ್ತಿಯನ್ನು ನಾರಾಯಣ ಗೌಡ ಅವರಿಗೆ ಗಿಫ್ಟ್ ಆಗಿ ನೀಡಿದರು. ಇದನ್ನು ಸ್ವೀಕರಿಸಿದ ನಾರಾಯಣ ಗೌಡ ಅದನ್ನು ಕೈಯಲ್ಲಿ ಹಿಡಿದು ಪೋಸ್ ನೀಡಿದ್ದಾರೆ.
ಬಿಗ್‌ಬಾಸ್ ಕೊನೆಯ ಘಟ್ಟದಲ್ಲಿ ಕರವೇ ಅಶ್ವಿನಿ ಗೌಡ ಅವರಿಗೆ ಸಾರ್ವಜನಿಕವಾಗಿ ಬೆಂಬಲ ಘೋಷಣೆ ಮಾಡಿತ್ತು. ಸ್ವತಃ ನಾರಾಯಣ ಗೌಡ ಅವರೇ ಅಶ್ವಿನಿ ಅವರು ಬಿಗ್‌ಬಾಸ್ ಗೆದ್ದು ಬರಬೇಕು ಎಂದು ಹೇಳಿದ್ದರು.
ಇನ್ನು ಸೋಶಿಯಲ್ ಮೀಡಿಯಾದಲ್ಲೂ ಕೂಡ ಅಶ್ವಿನಿ ಗೌಡ ಈ ಕುರಿತಾದ ಪೋಸ್ಟ್ ಹಂಚಿಕೊಂಡಿದ್ದಾರೆ. 'ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಅಣ್ಣ ಟಿ. ಎ ನಾರಾಯಣ ಗೌಡರಿಗೆ ಪ್ರೀತಿ ತುಂಬಿದ ಹುಟ್ಟು ಹಬ್ಬದ ಶುಭಾಶಯಗಳು..' ಎಂದು ಬರೆದುಕೊಂಡಿರುವ ಅಶ್ವಿನಿ ಗೌಡ ವಿಶೇಷ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

