ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?

ಸಂಪುಟ ಸಸ್ಪೆನ್ಸ್ ಮುಂದುವರೆದಿರುವಾಗಲೇ ತ್ರಿವಳಿ ಡಿಸಿಎಂ ಸೃಷ್ಟಿಯ ಹಿಂದಿನ ಲಾಭದ ಸೂತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಂದ ಕಾಂಗ್ರೆಸ್‌ಗೆ ನಿಜವಾಗಿಯೂ ಲಾಭ ಆಗುತ್ತೆ..? ಏನಿದು ಲೆಕ್ಕಾಚಾರ..? 

Share this Video
  • FB
  • Linkdin
  • Whatsapp

ಸಚಿವ ಸಂಪುಟ ವಿಸ್ತರಣೆಗೆ ಒಂದಾದ ಮೇಲೆ ಒಂದ್ರಂತೆ ವಿಘ್ನಗಳು ಎದುರಾಗ್ತಲೇ ಇವೆ. ಬುಧವಾರ ನೂರಕ್ಕೇ ನೂರು ಕ್ಯಾಬಿನೆಟ್ ಫೈನಲ್ ಆಗ್ಬೋದು ಎನ್ನುವ ನಿರೀಕ್ಷೆಯಲ್ಲಿದ್ರು ಸಚಿವಾಕಾಂಕ್ಷಿಗಳು. ಆದ್ರೀಗ ಅವರ ಆಸೆ, ನಿರೀಕ್ಷೆ ಇನ್ನೂ ಈಡೇರಿಲ್ಲ. ಕಡೆ ಕ್ಷಣದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಮತ್ತೊಂದು ತಿರುವು ಸಿಕ್ಕಿದೆ. ಈ ಮಧ್ಯೆ ಕನಕಾಧಿಪತಿ ಮಂತ್ರಿಮಂಡಲ ಹೇಗಿರಬಹುದು? ಯಾವ್ಯಾವ ಲೆಕ್ಕಾಚಾರದಲ್ಲಿ ಯಾರ್ಯರಿಗೆ ಮಂತ್ರಿಭಾಗ್ಯ ದೊರಕಬಹುದು? ಆಪ್ತರ ಬೆನ್ನಿಗೆ ಕಟಿಬದ್ಧವಾಗಿ ನಿಂತಿರುವ ಸಿದ್ದರಾಮಯ್ಯ. ಫ್ರೀ ಹ್ಯಾಂಡ್ ಬಯಸ್ತಾಯಿರುವ ಡಿ.ಕೆ.ಶಿವಕುಮಾರ್. ಪಟ್ಟು, ಬಿಗಿಪಟ್ಟುಗಳ ಮಧ್ಯೆ ಫೈನಲ್ ಪಟ್ಟಿಯ ಲೆಕ್ಕಾಚಾರಗಳೇನು.?

ಹೀಗೆ ಸಂಪುಟ ಸಸ್ಪೆನ್ಸ್ ಮುಂದುವರೆದಿರುವಾಗಲೇ ತ್ರಿವಳಿ ಡಿಸಿಎಂ ಸೃಷ್ಟಿಯ ಹಿಂದಿನ ಲಾಭದ ಸೂತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಂದ ಕಾಂಗ್ರೆಸ್‌ಗೆ ನಿಜವಾಗಿಯೂ ಲಾಭ ಆಗುತ್ತೆ..? ಏನಿದು ಲೆಕ್ಕಾಚಾರ..?

Related Video