Asianet Suvarna News Asianet Suvarna News

ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

ಕರ್ನಾಟಕ ಜಿಲ್ಲಾ ಸುದ್ದಿ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸೇರಿದಂತೆ ಕ್ರೀಡಾ, ಸಿನಿಮಾ, ಉದ್ಯಮ, ಉದ್ಯೋಗ ಹಾಗೂ ಆಟೋಮೊಬೈಲ್, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಆಗಸ್ಟ್ 30ರ ಟಾಪ್ 10 ಸುದ್ದಿಗಳು

Karnataka District To International News Top 10 Stories Of August 30th
Author
Bangalore, First Published Aug 30, 2019, 5:08 PM IST

Top 10 Stories Of 30th August 2019

1. ಮುಂದುವರಿದ ಬ್ಯಾಂಕ್ ಗಳ ವಿಲೀನ ಪರ್ವ; ಈ ಬಾರಿ ಕಾರ್ಪ್, ಸಿಂಡಿಕೇಟ್, ಕೆನರಾ

Karnataka District To International News Top 10 Stories Of August 30th

ನಾಲ್ಕು ಹಂತಗಳಲ್ಲಿ 10 ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕದಲ್ಲಿ ಹುಟ್ಟಿದ 3 ರಾಷ್ಟ್ರೀಕೃತ ಬ್ಯಾಂಕ್‌ಗಳು ಇದರಲ್ಲಿ ಸೇರಿವೆ.

  1. ಪಂಜಾಬ್ ನ್ಯಾಶನಲ್ ಬ್ಯಾಂಕ್+ ಓರಿಯಂಟಲ್ ಬ್ಯಾಂಕ್+ ಯುನೈಟೆಡ್ ಬ್ಯಾಂಕ್
  2. ಯೂನಿಯನ್ ಬ್ಯಾಂಕ್+ ಆಂಧ್ರ ಬ್ಯಾಂಕ್ +ಕಾರ್ಪೊರೇಶನ್ ಬ್ಯಾಂಕ್
  3. ಕೆನರಾ ಬ್ಯಾಂಕ್ +ಸಿಂಡಿಕೇಟ್ ಬ್ಯಾಂಕ್
  4. ಇಂಡಿಯನ್ ಬ್ಯಾಂಕ್ +ಅಲಹಾಬಾದ್ ಬ್ಯಾಂಕ್  

2. ಪ್ಲಾಸ್ಟಿಕ್ ಬಿಟ್ಹಾಕಿ, ಹಳೇ ಫ್ಯಾಷನ್‌ ಆದರೂ ಬಟ್ಟೆಚೀಲ ಬಳಸಿ: ಅಮಿತ್ ಶಾ

Karnataka District To International News Top 10 Stories Of August 30th

ಮಾಲಿನ್ಯ ತಡೆದು ಪರಿಸರದ ರಕ್ಷಣೆಗಾಗಿ ಜನತೆ ಹಳೇ ಮಾದರಿಯ ಹಾಗೂ ಹೆಚ್ಚು ಬಾಳಿಕೆ ಬರುವ ಬಟ್ಟೆಗಳ ಬ್ಯಾಗ್‌ ಮೊರೆ ಹೋಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹಿಳೆಯರಿಗೆ ಕರೆ ಕೊಟ್ಟಿದ್ದಾರೆ. ಬಟ್ಟೆಯ ಚೀಲಗಳು ಹಳೇ ಮಾದರಿ ಫ್ಯಾಷನ್‌ ಆಗಿರಬಹುದು. ಆದರೆ, ಇಂಥ ಕ್ರಮಗಳಿಂದ ಪ್ಲಾಸ್ಟಿಕ್‌ ಮಾಲಿನ್ಯದಿಂದ ಭೂಮಿಯನ್ನು ರಕ್ಷಿಸಬಹುದು. ಅಲ್ಲದೆ, ಒಂದೇ ಬಾರಿ ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಉತ್ಪಾದನೆ ಸ್ಥಗಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದಿದ್ದಾರೆ.

'ಕಾಶ್ಮೀರ ಯಾವಾಗ ಪಾಕ್‌ ಭಾಗವಾಗಿತ್ತು?, ಪಾಕಿಸ್ತಾನವೇ ಭಾರತದ ಭಾಗ'

Karnataka District To International News Top 10 Stories Of August 30th

370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಲಡಾಖ್‌ಗೆ ಭೇಟಿ ನೀಡಿ, ಡಿಆರ್‌ಡಿಒ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ರಾಜನಾಥ್ ಸಿಂಗ್ ಕಾಶ್ಮೀರ ಎಂದು ಅಳುತ್ತಿರುವ ಪಾಕಿಸ್ತಾನಕ್ಕೆ ನಾನೊಂದು ಕೇಳಬಯಸುತ್ತೇನೆ. ಕಾಶ್ಮೀರ ಯಾವಾಗ ಪಾಕಿಸ್ತಾನದ ಭಾಗವಾಗಿತ್ತು. ಪಾಕಿಸ್ತಾನವೇ ಭಾರತದ ಭಾಗವಾಗಿತ್ತು. ಸತ್ಯ ಏನೆಂದರೆ, ಗಿಲ್ಗಿಟ್‌-ಬಾಲ್ಟಿಸ್ತಾನ ಸೇರಿದಂತೆ ಇಡೀ ಪಾಕ್‌ ಆಕ್ರಮಿತ ಕಾಶ್ಮೀರ ಸದ್ಯ ಪಾಕಿಸ್ತಾನದ ಅಕ್ರಮ ವಶದಲ್ಲಿದೆ. ಇಡೀ ಆಕ್ರಮಿತ ಕಾಶ್ಮೀರ ಭಾರತದ ಭಾಗ ಎಂದು 1994ರಲ್ಲಿ ಸಂಸತ್ತಿನಲ್ಲಿ ನಿರ್ಣಯವೂ ಅಂಗೀಕಾರವಾಗಿದೆ ಎಂದು ಹೇಳಿದರು.

ಬೆಳಗಾವಿ: ಸರ್ಕಾರ ಬದಲಾದರೂ ಇಲ್ಲಿ ಮಾತ್ರ ಈಗಲೂ ಎಚ್‌ಡಿಕೆ ಸಿಎಂ..!

Karnataka District To International News Top 10 Stories Of August 30th
ಜನರಿಗೆ ಕ್ಷಣ ಕ್ಷಣದ ಅಪ್‌ಡೇಟ್‌ ಕೊಡುವುದು ಇರಲಿ, ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕನಿಷ್ಠ ವಿವೇಚನೆಯನ್ನೂ ತಾಲೂಕು ಆಡಳಿತ ಹೊಂದಿಲ್ಲ. ಇದಕ್ಕೆ ಇಲ್ಲಿನ ಮಿನಿವಿಧಾನ ಸೌಧದ ಮುಂಭಾಗ ರಾರಾಜಿಸುತ್ತಿರುವ ಜಾಹೀರಾತು ಫಲಕವೇ ಸಾಕ್ಷಿಯಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರ್ಕಾರ ಆಡಳಿತದಲ್ಲಿದ್ದಾಗ ಅಳವಡಿಸಿದ್ದ ಬೃಹತ್‌ ಜಾಹೀರಾತು ಫಲಕವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳಾದರೂ ತೆರವುಗೊಳಿಸಿಲ್ಲ. ಇದರಿಂದ ಮುಗ್ಧ ಹಳ್ಳಿ ಜನರಿಗೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂಬ ಕಾಳಜಿಯನ್ನೂ ಆಡಳಿತ ತೋರಿಸುತ್ತಿಲ್ಲ.

'ಕನ್ನಡ ಕೋಗಿಲೆ' ಖಾಸಿಮ್‌ಗೆ ಊರಿನವರಿಂದ 25 ಸಾವಿರ ರೂ. ದಂಡ; ಕೊಟ್ಟ ಕಾರಣ ಅಚ್ಚರಿ!

Karnataka District To International News Top 10 Stories Of August 30th

’ಕನ್ನಡ ಕೋಗಿಲೆ’ ಸೀಸನ್-2 ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಖಾಸಿಂ ಅಲಿ ಅದ್ಭುತವಾದ ಧ್ವನಿಯಿಂದ ಇಡೀ ಕರ್ನಾಟಕವೇ ತಮ್ಮತ್ತ ನೋಡುವಂತೆ ಮಾಡಿದ ಪ್ರತಿಭಾನ್ವಿತ ಗಾಯಕ. ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸ್ಪರ್ಧಿಗಳು ತಮ್ಮ ಹುಟ್ಟೂರಿನ ಬಗ್ಗೆ ಮಾತನಾಡುವುದು ಸಹಜ. ಆದರೆ ಖಾಸಿಮ್ ಕಾರ್ಯಕ್ರಮದಲ್ಲಿ ತಮ್ಮ ಹುಟ್ಟೂರಿನ ಹೆಸರು ಹೇಳಿಲ್ಲ ಹಾಗೂ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪವಿದೆ. ಪ್ರತಿ ಎಪಿಸೋಡಿನಲ್ಲಿ ನಾನು ನನ್ನ ಊರಿನ ಬಗ್ಗೆ ಮಾತನಾಡಿದ್ದು ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಖಾಸಗಿ ವಾಹಿನಿವೊಂದರಲ್ಲಿ ಹೇಳಿದ್ದಾರೆ. ಮಾಡಿದ ಸಣ್ಣ ತಪ್ಪಿಗೆ ಊರಿನಿಂದ ಹೊರ ಹಾಕುವ ನಿರ್ಧಾರ ಮಾಡಿದ್ದು ಖಾಸಿಮ್ ಹಾಗೂ ಅವರ ತಂದೆ ಇದಕ್ಕೆ ಕ್ಷಮೆ ಕೇಳಿದ್ದಾರೆ ಹಾಗೂ 25 ಸಾವಿರ ರೂ ದಂಡ ಕಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ವಿದಾಯ ನಿರ್ಧಾರ ಬದಲು; 2 ತಿಂಗಳ ಬಳಿಕ U ಟರ್ನ್ ಹೊಡೆದ ರಾಯುಡು!

Karnataka District To International News Top 10 Stories Of August 30th

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೇ ಬೇಸರಗೊಂಡು ಆತುರದಲ್ಲಿ ವಿದಾಯ ಪ್ರಕಟಿಸಿದ ಹೈದರಾಬಾದ್ ಕ್ರಿಕೆಟಿಗ ಅಂಬಾಟಿ ರಾಯುಡು ಇದೀಗ ಯು ಟರ್ನ್ ಹೊಡೆದಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್‌ಗೂ ಲಭ್ಯವಿದ್ದೇನೆ ಎಂದು ರಾಯುಡು ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ವಿದಾಯದಿಂದ ಹೊರಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಂಪ್ಯೂಟರ್ ಕೆಲಸ ಇನ್ನೂ ಸುಲಭ; ಕಿಂಗ್‌ಸಾಫ್ಟ್ ತುಂಬುತ್ತೆ ಬಲ!

Karnataka District To International News Top 10 Stories Of August 30th

ಸಾಫ್ಟ್‌ವೇರ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಕಿಂಗ್‌ಸಾಫ್ಟ್  ಕಂಪನಿಯು WPS Office 2020 ಸಾಫ್ಟ್ ವೇರನ್ನು ಬಿಡುಗಡೆ ಮಾಡಿದೆ. ಮೂಲಕ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ.  WPS Office 2020 ಇತ್ತೀಚಿನ ಅಂತಾರಾಷ್ಟ್ರೀಯ ಆವೃತ್ತಿಯಾಗಿದ್ದು, ಆಲ್-ಇನ್-ಒನ್ ಸಾಫ್ಟ್‌ವೇರ್ ಸೂಟ್ ಆಗಿದೆ. WPS Office ಈಗಾಗಲೇ ಭಾರತದಲ್ಲಿ  23 ದಶಲಕ್ಷ ಬಳಕೆದಾರರನ್ನು ಹೊಂದಿದೆ.  

4 ಸಾವಿರ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Karnataka District To International News Top 10 Stories Of August 30th

ಬಿಬಿಎಂಪಿ ಘನತ್ಯಾಜ್ಯ ವಿಭಾಗದಲ್ಲಿ ಖಾಲಿ ಇರುವ ‘ಡಿ’ಗ್ರೂಪ್‌ನ ನಾಲ್ಕು ಸಾವಿರ ಪೌರಕಾರ್ಮಿಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದ್ದು, ಸೆ.9ರಿಂದ ಅ.9ರ ವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ನಿಯಮ ಉಲ್ಲಂಘಿಸಬೇಡಿ ಎಂದ ಸಾರಿಗೆ ಸಚಿವರಿಂದಲೇ ಸಿಗ್ನಲ್ ಜಂಪ್!

Karnataka District To International News Top 10 Stories Of August 30th

ರಸ್ತೆಯಲ್ಲಿ ಸಿಸಿಟಿ ಅಳವಡಿಸಿ, ಯಾರೂ ಕೂಡ ನಿಯಮ ಉಲ್ಲಂಘಿಸಬಾರದು ಎಂದು ತಿಳಿ ಹೇಳುತ್ತಿದ್ದ ಸಾರಿಗೆ ಸಚಿವರೆ ಸಿಗ್ನಲ್ ಜಂಪ್ ಮಾಡಿದ ಘಟನೆ ನಡೆದಿದೆ. ಜನರಲ್ಲಿ ಜಾಗೃತಿ ಮೂಡಿಸಿ ಕೊನೆಗೆ ದಂಡ ಕಟ್ಟಿದ ಸಾರಿಗೆ ಸಚಿವರ ಕತೆ ಇಲ್ಲಿದೆ.

ಆಗಸ್ಟ್ 29ರ ಟಾಪ್ 10 ಸುದ್ದಿಗಳು ಇಲ್ಲಿವೆ
 

Follow Us:
Download App:
  • android
  • ios