Asianet Suvarna News Asianet Suvarna News
breaking news image

ಸೆಕ್ಸ್‌ಲ್ಲಿ ಮಹಿಳೆ ಇದನ್ನೆಲ್ಲಾ ಇಷ್ಟಪಡ್ತಾಳೆ, ಆದ್ರೆ ಹೇಳೋಕೆ ನಾಚಿಕೊಳ್ತಾಳೆ!

ಪುರುಷರಂತೆ ಮಹಿಳೆಯರಲ್ಲೂ ಲೈಂಗಿಕತೆಯ ಬಗ್ಗೆ ನಾನಾ ಭಾವನೆಗಳಿರುರತ್ತವೆ. ತಾನು ಆನಂದಿಸುವ ಸೆಕ್ಸ್ ಬಗ್ಗೆ ಎಲ್ಲ ಸ್ತ್ರೀಯರಿಗೂ ಅವರದೇ ಕಲ್ಪನೆ ಇರುತ್ತದೆ. ಆದರೆ ಬಾಯಿಬಿಟ್ಟು ಹೇಳಿದರೆ, ಎಲ್ಲಿ ಇವಳಿಗೆ ನಾಚಿಕೆಯೇ ಇಲ್ಲದ ನಿರ್ಲಜ್ಜ ವ್ಯಕ್ತಿ ಅಂದುಕೊಳ್ತಾರೋ ಎಂದು ಸುಮ್ಮನಾಗ್ತಾಳೆ. ಹಾಗಾದ್ರೆ ಅವು ಯಾವುವು?

 

Exploring the Silent Desires What Women Want in Intimacy
Author
First Published Jun 21, 2024, 9:56 AM IST

ಸೆಕ್ಸ್ ವಿಚಾರದಲ್ಲಿ (Women about Sex) ತಿಳಿದು ಮುಗಿಯಿತು ಎಂಬುದಿಲ್ಲ. ನಿಮ್ಮ ಪತ್ನಿ ಅಥವಾ ಸಂಗಾತಿ ನಿಮಗೆ ಹೇಳದೇ ಉಳಿದ, ಆದರೆ ಹಾಸಿಗೆಯಲ್ಲಿ ಎಂಜಾಯ್ ಮಾಡಬಯಸುವ ಹಲವು ವಿಷಯಗಳಿರಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮ್ಮ ಲೈಂಗಿಕ ಜೀವನವನ್ನು ಉತ್ತಮ ರೀತಿಯಲ್ಲಿ ಎಂಜಾಯ್ ಮಾಡಿ!

1. ಮಹಿಳೆಯರು ಹಾಸಿಗೆಯ ಕ್ರಿಯೆಯಲ್ಲಿ ವೈವಿಧ್ಯತೆಯನ್ನು ಪ್ರೀತಿಸುತ್ತಾರೆ: ಅದೇ ಸ್ಪರ್ಶ, ಅದೇ ರೀತಿ, ಅದೇ ವಿಧಾನ, ಒಂದೇ ಸ್ಥಳ, ಅದೇ ಸಮಯವು ಮಹಿಳೆಗೆ ತುಂಬಾ ಬೇಸರವನ್ನುಂಟುಮಾಡುತ್ತದೆ! ಮಹಿಳೆಯರು ಸಾಹಸವನ್ನು ಇಷ್ಟಪಡುತ್ತಾರೆ. ಯಾರೂ ವಾರದಲ್ಲಿ 7 ದಿನ ಒಂದೇ ಬಟ್ಟೆಯನ್ನು ಧರಿಸುವುದಿಲ್ಲ. ವೈವಿಧ್ಯತೆಯು ಲೈಂಗಿಕತೆಯ ಮಸಾಲೆ. ನಿನ್ನೆ ನೀವು ಅವಳನ್ನು ಹೇಗೆ ಸ್ಪರ್ಶಿಸುತ್ತೀರಿ, ಇಂದೂ ಹಾಗೇ ಸ್ಪರ್ಶಿಸಬೇಕೆಂದು ಬಯಸುವುದಿಲ್ಲ. ಅವಳನ್ನು ಗಮನಿಸುವುದು, ಅರ್ಥ ಮಾಡಿಕೊಳ್ಳುವುದು, ಅವಳು ಒರಟುತನ ಅಥವಾ ಮೃದುತ್ವವನ್ನು ಬಯಸಿದಾಗ ಹಾಗೆ ಮಾಡುವುದು ನಿಮ್ಮ ಕೆಲಸ.

2. ಮಹಿಳೆಯರು ಪ್ರಣಯವನ್ನು ಪ್ರೀತಿಸುತ್ತಾರೆ: ಸೌಮ್ಯವಾದ, ಭಾವೋದ್ರಿಕ್ತ ಚುಂಬನಗಳು, ಮೃದುವಾದ ಸ್ಪರ್ಶಗಳು (Smooth Touches), ಸರಿಯಾದ ಸ್ಥಳಗಳಲ್ಲಿ ಮುತ್ತುಗಳು ಕ್ರಮೇಣ ಮಹಿಳೆಯನ್ನು ಉದ್ರೇಕಗೊಳಿಸುತ್ತವೆ!

3. ಮಹಿಳೆಯರು ಸೆಕ್ಸ್ ಮೊದಲು ಮಾತನಾಡಲು ಇಷ್ಟಪಡುತ್ತಾರೆ. ಅವಳ ದಿನ ಹೇಗೆ ಕಳೆಯಿತು ಎಂಬುದರ ಕುರಿತು ಅವಳ ಮಾತುಗಳನ್ನು ಕೇಳುವುದು ಆಕೆಗೆ ತುಂಬಾ ಸಿಹಿ ಎನಿಸುತ್ತದೆ. ನೀವು ಅವಳ ಹೃದಯವನ್ನು ಗೆಲ್ಲುವವವರೆಗೂ ಅವಳ ದೇಹವನ್ನು ಮುಟ್ಟುವುದು ಸಲ್ಲ. 

4.ಲೈಂಗಿಕ ಕ್ರಿಯೆಯಲ್ಲಿ ಟಾಪ್‌ನಲ್ಲಿರಲು ಅಥವಾ ಪುರುಷಾಯತ ಭಂಗಿಯನ್ನು ಇಷ್ಟಪಡುತ್ತಾರೆ: ಎಲ್ಲಾ ಮಹಿಳೆಯರು ಅಲ್ಲ, ಆದರೆ ಹೆಚ್ಚಿನವರು. ಇದು ಅವಳಿಗೆ ಹೆಚ್ಚಿನ ಸುಖ ಕೊಡುತ್ತದೆ. ಸಂಭೋಗಕ್ಕೆ (Sexual Intercourse) ಹೆಚ್ಚಿನ ಆಳವನ್ನು ನೀಡುತ್ತದೆ. ನೀವು ಅವಳ ಮುಂಭಾಗದ ನೋಟವನ್ನು ಆನಂದಿಸುವುದು ಆಕೆಯನ್ನು ಖುಷಿಪಡಿಸುತ್ತದೆ.

5. ಮಹಿಳೆಯರು ಕ್ವಿಕ್ಕೀ ಅಥವಾ ತ್ವರಿತ ಪ್ರಣಯಕ್ರೀಡೆಯನ್ನು ಅಡುಗೆಮನೆಯಲ್ಲಿ (Kitchen), ಶೌಚಾಲಯದಲ್ಲಿ ಮುಂತಾದ ಕಡೆ ಎಲ್ಲಿ ಬೇಕಾದರೂ ಮಾಡಲು ಸಿದ್ಧ. ಆದರೆ ನೀವು ಕೋಮಲವಾಗಿ, ಅವಳನ್ನು ಗೌರವಿಸಿ, ಪ್ರೀತಿಯಿಂದ ಮತ್ತು ರಾಣಿಯಂತೆ ಅವಳನ್ನು ನಡೆಸಿಕೊಂಡರೆ ಮಾತ್ರ.

ಈಕೆ ಮುಟ್ಟಿನ ರಕ್ತ ಕುಡೀತಾಳಂತೆ! ಏನಿವಳ ಕಥೆ?

6. ಹೆಂಗಸರು ತಮ್ಮ ಭಂಗಾಂಕುರವನ್ನು ಮೃದುವಾಗಿ, ಪ್ರೀತಿಯಿಂದ, ಸೂಕ್ತ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಗಂಡಸು ತೀಡಲಿ ಎಂದು ಬಯಸುತ್ತಾಳೆ. ಅದರಿಂದ ಹೆಚ್ಚಿನ ಸುಖ ಪಡೆಯುತ್ತಾಳೆ.

7. ಮಹಿಳೆಯರು ನಿಮ್ಮ ಶಿಶ್ನದ ಗಾತ್ರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಸರಿಯಾದ ಸ್ಥಳ, ಕೋನದಲ್ಲಿ ಬಳಸುವುದು ಮುಖ್ಯ. 

8. ಮಹಿಳೆಯರು ತಮಗೆ ಲೈಂಗಿಕ ಪರಾಕಾಷ್ಠೆ ಅಥವಾ ಆರ್ಗ್ಯಾಸಂ ಅನ್ನು ನೀಡುವ ಯಾವುದೇ ಭಂಗಿಯನ್ನು ಸಂತೋಷದಿಂದ ಮಾಡುತ್ತಾರೆ.

9. ಮಹಿಳೆಗೆ ಲೈಂಗಿಕ ಉತ್ಸಾಹದ ಇಂಧನವೆಂದರೆ ಪ್ರೀತಿ (Love), ಕಾಳಜಿ (Caring), ಗಮನ, ವಾತ್ಸಲ್ಯ ಮತ್ತು ಔದಾರ್ಯ. ಇದು ನಿಮ್ಮ ದಾಂಪತ್ಯದಲ್ಲಿ ಇದ್ದರೆ ಗ್ರೇಟ್. ಇದು ಕೇವಲ ಅವಳಿಂದ ಸೆಕ್ಸ್ ಅನ್ನು ಪಡೆಯಲು ಲಂಚವಾಗಿದ್ದರೆ ಸಾಲದು.

10. ದೀರ್ಘ ಸಂಭೋಗವನ್ನು (Long Intercourse) ಇಷ್ಟಪಡುತ್ತಾರೆ. ಬೇಗ ಆಗುವ ಸ್ಖಲನವನ್ನು ದ್ವೇಷಿಸುತ್ತಾರೆ. ಸ್ಖಲನವನ್ನು ನೀವು ಸಾಕಷ್ಟು ಸಮಯ ತಡೆಹಿಡಿದು ಅವಳಿಗೆ ಸ್ವಲ್ಪ ಹೆಚ್ಚಿನ ಸಂತೋಷವನ್ನು ನೀಡಿದರೆ, ಅವಳು ಅದನ್ನು ಆನಂದಿಸುತ್ತಾಳೆ. ಮತ್ತು ನಿಮ್ಮೊಂದಿಗೆ ಉತ್ಸಾಹದಿಂದ ಸೆಕ್ಸನ್ನು ಹೊಂದುತ್ತಾಳೆ.

ಲವ್ ಮ್ಯಾರೇಜ್ ಆದ್ರೂ ಕಳ್ಳ ಸಂಬಂಧ ಇಟ್ಕೋಳ್ಳೋದ್ಯಾಕೆ ಕೆಲವರು?
 

Latest Videos
Follow Us:
Download App:
  • android
  • ios