ಈ ದೇವಿ ನೈವೇದ್ಯಕ್ಕೆ ಕೇಳೊದು ಮದ್ಯ, ಸಿಗರೇಟ್!

ಈ ದೇವಿಗೆ ನೈವೇದ್ಯ ಬೇಡವಂತೆ..! ಚೌಡೇಶ್ವರಿ ದೇವಿಗೆ ಬೇಕಂತೆ ಮದ್ಯ, ಸಿಗರೇಟು..!ಮದ್ಯ, ಸಿಗರೇಟು ಅರ್ಪಿಸಿದ್ರೆ ಇಷ್ಟಾರ್ಥ ಸಿದ್ಧಿ..! ದೇವಿಗೆ ಮದ್ಯ ಕುಡಿಸಿ ಹರಕೆ ಸಲ್ಲಿಸುವ ಭಕ್ತರು ಪ್ರಸಾದ ರೂಪದಲ್ಲಿ ಮದ್ಯ ಸೇವಿಸುವ ಭಕ್ತರು 
 

Share this Video
  • FB
  • Linkdin
  • Whatsapp

ಬೆಳಗಾವಿ(ಜು.3):  ಸಾಮಾನ್ಯವಾಗಿ ದೇವರಿಗೆ ನೈವೇದ್ಯ ಅರ್ಪಿಸೋದನ್ನ ನೋಡಿದ್ದೇವೆ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ದೇವರಿಗೆ ಮದ್ಯ, ಸಿಗರೇಟು ಅರ್ಪಿಸಲಾಗುತ್ತೆ. ಗೋಕಾಕ್ ಪಟ್ಟಣದ ಚೌಡೇಶ್ವರಿ ದೇವಿಗೆ ಮದ್ಯದ ಬಾಟಲಿ, ಸಿಗರೇಟು ಇಟ್ಟು ಪೂಜೆ ಮಾಡಲಾಗುತ್ತೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಕ್ತರು ತಾವು ತಂದ ಮದ್ಯವನ್ನು ದೇವಿಗೆ ಕುಡಿಸಿ, ಸಿಗರೇಟು ಸೇದಿಸುವ ಮೂಲಕ ಹರಕೆ ಸಲ್ಲಿಸುತ್ತಾರೆ. ಚೌಡೇಶ್ವರಿ ದೇವಿಗೆ ಈ ರೀತಿ ಮಾಡುವುದರಿಂದ ಇಷ್ಟಾರ್ಥ ನೆರವೇರಿಸುತ್ತಾಳೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಮಂಗಳವಾರ, ಶುಕ್ರವಾರ ಭಕ್ತರು ಆಗಮಿಸಿದ ದೇವಿಗೆ ಮದ್ಯ, ಸಿಗರೇಟು ಅರ್ಪಿಸುತ್ತಾರೆ. ಬಳಿಕ ಪ್ರಸಾದ ರೂಪದಲ್ಲಿ ಮದ್ಯ ಸೇವಿಸುತ್ತಾರೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video