ಈಕೆ ಮುಟ್ಟಿನ ರಕ್ತ ಕುಡೀತಾಳಂತೆ! ಏನಿವಳ ಕಥೆ?

ಮುಟ್ಟಿನ ಸಂದರ್ಭದಲ್ಲಿ ಹೊರ ಬರುವ ರಕ್ತವನ್ನು ಈಕೆ ಕುಡಿಯುತ್ತಾರಂತೆ. ಇದು ತನ್ನ ಆರೋಗ್ಯವನ್ನು ಸುಧಾರಿಸಿದೆ ಎಂದು ಹೇಳಿಕೆ ನೀಡಿದ್ದಾಳೆ. ಋತುಚಕ್ರದ ರಕ್ತವನ್ನು ಮುಖದ ಮೇಲೆ ಹಚ್ಚುತ್ತಾಳಂತೆ.

 

This woman drinks her own periods blood


ಮುಟ್ಟಿನ ಬಗ್ಗೆ ಮಾತನಾಡುವುದು ಈಗ ಮೊದಲಿನಂತೆ ನಿಷಿದ್ಧ- ಅಥವಾ ʼಟ್ಯಾಬೂʼ ಅಲ್ಲ. ಹಳೆಯ ತಲೆಮಾರಿನವರು ಸ್ವಲ್ಪ ಮುಜುಗರಪಡಬಹುದು. ಆದರೆ ತರುಣ ತರುಣಿಯರು ಓಪನ್‌ ಆಗಿ ಇದರ ಬಗ್ಗೆ ಮಾತಾಡುತ್ತಾರೆ. ಇನ್ನು ಕೆಲವರು ಮತ್ತೂ ʼಸ್ವಲ್ಪ ಅತಿʼ ಎನಿಸುವಷ್ಟು ಮುಂದೆ ಹೋಗುತ್ತಾರೆ. ಅಂಥವಳೊಬ್ಬಳ ಕತೆ ಇದು.

ಹಿಂದೆಲ್ಲಾ ಕೆಲವೊಂದು ಕಡೆಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಗುತ್ತಿತ್ತು. ಆ ಕೋಣೆಗೆ ಸರಿಯಾದ ಗಾಳಿ ಬೆಳಕು ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಮನೆಯಾಚೆ ಜಗಲಿ, ಕೊಟ್ಟಿಗೆಯಲ್ಲಿ ಇರಬೇಕಾಗಿರುತ್ತಿತ್ತು. ಮುಟ್ಟಿನ ಬಳಲಿಕೆಯಿಂದ ಸುಸ್ತಾದ ಸ್ತ್ರೀ ಆ ಕೋಣೆಗಳ ಅನಾರೋಗ್ಯಕರ ವ್ಯವಸ್ಥೆಯಿಂದಲೇ ಬೇರೆ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಳು. ಆದರೆ ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಹೆಣ್ಣುಮಕ್ಕಳು ನಿರ್ಭಯವಾಗಿ ಸ್ನೇಹಿತೆ/ತೆಯರ ಜೊತೆ ಈ ಬಗ್ಗೆ ಮಾತನಾಡುತ್ತಾರೆ. ಕವಿತೆ- ಕತೆ ಬರೆಯುತ್ತಾರೆ. ಚಿತ್ರ ಬಿಡಿಸುತ್ತಾರೆ. ಇಲ್ಲೊಬ್ಬಳು ಋತುಸ್ರಾವದ ರಕ್ತ, ವೇದನೆಯನ್ನು ಕಲೆಯಾಗಿ ಮಾರ್ಪಡಿಸಿದ್ದಾಳೆ. ಈಕೆ ಮುಟ್ಟಿನ ರಕ್ತವನ್ನು ಕುಡಿಯುತ್ತಾಳಂತೆ!

 

ಈ ಮಾತು ಜನರನ್ನು ಬೆಚ್ಚಿಬೀಳಿಸಬಹುದು, ಅಸಹ್ಯ ಹುಟ್ಟಿಸಬಹುದು. ಆದರೆ ಇದು ನಿಜ. ಎಲ್ಲವೂ ಸೌಂದರ್ಯವೃದ್ಧಿಗಾಗಿ. ಸ್ಪೇನ್‌ನ 30 ವರ್ಷದ ಮಹಿಳೆ ಹೀಗೆ ಮಾಡುತ್ತಾಳಂತೆ. ಇವಳ ಹೆಸರು ಜಾಸ್ಮಿನ್ ಅಲಿಸಿಯಾ ಕಾರ್ಟರ್. ಮುಟ್ಟಿನ ಸಂದರ್ಭದಲ್ಲಿ ಹೊರ ಬರುವ ರಕ್ತವನ್ನು ಈಕೆ ಕುಡಿಯುತ್ತಾರಂತೆ. ಇದು ತನ್ನ ಆರೋಗ್ಯವನ್ನು ಸುಧಾರಿಸಿದೆ ಎಂದು ಹೇಳಿಕೆ ನೀಡಿದ್ದಾಳೆ. ಋತುಚಕ್ರದ ರಕ್ತವನ್ನು ಮುಖದ ಮೇಲೆ ಹಚ್ಚುತ್ತಾಳಂತೆ. ಅದು ಮುಖದ ಸೌಂದರ್ಯಕ್ಕಾಗಿ. ಅಂದಹಾಗೆ ಈಕೆ ಕಲಾವಿದೆ. ಪೀರಿಯಡ್ ಪೇಂಟಿಂಗ್ಸ್ ರಚಿಸಲು ಮುಟ್ಟಿನ ರಕ್ತವನ್ನು ಬಳಸುವುದಾಗಿ ಕೂಡಾ ಹೇಳಿಕೊಂಡಿದ್ದಾಳೆ.

ಈಕೆ ಒಂದು ಮಗುವಿನ ತಾಯಿ. ಮಹಿಳೆಯರಿಗೆ ಅವರ ಸಂಪೂರ್ಣ ಋತುಚಕ್ರವನ್ನು, ಅದರ ಅಂತರ್ಗತ ಸೃಜನಶೀಲತೆಯನ್ನು ಅರ್ಥಮಾಡಿಕೊಳ್ಳಲು ತರಬೇತಿ ನೀಡುವ ಮಾರ್ಗದರ್ಶಕಳಾಗಿಯೂ ಕೆಲಸ ಮಾಡುತ್ತಾಳೆ. ಮಹಿಳೆಯರ ರಕ್ತ ಬೆಲೆ ಬಾಳುವಂಥದು. ಅದು ಒಳಗಿದ್ದಾಗಲೂ ಹೊರಗೆ ಬಂದಾಗಲೂ ಮೌಲ್ಯಯುತ. ಆದರೆ ಮಹಿಳೆಯರು ಸಾಕಷ್ಟು ಮನ್ನಣೆಯನ್ನು ಅದಕ್ಕೆ ಕೊಡುವುದಿಲ್ಲ ಎಂದು ಕಾರ್ಟರ್ ಅಭಿಪ್ರಾಯ.

ಇಲ್ಲಿ ಅತಿಥಿಗಳ ಜೊತೆ ಹೆಂಡ್ತಿಯನ್ನು ಮಲಗಿಸಿ, ಗಂಡ ಹೊರಗೆ ಮಲಗ್ತಾನೆ
 

ಮುಟ್ಟಿನ ರಕ್ತದಲ್ಲಿ ಪೋಷಕಾಂಶಗಳು, ಕಬ್ಬಿಣಾಂಶ ಮತ್ತು ಜೀವಪೋಷಕ ಅಂಶಗಳನ್ನು ಒಳಗೊಂಡಿದೆ. ಇವುಗಳನ್ನು ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಬಳಸಲು ಹಲವಾರು ಮಾರ್ಗಗಳಿವೆ ಎಂದು ಆಸ್ಮಿನ್ ಹೇಳುತ್ತಾರೆ. ಈಕೆ ಋತುಚಕ್ರದ ರಕ್ತ ಹಿಡಿದಿಡಲು ಬಳಸುವ ಕಪ್‌ನಲ್ಲಿ ರಕ್ತವನ್ನು ಸಂಗ್ರಹಿಸಿ ಒಂದು ಸಿಪ್ ಸೇವಿಸುತ್ತಾಳೆ. ನಂತರ ಬ್ರಷ್ ಅಥವಾ ಬೆರಳುಗಳಿಂದ ರಕ್ತವನ್ನು ‘ಫೇಸ್ ಮಾಸ್ಕ್’ ಆಗಿ ಮುಖಕ್ಕೆ ಹಚ್ಚುತ್ತಾಳಂತೆ. ಮುಟ್ಟಿನ ಫೇಸ್ ಮಾಸ್ಕ್ ಮಾಡುತ್ತಾಳೆ. ಇದು ಚರ್ಮಕ್ಕೆ ಉತ್ತಮವಂತೆ. ಇದರಿಂದ ಫೀಲ್‌ ಗುಡ್‌ ಭಾವನೆ ಬರುತ್ತದೆ ಹಾಗೂ ಉಲ್ಲಾಸಕರವಾಗಿರುತ್ತದೆ ಎಂಬುದು ಕಾರ್ಟರ್ ಹೇಳಿಕೆ.

ಈಕೆ ಕಲಾವಿದೆ ಎಂದು ಹೇಳಿದೆನಷ್ಟೆ? ಈಕೆಯ ಪೇಂಟಿಂಗ್‌ಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಈಕೆ ಸಾಮಾನ್ಯ ಚಿತ್ರಗಳನ್ನು ಬಿಡಿಸುತ್ತಾಳೆ, ಮುಟ್ಟಿನ ರಕ್ತದಲ್ಲೂ ಬಿಡಿಸುತ್ತಾಳೆ. ಅವುಗಳನ್ನು ಚಿತ್ರಪ್ರದರ್ಶನಗಳಲ್ಲೂ ಇಡುತ್ತಾಳೆ. ಆಕೆಯ ಇನ್‌ಸ್ಟಗ್ರಾಂ ಅಕೌಂಟ್‌ಗೆ ಹೋದರೆ ನೀವೇ ಆಕೆಯ ಚಿತ್ರಗಳನ್ನು ನೋಡಬಹುದು. ಆಕೆ ಬಿಡಿಸುವ ಮುಟ್ಟಿನ ರಕ್ತದ ಚಿತ್ರಗಳಿಗೂ ಬೇಡಿಕೆ ಇದೆಯಂತೆ. ನಮ್ಮ ಸಮಾಜ ಮುಟ್ಟು ಅರ್ಥಾತ್‌ ಪೀರಿಯಡ್ಸ್‌ ಬಗ್ಗೆ ಇನ್ನಷ್ಟು ಓಪನ್‌ ಆಗಬೇಕು, ಮುಕ್ತವಾಗಬೇಕು ಎಂಬುದು ಆಕೆಯ ಅಭಿಪ್ರಾಯ.

83 ವರ್ಷದ ಬಳಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಎಂಎ ಪದವಿ ಪತ್ರ ಪಡೆದ 105 ವರ್ಷದ ಅಜ್ಜಿ!
 

Latest Videos
Follow Us:
Download App:
  • android
  • ios