ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಮತ್ತು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಎಲೆನಾ ರಬೈಕೆನಾ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾ ಅವರನ್ನು ಸಬಲೆಂಕಾ ಸೋಲಿಸಿದರೆ, ಕೊಕೊ ಗಾಫ್ ವಿರುದ್ಧ ರಬೈಕೆನಾ ಗೆಲುವು ಸಾಧಿಸಿದರು. ಈ ಫೈನಲ್ ಪಂದ್ಯವು ವಿಶ್ವದ ನಂಬರ್ 1 ಸ್ಥಾನವನ್ನು ಸಹ ನಿರ್ಧರಿಸಲಿದೆ.
ನ್ಯೂಯಾರ್ಕ್: ವರ್ಷದ ಕೊನೆ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಾಗಿರುವ ಯುಎಸ್ ಓಪನ್‌ನಲ್ಲಿ ಈ ಬಾರಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಹಾಗೂ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಎಲೆನಾ ರಬೈಕೆನಾ ನಡುವೆ ಫೈನಲ್ ಕಾದಾಟ ನಡೆಯಲಿದೆ. ಈ ಪಂದ್ಯ ಭಾನುವಾರ ನಿಗದಿಯಾಗಿದೆ.
ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ, ಕಳೆದೆರಡು ಬಾರಿಯ ಟ್ರೋಫಿ ವಿಜೇತೆ, ಬೆಲಾರಸ್‌ನ ಸಬಲೆಂಕಾ ಅವರು 3ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 7-5, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ, ಒಟ್ಟಾರೆ ಗ್ರ್ಯಾನ್‌ಸ್ಲಾಂನಲ್ಲಿ 9ನೇ ಬಾರಿ ಫೈನಲ್‌ಗೇರಿದರು.
ಕೊಕೊ ಗಾಫ್ ಎದುರು ಗೆದ್ದ ರಬೈಕೆನಾ
ಮತ್ತೊಂದು ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತೆ, ಕಜಕಸ್ತಾನದ ರಬೈಕೆನಾ ಅವರು ಅಮೆರಿಕದ ಯುವ ತಾರೆ, 2023ರ ಚಾಂಪಿಯನ್ ಕೊಕೊ ಗಾಫ್ ವಿರುದ್ಧ 3-6, 6-4, 6-4 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಯುಎಸ್ ಓಪನ್‌ನಲ್ಲಿ ಚೊಚ್ಚಲ, ಒಟ್ಟಾರೆ ಗ್ರ್ಯಾನ್‌ಸ್ಲಾಂನಲ್ಲಿ 4ನೇ ಬಾರಿ ರಬೈಕೆನಾ ಫೈನಲ್ ತಲುಪಿದರು.
ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಬಲೆಂಕಾ ಅಗ್ರಸ್ಥಾನದಲ್ಲಿದ್ದು, ರಬೈಕೆನಾ 2ನೇ ಸ್ಥಾನದಲ್ಲಿದ್ದಾರೆ. ಸಬಲೆಂಕಾ ಅವರು ಈ ಪಂದ್ಯದಲ್ಲಿ ಸೋತರೆ ಅಗ್ರಸ್ಥಾನ ಕಳೆದುಕೊಳ್ಳಲಿದ್ದು, ರಬೈಕೆನಾ ಮೊದಲ ಸ್ಥಾನ ಪಡೆಯಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ರಬೈಕೆನಾ ವಿರುದ್ಧ ಸೋತಿದ್ದ ಅರೈನಾ
ಇದು ಸಬಲೆಂಕಾ ಹಾಗೂ ರಬೈಕೆನಾ ನಡುವೆ 3ನೇ ಗ್ರ್ಯಾನ್‌ಸ್ಲಾಂ ಫೈನಲ್ ಮುಖಾಮುಖಿ. 2023ರಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರಬೈಕೆನಾ ವಿರುದ್ಧ ಸಬಲೆಂಕಾ ಗೆದ್ದಿದ್ದರು. ಆದರೆ ಈ ವರ್ಷ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸಬಲೆಂಕಾರನ್ನು ಸೋಲಿಸಿ ರಬೈಕೆನಾ ಟ್ರೋಫಿ ಎತ್ತಿಹಿಡಿದಿದ್ದರು. ಈಗ ಮತ್ತೊಮ್ಮೆ ಇವರಿಬ್ಬರು ಮುಖಾಮುಖಿಯಾಗುತ್ತಿದ್ದಾರೆ.
04ನೇ ಫೈನಲ್
ಸಬಲೆಂಕಾ ಯುಎಸ್ ಓಪನ್‌ನಲ್ಲಿ ಸತತ 4ನೇ ಫೈನಲ್‌ಗೇರಿದರು. 2023ರಲ್ಲಿ ರನ್ನರ್‌ಅಪ್, 2024, 2025ರಲ್ಲಿ ಟ್ರೋಫಿ ಗೆದ್ದಿದ್ದಾರೆ.


