’ಕನ್ನಡ ಕೋಗಿಲೆ’ ಸೀಸನ್-2 ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಖಾಸಿಂ ಅಲಿ ಅದ್ಭುತವಾದ ಧ್ವನಿಯಿಂದ ಇಡೀ ಕರ್ನಾಟಕವೇ ತಮ್ಮತ್ತ ನೋಡುವಂತೆ ಮಾಡಿದ ಪ್ರತಿಭಾನ್ವಿತ ಗಾಯಕ. ಅದು ಎಂತಹದ್ದೇ ಹಾಡಾಗಿರಲಿ ಅದನ್ನು ಲೀಲಾಜಾಲವಾಗಿ ಹಾಡುವ ಗಾಯಕ. ಖಾಸಿಂನನ್ನು ಇಡೀ ರಾಜ್ಯವೇ ಪ್ರೀತಿಸಿದದೆ ಇವರ ಊರಿನವರು ಮಾತ್ರ ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ.

ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ ಟ್ರೋಫಿ?

 

ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸ್ಪರ್ಧಿಗಳು ತಮ್ಮ ಹುಟ್ಟೂರಿನ ಬಗ್ಗೆ ಮಾತನಾಡುವುದು ಸಹಜ. ಪ್ರತಿ ಎಪಿಸೋಡಿನಲ್ಲಿ ತಮ್ಮ ಊರಿನ ಬಗ್ಗೆ ಅಥವಾ ಊರಿಗೆ ಸಂಬಂಧಿಸಿದ ಕತೆ ಹೇಳುತ್ತಾರೆ. ಆದರೆ ಖಾಸಿಮ್ ಕಾರ್ಯಕ್ರಮದಲ್ಲಿ ತಮ್ಮ ಹುಟ್ಟೂರಿನ ಹೆಸರು ಹೇಳಿಲ್ಲ ಹಾಗೂ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪವಿದೆ.

ಲವ್ಲಿಲವ್ಲಿಯಾಗಿದ್ದಾರೆ ನೋಡಿ ’ಕನ್ನಡ ಕೋಗಿಲೆ’ ಅಖಿಲಾ ಪಜಿಮಣ್ಣು!

ಪ್ರತಿ ಎಪಿಸೋಡಿನಲ್ಲಿ ನಾನು ನನ್ನ ಊರಿನ ಬಗ್ಗೆ ಮಾತನಾಡಿದ್ದು ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಖಾಸಗಿ ವಾಹಿನಿವೊಂದರಲ್ಲಿ ಹೇಳಿದ್ದಾರೆ. ಮಾಡಿದ ಸಣ್ಣ ತಪ್ಪಿಗೆ ಊರಿನಿಂದ ಹೊರ ಹಾಕುವ ನಿರ್ಧಾರ ಮಾಡಿದ್ದು ಖಾಸಿಮ್ ಹಾಗೂ ಅವರ ತಂದೆ ಇದಕ್ಕೆ ಕ್ಷಮೆ ಕೇಳಿದ್ದಾರೆ ಹಾಗೂ 25 ಸಾವಿರ ರೂ ದಂಡ ಕಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದೆ.