Asianet Suvarna News Asianet Suvarna News

ಪ್ಲಾಸ್ಟಿಕ್ ಬಿಟ್ಹಾಕಿ, ಹಳೇ ಫ್ಯಾಷನ್‌ ಆದರೂ ಬಟ್ಟೆಚೀಲ ಬಳಸಿ: ಅಮಿತ್ ಶಾ

ಅಹಮದಾಬಾದ್‌ ನಗರಪಾಲಿಕೆ ಬುಧವಾರ ಆಯೋಜಿಸಿದ್ದ 10 ಲಕ್ಷ ಸಸಿ ನೆಡುವ ಮುಕ್ತಾಯ ಕಾರ್ಯಕ್ರಮ| ಹಳೇ ಫ್ಯಾಷನ್‌ ಆದರೂ ಬಟ್ಟೆಚೀಲ ಬಳಸಿ: ಶಾ| 

Amit Shah urges women to shun plastic bags to save environment
Author
Bangalore, First Published Aug 30, 2019, 7:57 AM IST
  • Facebook
  • Twitter
  • Whatsapp

ಅಹಮದಾಬಾದ್‌[ಆ.30]: ಮಾಲಿನ್ಯ ತಡೆದು ಪರಿಸರದ ರಕ್ಷಣೆಗಾಗಿ ಜನತೆ ಹಳೇ ಮಾದರಿಯ ಹಾಗೂ ಹೆಚ್ಚು ಬಾಳಿಕೆ ಬರುವ ಬಟ್ಟೆಗಳ ಬ್ಯಾಗ್‌ ಮೊರೆ ಹೋಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹಿಳೆಯರಿಗೆ ಕರೆ ಕೊಟ್ಟಿದ್ದಾರೆ.

ಅ.2 ರಿಂದ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ?

ಅಹಮದಾಬಾದ್‌ ನಗರಪಾಲಿಕೆ ಬುಧವಾರ ಆಯೋಜಿಸಿದ್ದ 10 ಲಕ್ಷ ಸಸಿ ನೆಡುವ ಮುಕ್ತಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಟ್ಟೆಯ ಚೀಲಗಳು ಹಳೇ ಮಾದರಿ ಫ್ಯಾಷನ್‌ ಆಗಿರಬಹುದು. ಆದರೆ, ಇಂಥ ಕ್ರಮಗಳಿಂದ ಪ್ಲಾಸ್ಟಿಕ್‌ ಮಾಲಿನ್ಯದಿಂದ ಭೂಮಿಯನ್ನು ರಕ್ಷಿಸಬಹುದು. ಅಲ್ಲದೆ, ಒಂದೇ ಬಾರಿ ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಉತ್ಪಾದನೆ ಸ್ಥಗಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.

ಪ್ಲಾಸ್ಟಿಕ್‌ ವಿರುದ್ಧ ಮೋದಿ ಸಮರ: ಅ. 2ರಂದು ಜನಾಂದೋಲನಕ್ಕೆ ಕರೆ!

ಈ ವೇಳೆ ಶಾ ಅವರು ಸಸಿ ನೆಟ್ಟರು ಹಾಗೂ 8 ಎಲೆಕ್ಟ್ರಿಕ್‌ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದರು.

Follow Us:
Download App:
  • android
  • ios