useful tips for bride : ಮದುವೆಯ ಸಂದರ್ಭದಲ್ಲಿ ಎಲ್ಲ ವಧು ಕಣ್ಣೀರು ಹಾಕ್ಬೇಕು ಅಂತಿಲ್ಲ. ಹಾಕ್ಲೇಬೇಕು ಆದ್ರೆ ಕಣ್ಣೀರೇ ಬರ್ತಿಲ್ಲ ಎನ್ನುವವರಿಗೆ ಇಲ್ಲೊಂದಿಷ್ಟು ಸುಲಭ ಟಿಪ್ಸ್ ಇದೆ.
ತವರು ಮನೆಯನ್ನು ಬಿಟ್ಟು ಗಂಡನ ಮನೆ ಸೇರುವ ಹುಡುಗಿಗೆ ಮದುವೆ ಜೀವನದ ದೊಡ್ಡ ಘಟ್ಟ. ಈ ಸಂದರ್ಭದಲ್ಲಿ ಅನೇಕ ಹುಡುಗಿಯರು ಕಣ್ಣೀರು ಹಾಕ್ತಾರೆ. ಹಾಗಂತ ಎಲ್ಲ ವಧು ಅಳ್ಬೇಕು ಎಂದೇನಿಲ್ಲ. ಆದ್ರೆ ಮದುವೆ ಸಂದರ್ಭದಲ್ಲಿ ಅಳೋದು ಈಗೀಗ ಟ್ರೆಂಡ್ ಆಗ್ತಿದೆ. ವಧು ಕಣ್ಣಲ್ಲಿ ನೀರು ಬಂದಿಲ್ಲ ಅಂದ್ರೆ ಅದೇನೋ ಮುಜುಗರದ ಸಂಗತಿ ಅಂತ ಭಾವಿಸುವವರಿದ್ದಾರೆ. ಮದುವೆ ಟೈಂನಲ್ಲಿ ಅಳು ಬರ್ತಿಲ್ಲ ಅಂದ್ರೆ ಟೆನ್ಷನ್ ಬೇಡ. ನಿಮ್ಮ ಕಣ್ಣಲ್ಲಿ ನೀರು ಬರಿಸುವ ಉಪಾಯವನ್ನು ನಾವು ಹೇಳ್ತೇವೆ.
ಹಳೆಯ ನೆನಪು
ವಧುವಿನ ಹೃದಯ ಭಾರವಾಗಿರುತ್ತದೆ, ಕ್ಯಾಮೆರಾಗಳು ನಿರಂತರವಾಗಿ ಅವಳ ಮುಂದೆ ಇರೋದ್ರಿಂದ, ಎಲ್ಲರ ಗಮನ ಆಕೆ ಕಡೆ ಇರೋದ್ರಿಂದ ಕೆಲವೊಬ್ಬರ ಕಣ್ಣಲ್ಲಿ ನೀರು ಬರೋದಿಲ್ಲ. ವಿದಾಯದ ಸಮಯದಲ್ಲಿ ನಿಮ್ಮ ಕಣ್ಣುಗಳು ಒಣಗಿದ್ದರೆ, ಕಣ್ಣಲ್ಲಿ ನೀರು ತರಿಸಲು ಸುಲಭ ಉಪಾಯ ಅಂದ್ರೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಹೆತ್ತವರೊಂದಿಗಿನ ಬಾಲ್ಯದ ಕ್ಷಣಗಳು, ನಿಮ್ಮ ಒಡಹುಟ್ಟಿದವರ ಕುಚೇಷ್ಟೆಗಳು ಅಥವಾ ಮನೆಯಲ್ಲಿ ನಡೆದ ವಿಶೇಷ ದಿನವನ್ನು ನೆನಪಿಸಿಕೊಳ್ಳಿ. ನೀವು ಬಯಸಿದರೆ, ನೀವು ಮದುವೆಗೆ ಮುಂಚಿನ ಹಳೆಯ ಫೋಟೋಗಳನ್ನು ಸಹ ನೋಡಬಹುದು. ಈ ವಿಷಯಗಳನ್ನು ನೆನಪಿಸಿಕೊಳ್ಳುವುದರಿಂದ ಕಣ್ಣೀರು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಆಕಳಿಕೆ
ವಿದಾಯದ ಟೈಂನಲ್ಲಿ ಅಳಲೇಬೇಕು, ಆದ್ರೆ ಕಣ್ಣಲ್ಲಿ ನೀರು ಬರ್ತಿಲ್ಲ ಎನ್ನುವವರು ನೀವಾಗಿದ್ದರೆ ಆಕಳಿಸುವ ಪ್ರಯತ್ನ ಮಾಡಿ. ಅನೇಕರಿಗೆ ಆಕಳಿಸುವ ಟೈಂನಲ್ಲಿ ಕಣ್ಣಲ್ಲಿ ನೀರು ಬರುತ್ತದೆ. ನೀವು ಆಕಳಿಸುವಾಗ ಕ್ಯಾಮರಾಕ್ಕೆ ಫೋನ್ ನೀಡ್ಬೇಡಿ. ಆಕಳಿಗೆ ನಂತ್ರ ಫೋಸ್ ನೀಡಿ.
ಕಣ್ಣು ಮಿಟುಕಿಸಿ
ವಿದಾಯದ ಸಮಯದಲ್ಲಿ ವಧುವಾಗಿ ಅಳಲೇಬೇಕು, ನಿಮ್ಮ ಕಣ್ಣೀರಿನ ಫೋಟೋ ಕ್ಯಾಮರಾದಲ್ಲಿ ಸೆರೆ ಆಗಲೇಬೇಕು ಎಂದಿದ್ದರೆ ನೀವು ಇನ್ನೊಂದು ಪ್ರಯತ್ನ ಕೂಡ ಮಾಡ್ಬಹುದು. ಸ್ವಲ್ಪ ಸಮಯ ಒಂದೇ ಕಡೆ ದೃಷ್ಟಿ ಹರಿಸಿ. ಕಣ್ಣನ್ನು ಪದೇ ಪದೇ ಮಿಟುಕಿಸುವ ಬದಲು ವಸ್ತುವನ್ನು ಹಾಗೇ ನೋಡ್ತಿರಿ. ಆಗ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
ಇದನ್ನು ಮಾಡ್ಬೇಡಿ
ನಿಮ್ಮ ಕಣ್ಣಲ್ಲಿ ನೀರು ಬರ್ಬೇಕು ಎನ್ನುವ ಕಾರಣಕ್ಕೆ ಈರುಳ್ಳಿ ಕತ್ತರಿಸುವುದು ಅಥವಾ ಸುಗಂಧ ದ್ರವ್ಯ ಅಥವಾ ಬೇರೆ ಯಾವುದೇ ವಸ್ತುಗಳ ಬಳಕೆ ಮಾಡಬೇಡಿ. ಇವು ಕಣ್ಣಿಗೆ ಕಿರಿಕಿರಿಯುಂಟು ಮಾಡುವುದಲ್ಲದೆ ಮೇಕಪ್ ಹಾಳು ಮಾಡುತ್ತದೆ.
ಈ ಬಗ್ಗೆ ಚಿಂತೆ ಬೇಡ
ನಿಮ್ಮ ಕಣ್ಣಲ್ಲಿ ನೀರು ಬರದಿದ್ದರೂ ಚಿಂತೆಯಿಲ್ಲ. ಪ್ರತಿಯೊಬ್ಬ ವಧು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ವಿಭಿನ್ನ ಮಾರ್ಗವನ್ನು ಹೊಂದಿರುತ್ತಾಳೆ. ಕೆಲವರು ಬಹಳಷ್ಟು ಕಣ್ಣೀರು ಸುರಿಸಿದರೆ, ಇತರರು ಅಳುವ ಬದಲು ನಗಬಹುದು. ನಿಮಗೆ ಕಣ್ಣೀರು ಬರದಿದ್ದರೆ, ಅದನ್ನು ಒತ್ತಾಯಿಸುವ ಅಗತ್ಯವಿಲ್ಲ. ನಿಮ್ಮ ಕುಟುಂಬದೊಂದಿಗೆ ಆ ಕ್ಷಣವನ್ನು ಆನಂದಿಸಿ ಮತ್ತು ಕ್ಯಾಮೆರಾ ಮುಂದೆ ನೈಸರ್ಗಿಕವಾಗಿರಿ.


