ಕಂಪ್ಯೂಟರ್ ಕೆಲಸ ಇನ್ನೂ ಸುಲಭ; ಕಿಂಗ್‌ಸಾಫ್ಟ್ ತುಂಬುತ್ತೆ ಬಲ!
- ಭಾರತದಲ್ಲಿ ಕಿಂಗ್‌ಸಾಫ್ಟ್ WPS Office 2020 ಬಿಡುಗಡೆ
- ವಿಂಡೋಸ್, ಆಂಡ್ರಾಯ್ಡ್, ಈಒಎಸ್, ಲೈನಕ್ಸ್ ಗೆ ಪೂರಕ!
- ಈ ಒನ್‌ಸ್ಟಾಪ್ ಆಫೀಸ್ ಉಚಿತ ಮತ್ತು ಪ್ರೀಮಿಯಂ ಆವೃತ್ತಿಗಳಲ್ಲಿ ಲಭ್ಯ!
ಸಾಫ್ಟ್‌ವೇರ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಕಿಂಗ್‌ಸಾಫ್ಟ್ ಕಂಪನಿಯು WPS Office 2020 ಸಾಫ್ಟ್ ವೇರನ್ನು ಬಿಡುಗಡೆ ಮಾಡಿದೆ. ಮೂಲಕ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ.
WPS Office 2020 ಇತ್ತೀಚಿನ ಅಂತಾರಾಷ್ಟ್ರೀಯ ಆವೃತ್ತಿಯಾಗಿದ್ದು, ಆಲ್-ಇನ್-ಒನ್ ಸಾಫ್ಟ್‌ವೇರ್ ಸೂಟ್ ಆಗಿದೆ. WPS Office ಈಗಾಗಲೇ ಭಾರತದಲ್ಲಿ 23 ದಶಲಕ್ಷ ಬಳಕೆದಾರರನ್ನು ಹೊಂದಿದೆ.
200 ದೇಶಗಳಲ್ಲಿ ಕಚೇರಿ ಹೊಂದಿರುವ ಕಿಂಗ್ ಸಾಫ್ಟ್ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುತ್ತಿದೆ. ವಿಂಡೋಸ್, ಆಂಡ್ರಾಯ್ಡ್, ಈಒಎಸ್, ಲೈನಕ್ಸ್ ಪೂರಕವಾದ ಸಾಫ್ಟ್‌ವೇರ್‌ಗಳಿಗೆ ಸೇವೆಗಳನ್ನು ಕಿಂಗ್ ಸಾಫ್ಟ್ ಅಭಿವೃದ್ಧಿಪಡಿಸುತ್ತಿದೆ. ಈ ಒನ್‌ಸ್ಟಾಪ್ ಆಫೀಸ್ ಉಚಿತ ಮತ್ತು ಪ್ರೀಮಿಯಂ ಆವೃತ್ತಿಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ | ವಿಶೇಷ ಕ್ಯಾಮೆರಾ ಇರುವ ಮೋಟೋರೋಲ ಹೊಸ ಫೋನ್; ಆ.30ಕ್ಕೆ ಸೇಲ್ ಶುರು!
WPS Office 2020 ಅನ್ನು ಹೊಸ ಪೀಳಿಗೆಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಫ್ರೀಲ್ಯಾನ್ಸರ್‌ಗಳ ಹುಡುಕುತ್ತಿರುವ ಟೂಲ್‌ಗಳನ್ನು ನೀಡುವ ಮೂಲಕ ಅವರ ಅವಶ್ಯಕತೆಗಳನ್ನು ಪೂರೈಸಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ತಯಾರಿಸಲಾಗಿದೆ. ಈ ಸಾಫ್ಟ್‌ವೇರ್ ಅನ್ನು ವಿಶೇಷವಾಗಿ ಆ್ಯಪಲ್ ಡಿವೈಸ್‌ಗಳು ತಡೆರಹಿತವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಎಲ್ಲಾ ಮುಖ್ಯವಾಹಿನಿಯ ಆಪರೇಟಿಂಗ್ ಸಿಸ್ಟಮ್‌ಗಳು, ಮ್ಯಾಕ್, ವಿಂಡೋಸ್, ಲೈನಕ್ಸ್, ಐಒಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಡಬ್ಲ್ಯೂಪಿಎಸ್ ಆಫೀಸ್ 2020 ಆನ್‌ಲೈನ್‌ನಲ್ಲಿ ಲಭ್ಯವಿದೆ.