ನೆರೆಮನೆಯವನೊಂದಿಗೆ ತನ್ನ ಅನೈ*ತಿಕ ಸಂಬಂಧವನ್ನು ನೋಡಿದ 5 ವರ್ಷದ ಮಗನನ್ನು ಮಹಡಿಯಿಂದ ತಳ್ಳಿ ಕೊಂದ ತಾಯಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಭೋಪಾಲ್ : ನೆರೆಮನೆಯವೊಂದಿಗೆ ತಾನು ಹೊಂದಿದ್ದ ಅನೈತಿಕ ಸಂಬಂಧವನ್ನು ನೋಡಿದ 5 ವರ್ಷದ ಮಗುವನ್ನೇ ಮಹಡಿಯಿಂದ ಕೆಳಗೆ ದೂಡಿ ಕೊಂದ ಕ್ರೂರಿ ತಾಯಿಗೆ ಈಗ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಘಟನೆ ನಡೆದ ಎರಡು ವರ್ಷಗಳ ನಂತರ ನ್ಯಾಯಾಲಯ ತೀರ್ಪು ನೀಡಿದೆ. 2023ರ ಏಪ್ರಿಲ್ 28ರಂದು ಈ ಘಟನೆ ನಡೆದಿತ್ತು. ಪೊಲೀಸ್ ಕಾನ್ಸ್‌ಟೇಬಲ್ ಧ್ಯಾನ್ ಸಿಂಗ್ ರಾಥೋರ್ ಎಂಬುವವರ ಪತ್ನಿ ಜ್ಯೋತಿ ಸಿಂಗ್ ರಾಥೋರ್ ಎಂಬಾಕೆ ತನ್ನ ನೆರೆಮನೆಯವನಾದ ಉದಯ್ ಇಂಡೋಲಿಯಾ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆ ಆತನ ಜೊತೆ ಇರಬಾರದ ರೀತಿಯಲ್ಲಿ ಇರುವುದನ್ನು ಆಕೆಯ ಐದು ವರ್ಷದ ಮಗು ಜಿತಿನ್ ನೋಡಿದ್ದ. ಹೀಗಾಗಿ ಈ ಬಗ್ಗೆ ಭಯಗೊಂಡ ತಾಯಿ ಜ್ಯೋತಿ ಸಿಂಗ್ ಮಗು ತನ್ನ ಪತಿಗೆ ವಿಚಾರ ತಿಳಿಸಿದರೆ ಎಂಬ ಭಯದಲ್ಲೇ ಮಗ ಜಿತಿನ್‌ನನ್ನು ಕಟ್ಟಡದಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಳು.

ಎರಡಂತಸ್ಥಿನ ಮನೆಯ ಛಾವಣಿಯಿಂದ ಮಗುವನ್ನು ಕೆಳಗೆಸೆದ ಜ್ಯೋತಿ ನಂತರ ಮಗು ಜಿತಿನ್ ಆಕಸ್ಮಿಕವಾಗಿ ಬಿದ್ದಿದ್ದಾನೆ ಎಂದಿದ್ದಳು. ಇತ್ತ ಮೇಲಿನಿಂದ ಕೆಳಗೆ ಬಿದ್ದ 5 ವರ್ಷಷದ ಮಗು ಗಂಭೀರ ಗಾಯಗೊಂಡಿದ್ದು, 24 ಗಂಟೆಯಲ್ಲಿ ಸಾವನ್ನಪ್ಪಿದ್ದ. ಆರಂಭದಲ್ಲಿ ಈ ಪ್ರಕರಣವನ್ನು ಪೊಲೀಸರು ಆಕಸ್ಮಿಕ ಘಟನೆ ಎಂದೇ ಭಾವಿಸಿದ್ದರು. ಆದರೆ ಕೃತ್ಯವೆಸಗಿದ್ದ 15 ದಿನಗಳ ನಂತರ ಸ್ವತಃ ಜ್ಯೋತಿಯೇ ಗಂಡ ಧ್ಯಾನ್ ಮುಂದೆ ತಾನು ಎಸಗಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಳು.

ಇದನ್ನೂ ಓದಿ: 200ಕ್ಕೂ ಹೆಚ್ಚು ಜನರಿಗೆ ಸುಲಭ ಹೆರಿಗೆ ಮಾಡಿಸಿದ ನರ್ಸ್‌ ತನ್ನ ಮೊದಲ ಮಗುವಿನ ಜನನದ ವೇಳೆ ದುರಂತ ಸಾವು

ಆಕೆ ತಪ್ಪು ಒಪ್ಪಿಕೊಳ್ಳುವುದಕ್ಕೂ ಮೊದಲೇ ತನ್ನ ಮಗನ ಸಾವಿನ ನಂತರ ಏನೋ ತಪ್ಪಾಗಿದೆ ಎಂದು ಧ್ಯಾನ್‌ಗೆ ಅನುಮಾನ ಬರಲು ಆರಂಭ ಆಗಿತ್ತು. ಹೀಗಾಗಿ ಆತ ಜ್ಯೋತಿ ಏನಾಯಿತು ಎಂದು ಒಪ್ಪಿಕೊಂಡ ಅನೇಕ ಆಡಿಯೋ ಮತ್ತು ವಿಡಿಯೋ ಸಂಭಾಷಣೆಗಳನ್ನು ಅವರು ರೆಕಾರ್ಡ್ ಮಾಡಿದ್ದರು ಮತ್ತು ಅವರ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಿಂದಲೂ ಸಹ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದರು. ಇದಾದ ನಂತರವೇ ಧ್ಯಾನ್ ಅವರು ಪೊಲೀಸರನ್ನು ಸಂಪರ್ಕಿಸಿದ್ದರು.

ಪ್ರಕರಣದಲ್ಲಿ ಜ್ಯೋತಿಯ ಪ್ರೇಮಿ ಉದಯ್‌ನನ್ನು ಕೂಡ ಆರೋಪಿ ಮಾಡಲಾಗಿತ್ತು. ಆದರೆ ತನಿಖೆಯ ನಂತರ ಚಾರ್ಜ್‌ಶೀಟ್ ಕೂಡ ಹಾಕಲಾಗಿತ್ತು. ಆದರೆ ವಿಚಾರಣೆ ವೇಳೆ ಸಾಕ್ಷ್ಯಗಳನ್ನು ಆಧರಿಸಿ ಜ್ಯೋತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯ್ತು. ಆದರೆ ಪ್ರಕರಣದಲ್ಲಿ ಉದಯ್‌ನನ್ನು ಖುಲಾಸೆಗೊಳಿಸಲಾಯ್ತು.

ಇದನ್ನೂ ಓದಿ: ಉದ್ಘಾಟನೆಗೂ ಮೊದಲೇ ಕುಸಿದು ಬಿತ್ತು 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್‌: ಕಳಪೆ ಕಾಮಗಾರಿ ಆರೋಪ

ಪತಿಯ ದೂರಿನ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಥಾಟಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಕಮಲ್ ಕಿಶೋರ್ ಹೇಳಿದ್ದಾರೆ. ಜ್ಯೋತಿಯನ್ನು ಅಪರಾಧಿ ಎಂದು ನಿರ್ಣಯಿಸಲು ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯಗಳನ್ನು ಅವಲಂಬಿಸಿದೆ ಎಂದು ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ಹೇಳಿದರು. ಆದರೆ ಎರಡನೇ ಆರೋಪಿ ಸಾಕ್ಷ್ಯದ ಕೊರತೆಯಿಂದಾಗಿ ಖುಲಾಸೆಯಾಗಿದ್ದ. ಒಟ್ಟಿನಲ್ಲಿ ಪ್ರೇಮಿಯೊಂದಿಗಿನ ಸರಸಕ್ಕಾಗಿ ಪುಟ್ಟ ಮಗುವನ್ನು ಕೊಂದ ಈ ಜ್ಯೋತಿ ತಾಯಿ ಎಂಬ ಮಮತೆಗೆ ಕರುಣೆಗೆ ಕಳಂಕ ತಂದಿದ್ದಾಳೆ. ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳು ಮಾಡಿದ್ದಾಳೆ.