ರಾಂಚಿ(ಆ.30): ರಸ್ತೆ ನಿಯಮ ಉಲ್ಲಂಘನೆ ಈಗ ಗಂಭೀರ ಅಪರಾದ. ಸೆಪ್ಟೆಂಬರ್ 1 ರಿಂದ ಟ್ರಾಫಿಕ್ ನಿಯಮ ಬದಲಾಗುತ್ತಿದೆ. ದಂಡ ಮೊತ್ತ 10 ಪಟ್ಟು ಹೆಚ್ಚಾಗಲಿದೆ. ಈ ಮೂಲಕ ರಸ್ತೆ ನಿಯಮ ಉಲ್ಲಂಘನೆ ಕಡಿಮೆ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ನಿಯಮ ಉಲ್ಲಂಘಿಸಬಾರದು ಎನ್ನುತ್ತಿದ್ದ ಸಾರಿಗೆ ಸಚಿವರೇ ಸಿಗ್ನಲ್ ಜಂಪ್ ಮಾಡಿ ಪೇಚಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ದೇಶದೆಲ್ಲಡೆ ಹೊಸ ಟ್ರಾಫಿಕ್ ನಿಯಮ; ಪ.ಬಂಗಾಳಕ್ಕೆ ಅನ್ವಯವಾಗಲ್ಲ!

ಜಾರ್ಖಂಡ್ ಸಾರಿಗೆ ಸಚಿವ ಸಿಪಿ ಸಿಂಗ್ ಕಾರು ರಾಂಚಿಯಲ್ಲಿ ರೆಡ್ ಸಿಗ್ನಲ್ ಬಿದ್ದಿದ್ದರೂ ಸಿಗ್ನಲ್ ಜಂಪ್ ಮಾಡಿದೆ. ಸಿಗ್ನಲ್‌ನಲ್ಲಿ ಅಳವಡಿಸಿರುವ ಕ್ಯಾಮರದಲ್ಲಿ ಸಿಗ್ನಲ್ ಜಂಪ್ ದಾಖಲಾಗಿದೆ. ಸಾರಿಗೆ ಸಚಿವರ ಟೊಯೊಟಾ ಫಾರ್ಚೂನ್ ಕಾರಿನ ವಿಳಾಸಕ್ಕೆ ಪೊಲೀಸರು ಇ ಚಲನ್ ರವಾನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಸಾರಿಗೆ ಸಚಿವರು 100 ರೂಪಾಯಿ ದಂಡ ಕಟ್ಟಿದ್ದಾರೆ.

ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆಗೆ ಸೆ.1ರಿಂದ ಭಾರಿ ದಂಡದ ಬರೆ

ಸಾರಿಗೆ ಸಚಿವ ಸಿಗ್ನಲ್ ಜಂಪ್ ವೇಳೆ ಸಿಪಿ ಸಿಂಗ್ ಕಾರಿನಲ್ಲಿ ಇರಲಿಲ್ಲ. ಸಚಿವರ ಡ್ರೈವರ್ ಕಚೇರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಸ್ತೆ ನಿಯಮ ಪಾಲಿಸಬೇಕು ಎಂದು ಅರಿವು ಮೂಡಿಸುತ್ತಿದ್ದ ಸಿಪಿ ಸಿಂಗ್ ತಕ್ಷಣವೇ 100 ರೂಪಾಯಿ ನೀಡಿ ದಂಡ ಕಟ್ಟಿದ್ದಾರೆ. ಇಷ್ಟೇ ಅಲ್ಲ, ಯಾರೂ ಕೂಡ ಸಿಗ್ನಲ್ ಜಂಪ್ ಸೇರಿದಂತೆ ಯಾವುದೇ ರಸ್ತೆ ನಿಯಮ ಉಲ್ಲಂಘಿಸಬಾರದು. ಕಚೇರಿ ಚಾಲಕನಿಂದ ತಪ್ಪಾಗಿದೆ. ಮುಂದೆ ಯಾವತ್ತೂ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.